ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮಹಿಳಾ ತಂಡಕ್ಕೆ ಟಿ20 ವಿಶ್ವಕಪ್‌ ಹಣ ಬಿಡುಗಡೆ ಮಾಡಿದ ಬಿಸಿಸಿಐ

BCCI releases T20 World Cup prize money to womens team

ನವದೆಹಲಿ: ಈ ವಾರ ಇಂಗ್ಲೆಂಡ್‌ಗೆ ಪ್ರವಾಸ ಹೋಗಿರುವ ಮಹಿಳಾ ಕ್ರಿಕೆಟ್ ತಂಡಕ್ಕೆ ಇಂಗ್ಲೆಂಡ್‌ಗೆ ತಲುಪಿದ ಕೆಲವೇ ದಿನಗಳಲ್ಲಿ ಖುಷಿಯ ಸಂಗತಿಯೊಂದು ಕೇಳಿ ಬಂದಿದೆ. ಮಹಿಳಾ ತಂಡಕ್ಕೆ ಬಾಕಿ ಉಳಿಸಿಕೊಂಡಿದ್ದ ಟಿ20 ವಿಶ್ವಕಪ್‌ ಹಣವನ್ನು ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಬಿಡುಗಡೆ ಮಾಡಿದೆ.

ಆಡಿದ ಮೊದಲ ಟೆಸ್ಟ್‌ನಲ್ಲೇ 7 ವಿಕೆಟ್ ಪಡೆದು ದಿಢೀರ್ ಅಮಾನತಾದ ಕ್ರಿಕೆಟಿಗ!ಆಡಿದ ಮೊದಲ ಟೆಸ್ಟ್‌ನಲ್ಲೇ 7 ವಿಕೆಟ್ ಪಡೆದು ದಿಢೀರ್ ಅಮಾನತಾದ ಕ್ರಿಕೆಟಿಗ!

ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಟಿ20 ವಿಶ್ವಕಪ್‌ 2020ರ ಫೈನಲ್‌ನಲ್ಲಿ ಪಾಲ್ಗೊಂಡಿದ್ದ ಭಾರತೀಯ 15 ಜನರ ತಂಡಕ್ಕೆ 9 ದಿನಗಳ ಹಿಂದೆ ಬಿಸಿಸಿಐ ಹಣ ಬಿಡುಗಡೆ ಮಾಡಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಹೇಳಿದೆ. ಟಿ20 ವಿಶ್ವಕಪ್‌ ಫೈನಲ್‌ನಲ್ಲಿ ಭಾರತ ತಂಡ ಸೋತು ರನ್ನರ್ಸ್ ಎನಿಸಿಕೊಂಡಿತ್ತು.

ಇದೇ ವರ್ಷ ಮಾರ್ಚ್‌ನಲ್ಲಿ ಭಾರತದ ಮಹಿಳಾ ತಂಡ ಮತ್ತು ದಕ್ಷಿಣ ಆಫ್ರಿಕಾ ಮಹಿಳೆಯರ ನಡುವೆ ಸರಣಿ ನಡೆದಿತ್ತು. ಟಿ20 ವಿಶ್ವಕಪ್‌ ಹಣ ಬಿಡುಗಡೆ ಮಾಡುವಾಗ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯ ಪಂದ್ಯಗಳ ಸಂಭಾವನೆಯನ್ನೂ ಬಿಸಿಸಿಐ ಬಿಡುಗಡೆ ಮಾಡಿದೆ ಎಂದು ತಿಳಿದು ಬಂದಿದೆ.

'ಸೆನಾ' ರಾಷ್ಟ್ರಗಳಲ್ಲಿ ವಿರಾಟ್ ಕೊಹ್ಲಿಯೇ ಕಿಂಗ್; ಇದು ವಿರಾಟ್ ಕೊಹ್ಲಿ ವಿಶೇಷ ದಾಖಲೆ'ಸೆನಾ' ರಾಷ್ಟ್ರಗಳಲ್ಲಿ ವಿರಾಟ್ ಕೊಹ್ಲಿಯೇ ಕಿಂಗ್; ಇದು ವಿರಾಟ್ ಕೊಹ್ಲಿ ವಿಶೇಷ ದಾಖಲೆ

'ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಎಲ್ಲಾ ಸದಸ್ಯರು ಟಿ20 ವಿಶ್ವಕಪ್‌ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ತವರಿನ ಪಂದ್ಯಗಳಿಗಾಗಿ ತಮ್ಮ ಬಹುಮಾನದ ಮೊತ್ತಕ್ಕಾಗಿ ಇನ್‌ವೈಸ್ ಅನ್ನು ಕಳುಹಿಸುವಂತೆ ಬಿಸಿಸಿಐ ಕಳೆದ ತಿಂಗಳು ಕೋರಿಕೊಂಡಿತ್ತು,' ಎಂದು ಬಿಸಿಸಿಐ ಮೂಲ ಮಾಹಿತಿ ನೀಡಿದೆ.

ಮೆಲ್ಬರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ ಮಾರ್ಚ್ 8ರ ಭಾನುವಾರ ನಡೆದಿದ್ದ ಮಹಿಳಾ ಟಿ20 ವಿಶ್ವಕಪ್‌ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಕಾದಾಡಿದ್ದವು. ಇದರಲ್ಲಿ ಆಸ್ಟ್ರೇಲಿಯಾ 85 ರನ್‌ನಿಂದ ಗೆದ್ದಿತ್ತು. ಆ ಟೂರ್ನಿ ಮುಗಿದ ಬಳಿಕ ಬಿಸಿಸಿಐ ಇದುವರೆಗೂ ಹಣ ನೀಡರಲಿಲ್ಲ. ಆದರೆ ಈಗಷ್ಟೇ ಹಣ ಬಿಡುಗಡೆ ಮಾಡಿದೆ.

Story first published: Monday, June 7, 2021, 12:56 [IST]
Other articles published on Jun 7, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X