Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Duleep Trophy 2024: ಮೊದಲ ಪಂದ್ಯವನ್ನು ಸ್ಥಳಾಂತರಿಸಿದ ಬಿಸಿಸಿಐ; ಏಕೆ, ಎಲ್ಲಿಗೆ ಗೊತ್ತಾ?

ಆಗಸ್ಟ್ 13 ಮಂಗಳವಾರ, ದುಲೀಪ್ ಟ್ರೋಫಿ ಆರಂಭಕ್ಕೂ ಮುನ್ನ ದೊಡ್ಡ ಬದಲಾವಣೆ ಆಗಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ದುಲೀಪ್ ಟ್ರೋಫಿಯ ಮೊದಲ ಪಂದ್ಯವನ್ನು ಸ್ಥಳಾಂತರ ಮಾಡಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಬೆಂಗಳೂರಿನ ಪ್ರತಿಷ್ಠಿತ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೆಪ್ಟೆಂಬರ್ 5 ರಿಂದ ದುಲೀಪ್ ಟ್ರೋಫಿಯ ಮೊದಲ ಪಂದ್ಯ ನಡೆಯಲಿದೆ. ಬಿಸಿಸಿಐ ವೇಳಾಪಟ್ಟಿಯ ಪ್ರಕಾರ, ದುಲೀಪ್ ಟ್ರೋಫಿಯ ಮೊದಲ ಪಂದ್ಯ ಆಂಧ್ರಪ್ರದೇಶದ ಅನಂತಪುರದಲ್ಲಿ ನಡೆಯಬೇಕಾಗಿತ್ತು. ಅನಂತಪುರದಿಂದ ಬೆಂಗಳೂರಿಗೆ ಪಂದ್ಯವನ್ನು ಸ್ಥಳಾಂತರಿಸಿರುವ ಬಗ್ಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಅಧ್ಯಕ್ಷ ರಘುರಾಮ್ ಭಟ್ ಖಚಿತಪಡಿಸಿದ್ದಾರೆ.

BCCI relocation first match of Duleep Trophy 2024

ದುಲೀಪ್ ಟ್ರೋಫಿಯಲ್ಲಿ ಸ್ಟಾರ್ ಆಟಗಾರರು ಭಾಗವಹಿಸುವಂತೆ ಬಿಸಿಸಿಐ ಆದೇಶ ಹೊರಡಿಸಿದೆ. ಆದ್ದರಿಂದ ಯಾವುದೇ ರೀತಿಯಲ್ಲೂ ಅಡ್ಡಿಯಾಗದಂತೆ ಬಿಸಿಸಿಐ ಮೊದಲ ಪಂದ್ಯದ ಸ್ಥಳವನ್ನು ಬೆಂಗಳೂರಿಗೆ ಬದಲಾಯಿಸಿದೆ. ಈ ಕುರಿತು ಕೆಎಸ್‌ಸಿಎ ಅಧ್ಯಕ್ಷ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಕೆಸಿಎಸ್‌ಎ ಅಧ್ಯಕ್ಷ ಹೇಳಿದ್ದೇನು?

'ನಾವು (ಕೆಸಿಎಸ್‌ಎ) ದುಲೀಪ್ ಟ್ರೋಫಿ ಪಂದ್ಯವನ್ನು ಆಯೋಜಿಸುತ್ತಿದ್ದೇವೆ. ಅನಂತಪುರವು ಬೆಂಗಳೂರಿನಿಂದ ಸುಮಾರು 220 ಕಿಲೋಮೀಟರ್ ದೂರದಲ್ಲಿದ್ದು, ಅಲ್ಲಿ ಯಾವುದೇ ವಿಮಾನ ನಿಲ್ದಾಣವಿಲ್ಲ ಎಂದು ತಿಳಿದುಬಂದಿದೆ. ಇಂತಹ ಪರಿಸ್ಥಿತಿಯಲ್ಲಿ ಆಟಗಾರರು ಅನಂತಪುರಕ್ಕೆ ತೆರಳುವುದೇ ಅಸಾಧ್ಯವಾಗಿದೆ' ಎಂದು ರಘುರಾಮ್ ಭಟ್ ಹೇಳಿದ್ದಾರೆ.

ಏನಿದು ದುಲೀಪ್ ಟ್ರೋಫಿ?

