Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಭಾರತ vs ಆಸ್ಟ್ರೇಲಿಯಾ: ಟೆಸ್ಟ್‌ಗೆ ರೋಹಿತ್ ಲಭ್ಯತೆ ಇನ್ನೂ ಅನುಮಾನ

BCCI says Rohit Sharma clinically fit, but to be re-assessed before final call on availability

ಸಿಡ್ನಿ: ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ)ಯಲ್ಲಿ ಚೇತರಿಸಿಕೊಂಡಿರುವ ಭಾರತದ ಪ್ರಮುಖ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಫಿಟ್‌ ಆಗಿದ್ದಾರೆ. ಆದರೆ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ರೋಹಿತ್ ಆಡೋದು ಈಗಲೂ ಅನುಮಾನ ಎಂಬಂತಾಗಿದೆ.

ಶುಕ್ರವಾರ (ಡಿಸೆಂಬರ್ 11) ಎನ್‌ಸಿಎಯಲ್ಲಿ ನಡೆದ ಫಿಟ್ನೆಸ್ ಪರೀಕ್ಷೆಯಲ್ಲಿ ರೋಹಿತ್ ಶರ್ಮಾ ಪಾಸ್ ಆಗಿದ್ದಾರೆ. ಆದರೆ ಆಸ್ಟ್ರೇಲಿಯಾ ಟೆಸ್ಟ್ ಸರಣಿಗೆ ಮುನ್ನ ರೋಹಿತ್ ಅವರನ್ನು ಮತ್ತೊಮ್ಮೆ ಪರೀಕ್ಷಿಸಬೇಕಾಗುತ್ತದೆ ಎಂದು ಬೋರ್ಡ್ ಆಫ್ ಕಂಟ್ರೋಲ್ ಫಾರ್ ಇನ್ ಇಂಡಿಯಾ (ಬಿಸಿಸಿಐ) ಹೇಳಿದೆ.

'ಎರಡು ವಾರಗಳ ಕ್ವಾರಂಟೈನ್ ಅವಧಿಯಲ್ಲಿ ಹೇಗಿರಬೇಕು ಅನ್ನೋದನ್ನು ರೋಹಿತ್‌ಗೆ ವಿವರವಾಗಿ ತಿಳಿಸಿದ್ದೇವೆ. ಕ್ವಾರಂಟೈನ್ ಪೂರ್ಣಗೊಂಡ ಬಳಿಕ ಅವರು ಟೆಸ್ಟ್ ಸರಣಿಗೆ ಲಭ್ಯರಿದ್ದಾರೋ ಇಲ್ಲವೋ ಎನ್ನುವ ಬಗ್ಗೆ ಅಂತಿಮ ಘೋಷಣೆ ಮಾಡುವುದಕ್ಕೂ ಮುನ್ನ ಭಾರತ ತಂಡದ ವೈದ್ಯಕೀಯ ಸಿಬ್ಬಂದಿ ಶರ್ಮಾ ಅವರನ್ನು ಮರು ಮೌಲ್ಯಮಾಪನ ನಡೆಸಲಿದ್ದಾರೆ,' ಎಂದು ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಹೇಳಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ವೇಳೆ ಗಾಯಕ್ಕೀಡಾಗಿದ್ದ ರೋಹಿತ್, ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳಿರಲಿಲ್ಲ. ಈಗಾಗಲೇ ಏಕದಿನ ಮತ್ತು ಟಿ20ಐ ಸರಣಿಯನ್ನು ರೋಹಿತ್ ಮಿಸ್ ಮಾಡಿಕೊಂಡಾಗಿದೆ. ಟೆಸ್ಟ್ ಸರಣಿಯ ಕೊನೇ ಎರಡು ಪಂದ್ಯಗಳಲ್ಲಿ ರೋಹಿತ್ ಆಡುವ ಸಾಧ್ಯತೆಯಿದೆ. ಆದರೆ ರೋಹಿತ್ ಲಭ್ಯತೆ ಈಗಲೂ ಖಾತ್ರಿಯಾಗಿಲ್ಲ.

Story first published: Saturday, December 12, 2020, 16:15 [IST]
Other articles published on Dec 12, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+