ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪ್ರಾಯೋಜಕರನ್ನು ಸೆಳೆಯಲು ಬಿಸಿಸಿಐ ಹೊಸ ತಂತ್ರ

By Manjunatha
BCCI releases Indian cricket teams five year schedule

ನವ ದೆಹಲಿ, ಮಾರ್ಚ್ 13: ಪ್ರಾಯೋಜಕರನ್ನು ಮತ್ತು ಪ್ರಸಾರ ಹಕ್ಕುಗಳನ್ನು ಮಾರಲು ಬಿಸಿಸಿಐ ಹೊಸ ತಂತ್ರ ಪ್ರಯೋಗಿಸಿದ್ದು, 5 ವರ್ಷಗಳ ಟೀಂ ಇಂಡಿಯಾ ವೇಳಾಪಟ್ಟಿಯಲ್ಲಿ ಮುಂಚಿತವಾಗಿ ಬಿಡುಗಡೆ ಮಾಡಿದೆ.

2019-2023 ರವರೆಗಿನ ಭಾರತ ಕ್ರಿಕೆಟ್ ತಂಡದ ವೇಳಾಪಟ್ಟಿಯನ್ನು ಈಗಲೇ ಬಿಡುಗಡೆ ಮಾಡಿರುವ ಬಿಸಿಸಿಐ ಅದಕ್ಕೆ ಪ್ರಸಾರ ಹಕ್ಕುಗಳನ್ನು ಮತ್ತು ಪ್ರಯೋಜಕತ್ವವನ್ನು ಪಡೆದುಕೊಳ್ಳುತ್ತಿದೆ. ಪ್ರಸಾರ ಹಕ್ಕು ಪಡೆದುಕೊಳ್ಳಲು ಹರಾಜಿಗೆ ನೊಂದಾವಣಿ ಆಗಲು ಕೊನೆಯ ದಿನಾಂಕ ಇದೇ ತಿಂಗಳು ಮಾರ್ಚ್ 27.

ಐಪಿಎಲ್ ಪ್ರಸಾರ ಹಕ್ಕು ಮತ್ತು ಪ್ರಾಯೋಜಕತ್ವಕ್ಕೆ ನೂಕು ನುಗ್ಗಲುಐಪಿಎಲ್ ಪ್ರಸಾರ ಹಕ್ಕು ಮತ್ತು ಪ್ರಾಯೋಜಕತ್ವಕ್ಕೆ ನೂಕು ನುಗ್ಗಲು

ಸ್ಟಾರ್ ಸಮೂಹ ಈಗಾಗಲೇ ಐಪಿಎಲ್ ಪ್ರಸಾರ ಹಕ್ಕನ್ನು ಪಡೆದುಕೊಂಡಿದೆ. ಅದರ ಜೊತೆಗೆ ಅದು ನ್ಯೂಜಿಲೆಂಡ್ ಕ್ರಿಕೆಟ್ ಸಂಸ್ಥೆಯ ಪ್ರಸಾರ ಹಕ್ಕನ್ನೂ ಪಡೆದುಕೊಂಡಿದೆ. ಸೋನಿ ಸಂಸ್ಥೆಯು ಪಾಕಿಸ್ತಾನ, ಆಸ್ಟ್ರೇಲಿಯಾ, ಪಾಕಿಸ್ತಾನ, ವೆಸ್ಟ್ ಇಂಡೀಸ್, ಜಿಂಬಾಬ್ವೆ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ತಂಡಗಳ ಪ್ರಸಾರ ಹಕ್ಕು ಪಡೆದಿದೆ. ಹಾಗಾಗಿ ಭಾರತೀಯ ಚಾನೆಲ್‌ಗಳು ಹಾಗೂ ಇನ್ನತರೆ ಹೊಸ ಚಾನೆಲ್‌ಗಳನ್ನು ಆಕರ್ಷಿಸಲು ಬಿಸಿಸಿಐ ಈ ತಂತ್ರಕ್ಕೆ ಮೊರೆ ಹೋಗಿದೆ ಎನ್ನಲಾಗಿದೆ.

ಪ್ರಸಾರ ಹಕ್ಕು ಪಡೆಯುವವರಿಗೆ ದ್ವಂದ್ವಗಳಿರದಂತೆ ಮಾಡಲು ಹಾಗೂ ಹರಾಜಿನಲ್ಲಿ ಪಾರದರ್ಶಕತೆ ತರಲೆಂದು ಈ ರೀತಿ ಮಾಡಲಾಗಿದ್ದು, ಈ ರೀತಿ ಐದು ವರ್ಷಗಳ ವೇಳಾಪಟ್ಟಿ ಬಿಡುಗಡೆ ಮಾಡಿರುವುದು ಇದೇ ಮೊದಲಾಗಿದೆ ಎಂದು ಬಿಸಿಸಿಐ ಸಿಇಓ ರಾಹುಲ್ ಜೊಹ್ರಿ ಹೇಳಿದ್ದಾರೆ.

Story first published: Tuesday, March 13, 2018, 18:17 [IST]
Other articles published on Mar 13, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X