2021ರ ಐಪಿಎಲ್‌ಗಾಗಿ ಟೆಸ್ಟ್ ಸರಣಿ ಮುಂಚಿತವಾಗಿ ನಡೆಸಲು ಇಸಿಬಿಗೆ ಬಿಸಿಸಿಐ ಕೋರಿಕೆ?!

ಲಂಡನ್: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2021ರ ಆವೃತ್ತಿ ನಡೆಸಲು ಅನುಕೂಲವಾಗುವಂತೆ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ಮುಂಚಿತವಾಗಿ ನಡೆಸುವಂತೆ ಇಂಗ್ಲೆಂಡ್ ಆ್ಯಂಡ್ ವೇಲ್ಸ್ ಕ್ರಿಕೆಟ್ ಬೋರ್ಡ್ (ಇಸಿಬಿ)ನಲ್ಲಿ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ ವಿನಂತಿಸಿಕೊಂಡಿದೆ ಎಂದು ವರದಿಯೊಂದು ಹೇಳಿದೆ.
ಕೋವಿಡ್-19ನಿಂದಾಗಿ ಮುಂದೂಡಲ್ಪಟ್ಟಿರುವ 14ನೇ ಆವೃತ್ತಿಯ ಐಪಿಎಲ್ ಅನ್ನು ಇಂಗ್ಲೆಂಡ್‌ನಲ್ಲಿ ನಡೆಸುವ ಯೋಜನೆಯಲ್ಲಿ ಬಿಸಿಸಿಐ ಇದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಹೀಗಾಗಿ ಉಳಿದಿರುವ 31 ಪಂದ್ಯಗಳನ್ನು ನಡೆಸಲು ಹೆಚ್ಚಿನ ಸಹಾಯವಾಗುವಂತೆ ಯೋಜಿತ ಟೆಸ್ಟ್ ಸರಣಿಯನ್ನು ಒಂದು ವಾರಕ್ಕೆ ಮುಂಚಿತವಾಗಿ ನಡೆಸಲು ಬಿಸಿಸಿಐ ಇಸಿಬಿಯನ್ನು ಕೋರಿಕೊಂಡಿದೆ ಎನ್ನಲಾಗಿದೆ.
ಈಗಿನ ವೇಳಾಪಟ್ಟಿಯ ಪ್ರಕಾರ ಆಗಸ್ಟ್ 4ಕ್ಕೆ ಆರಂಭಗೊಳ್ಳುವ ಭಾರತ-ಇಂಗ್ಲೆಂಡ್ ಐದು ಪಂದ್ಯಗಳ ಟೆಸ್ಟ್ ಸರಣಿ ಸೆಪ್ಟೆಂಬರ್ 14ಕ್ಕೆ ಕೊನೆಗೊಳ್ಳಲಿದೆ. ಈ ಸರಣಿಯನ್ನು ಒಂದು ವಾರ ಮುಂಚಿತವಾಗಿ ನಡೆಸಿದರೆ ಐಪಿಎಲ್ ನಡೆಸಲು ಹೆಚ್ಚಿನ ಅನುಕೂಲವಾಗಲಿದೆ.
'ಐಪಿಎಲ್ ಅನ್ನು ಪೂರ್ಣಗೊಳಿಸಲು ದಾರಿಯಾಗುವಂತೆ ಟೆಸ್ಟ್ ಸರಣಿಯನ್ನು ಮುಂಚಿತವಾಗಿ ನಡೆಸುವಂತೆ ಇಂಗ್ಲೆಂಡ್ ಆ್ಯಂಡ್ ವೇಲ್ಸ್ ಕ್ರಿಕೆಟ್ ಬೋರ್ಡ್ ಅನ್ನು ಭಾರತೀಯ ಕ್ರಿಕೆಟ್ ಬೋರ್ಡ್ ಕೋರಿಕೊಂಡಿದೆ,' ಎಂದು 'ದ ಟೈಮ್ಸ್' ವರದಿ ಮಾಡಿದೆ. ಇಂಗ್ಲೆಂಡ್‌ನಲ್ಲಿ ಭಾರತಕ್ಕೆ ಐದು ಪಂದ್ಯಗಳ ಟೆಸ್ಟ್ ಸರಣಿ ಅಲ್ಲದೆ ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ಸವಾಲೊಡ್ಡಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications