ಭವಿಷ್ಯದ ಟೆಸ್ಟ್ ತಂಡ ಕಟ್ಟಲು ವಿವಿಎಸ್ ಲಕ್ಷ್ಮಣ್ ಸಾರಥ್ಯದಲ್ಲಿ ಮಾಸ್ಟರ್ ಪ್ಲ್ಯಾನ್
ಟೀಮ್ ಇಂಡಿಯಾ ಸೀಮಿತ ಓವರ್‌ಗಳ ಫಾರ್ಮೆಟ್‌ನಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿದೆ. ಆದರೆ ಟೆಸ್ಟ್ ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ. ಈ ಪ್ರದರ್ಶನದ ಗುಣಮಟ್ಟವನ್ನು ಸುಧಾರಿಸಲು ಬಿಸಿಸಿಐ ಮಾಸ್ಟರ್ ಪ್ಲ್ಯಾನ್ ರೂಪಿಸಿಕೊಂಡಿದೆ. ಐಪಿಎಲ್‌ನಲ್ಲಿ ಆಡುತ್ತಿರುವ ಆಟಗಾರರು ಹಾಗೂ ಉಳಿದ 25 ವರ್ಷದೊಳಗಿನ ಪ್ರತಿಭಾನ್ವಿತ ಆಟಗಾರರ ಮೇಲೆ ಕಣ್ಣು ನೆಟ್ಟಿದೆ. ಅಲ್ಲದೆ ಭವಿಷ್ಯದ ಟೆಸ್ಟ್ ತಂಡವನ್ನು ಕಟ್ಟುವ ನಿಟ್ಟಿನಲ್ಲಿ ದೃಷ್ಟಿ ನೆಟ್ಟಿದೆ.
ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ತವರಿನಲ್ಲಿ ಕಂಡ ಸೋಲುಗಳ ಬಳಿಕ ತವರು ಕೂಡ ಭಾರತಕ್ಕೆ ಈಗ ಅಜೇಯವಾಗಿ ಉಳಿದಿಲ್ಲ. ಇದಕ್ಕಾಗಿ ಬಿಸಿಸಿಐ ಮಾಸ್ಟರ್ ಪ್ಲ್ಯಾನ್ ರೂಪಿಸಿಕೊಂಡಿದ್ದು ಭವಿಷ್ಯದ ಟೆಸ್ಟ್ ತಂಡವನ್ನು ರಚಿಸುವತ್ತ ಚಿತ್ತ ನೆಟ್ಟಿದೆ. ಪಿಟಿಐ ಪ್ರಕಾರ, ವಿವಿಎಸ್ ಲಕ್ಷ್ಮಣ್ ನೇತೃತ್ವದ ಸೆಂಟರ್ ಆಫ್ ಎಕ್ಸಲೆನ್ಸ್ (ಸಿಒಇ) ಹೊಸ ಪೀಳಿಗೆಯ ಮೇಲೆ ಕೇಂದ್ರೀಕರಿಸುವತ್ತ ಚಿತ್ತ ನೆಟ್ಟಿದೆ. ಇದಕ್ಕಾಗಿ ಹೊಸ ಯೋಜನೆಯನ್ನು ರೂಪಿಸಿಕೊಂಡಿದೆ.

ಎಷ್ಟು ಆಟಗಾರರನ್ನು ಬಿಸಿಸಿಐ ಗುರಿಯಾಗಿಸಲಿದೆ?
ಐಪಿಎಲ್ ಮುಗಿದ ಬಳಿಕ ಜೂನ್ ಮತ್ತು ಜುಲೈನಲ್ಲಿ ನಾಲ್ಕು ದಿನಗಳ ಇಂಟ್ರಾ-ಸಿಒಇ ಪಂದ್ಯಾವಳಿಯನ್ನು ಆಯೋಜಿಸಲು ತೀರ್ಮಾನಿಸಿದೆ. ಈ ಪಂದ್ಯಗಳಲ್ಲಿ ಆಯುಷ್ ಮ್ಹಾತ್ರೆ ಮತ್ತು ವೈಭವ್ ಸೂರ್ಯವಂಶಿ ಸೇರಿದಂತೆ ಯುವ ಭರವಸೆಯ ಆಟಗಾರರು ಈ ಪಂದ್ಯಗಳನ್ನು ಆಡಲಿದ್ದಾರೆ. ಈ ಪಂದ್ಯಾವಳಿಯಲ್ಲಿ 25 ವರ್ಷದೊಳಗಿನ 64 ಆಟಗಾರರು ಈ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಈ ಆಟಗಾರರನ್ನು ತಲಾ 16 ಸದಸ್ಯರ ನಾಲ್ಕು ತಂಡಗಳಾಗಿ ವಿಂಗಡಿಸಲಾಗಿದೆ.