ಭಾರತದಲ್ಲಿ ನಡೆಯುವ ದೇಶೀಯ ಟೆಸ್ಟ್ ಕ್ರಿಕೆಟ್ ಟೂರ್ನಿಯೇ ದುಲೀಪ್ ಟ್ರೋಫಿ. ಈ ಟೂರ್ನಿಗೆ ಟೀಮ್ ಇಂಡಿಯಾದ ಮಾಜಿ ಆಟಗಾರ ದುಲೀಪ್‌ಸಿನ್‌ಜಿ ಅವರ ಹೆಸರನ್ನು ಇಡಲಾಗಿದೆ. ಈ ಟೂರ್ನಿಯನ್ನು ಮೊದಲ ಬಾರಿಗೆ 1961-62 ರಲ್ಲಿ ಆಡಿಸಲಾಗಿತ್ತು.

ಮೊದಲು ಈ ಟೂರ್ನಿಯಲ್ಲಿ ಒಟ್ಟು 6 ವಲಯ ತಂಡಗಳು ಆಡುತ್ತಿದ್ದವು. ಇಲ್ಲಿ ಆಯಾ ವಲಯ ತಂಡಗಳನ್ನು ಅಯಾ ಭಾಗದ ರಾಜ್ಯಗಳ ಆಟಗಾರರು ಪ್ರತಿನಿಧಿಸುತ್ತಿದ್ದರು. ಆದರೆ, ಈ ಬಾರಿ ದುಲೀಪ್ ಟ್ರೋಫಿಯಲ್ಲಿ 6 ವಲಯ ತಂಡಗಳು ಆಡುತ್ತಿಲ್ಲ. ಬದಲಿಗೆ ಬಿಸಿಸಿಐ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ನೇತೃತ್ವದ ಸಮಿತಿಯು ಟೂರ್ನಿಗೆ ವೈಯಕ್ತಿಕ ಭಾರತ ತಂಡಗಳನ್ನು (ಭಾರತ ಎ, ಬಿ, ಸಿ ಮತ್ತು ಡಿ) ಆಯ್ಕೆ ಮಾಡಿದೆ.

ದುಲೀಪ್ ಟ್ರೋಫಿಯಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಹೊರತುಪಡಿಸಿ, ಟೀಮ್ ಇಂಡಿಯಾದ ಅಗ್ರ ಆಟಗಾರರಾದ ಶುಭ್‌ಮನ್ ಗಿಲ್, ಕೆಎಲ್ ರಾಹುಲ್, ಅಕ್ಸರ್ ಪಟೇಲ್, ರವೀಂದ್ರ ಜಡೇಜಾ, ಯಶಸ್ವಿ ಜೈಸ್ವಾಲ್, ಸೂರ್ಯಕುಮಾರ್ ಯಾದವ್, ಕುಲದೀಪ್ ಯಾದವ್ ಅವರನ್ನು ಆಡುವಂತೆ ಬಿಸಿಸಿಐ ಸೂಚಿಸಿದೆ.

ಬಾಂಗ್ಲಾದೇಶ ವಿರುದ್ಧದ ಎರಡು ಟೆಸ್ಟ್‌ಗಳ ಸರಣಿಗೆ ತಂಡವನ್ನು ಆಯ್ಕೆ ಮಾಡುವ ಮೊದಲು ಆಯ್ಕೆದಾರರು ಆಟಗಾರರ ಪ್ರದರ್ಶನವನ್ನು ಮೌಲ್ಯಮಾಪನ ಮಾಡಲು ಈ ಟೂರ್ನಿ ನೆರವಾಗಲಿದೆ. ಆದರೆ, ಈ ಟೂರ್ನಿಯಿಂದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅವರಿಗೆ ವಿಶ್ರಾಂತಿ ನೀಡಲಾಗಿದೆ.

ದುಲೀಪ್ ಟ್ರೋಫಿ 2024ರ ವೇಳಾಪಟ್ಟಿ

ಸೆಪ್ಟೆಂಬರ್ 5-8: ಭಾರತ ಎ vs ಭಾರತ ಬಿ

ಸೆಪ್ಟೆಂಬರ್ 5-8: ಭಾರತ ಸಿ vs ಭಾರತ ಡಿ

ಸೆಪ್ಟೆಂಬರ್ 12-15: ಭಾರತ ಎ vs ಭಾರತ ಡಿ

ಸೆಪ್ಟೆಂಬರ್ 12-15: ಭಾರತ ಬಿ vs ಭಾರತ ಸಿ

Story first published: Tuesday, August 13, 2024, 21:10 [IST]
Other articles published on Aug 13, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+