ಯಾರನ್ನೆಲ್ಲಾ ಬಿಸಿಸಿಐ ಟಾರ್ಗೆಟ್ ಮಾಡಲಿದೆ?
ಈ ಆಟಗಾರರು ಎರಡು ಭಿನ್ನ ವಿಭಿನ್ನ ಪಿಚ್‌ಗಳ ಮೇಲೆ ಪಂದ್ಯವನ್ನು ಆಡಲಿದ್ದಾರೆ. ಈ ಆಟಗಾರರು ಭಾರತ "ಎ" ಹಾಗೂ ಅಂಡರ್ 19, ಅಂಡರ್ 25 ತಂಡದ ಭಾಗವಾಗಿರುತ್ತಾರೆ. ಹಿರಿಯ ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ಮತ್ತು ಮುಖ್ಯ ಕೋಚ್ ಗೌತಮ್ ಗಂಭೀರ್ ಅವರೊಂದಿಗೆ ಚರ್ಚೆಗಳನ್ನು ನಡೆಸಿ ತಂಡವನ್ನು ಘೋಷಿಸಲಾಗುತ್ತದೆ. ಐಪಿಎಲ್ ಬಳಿಕ, ಭಾರತದ ಅಂಡರ್-19 ಮತ್ತು ಉದಯೋನ್ಮುಖ ತಂಡಗಳು ನಾಲ್ಕು ದಿನಗಳ ಪಂದ್ಯಗಳನ್ನು ಆಡಲು ಶ್ರೀಲಂಕಾ ಪ್ರವಾಸ ಮಾಡುತ್ತವೆ. ಇಂಟ್ರಾ-ಸಿಒಇ ಟೂರ್ನಮೆಂಟ್‌ನಲ್ಲಿ ಆಟಗಾರರ ಪ್ರದರ್ಶನದ ಆಧಾರದ ಮೇಲೆ ತಂಡಗಳನ್ನು ಆಯ್ಕೆ ಮಾಡಲಾಗುತ್ತದೆ" ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಈಗಾಗಲೇ ರಣಜಿ, ಐಪಿಎಲ್ ಹಾಗೂ ಅಂಡರ್ 19 ತಂಡಗಳ ಪರ ಭಾರತದ ಆಡಿರುವ ವೈಭವ್ ಸೂರ್ಯವಂಶಿ, ಆಯುಷ್ ಮಾತ್ರೆ ಈ ತಂಡದ ಭಾಗವಾಗಿರುತ್ತಾರೆ. ಈ ತಂಡದಲ್ಲಿ ಸಮೀರ್ ರಿಜ್ವಿ, ಪ್ರಿಯಾಂಶ್ ಆರ್ಯ, ಅಂಗ್ಕ್ರಿಶ್ ರಘುವಂಶಿ, ಅಭಿಷೇಕ್ ಪೋರೆಲ್ ಸ್ಥಾನ ಪಡೆಯುವ ಸಾಧ್ಯತೆ ಇದೆ. ರಣಜಿ ಟ್ರೋಫಿ, ವಿಜಯ್ ಹಜಾರೆ ಟ್ರೋಫಿ ಮತ್ತು ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಂತಹ ದೇಶೀಯ ಪಂದ್ಯಾವಳಿಗಳಲ್ಲಿ ಅವರ ಪ್ರದರ್ಶನದ ಆಧಾರದ ಮೇಲೆ ಅವರನ್ನು ಆಯ್ಕೆ ಮಾಡಲಾಗುತ್ತದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications