For Quick Alerts
ALLOW NOTIFICATIONS  
For Daily Alerts
 

ACC President: ಮೂರನೇ ಬಾರಿಸಿ ಎಸಿಸಿ ಅಧ್ಯಕ್ಷರಾದ ಜಯ್‌ ಶಾ

ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಮೂರನೇ ಬಾರಿಗೆ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಅಧ್ಯಕ್ಷರಾಗಿದ್ದಾರೆ. ಅವರ ಅಧಿಕಾರಾವಧಿಯನ್ನು ಒಂದು ವರ್ಷಕ್ಕೆ ವಿಸ್ತರಿಸಲಾಗಿದೆ. ಬುಧವಾರ ನಡೆದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಈ ಕುರಿತು ಸರ್ವಾನುಮತದಿಂದ ನಿರ್ಣಯ ಕೈಗೊಳ್ಳಲಾಗಿದೆ.

ಶ್ರೀಲಂಕಾ ಕ್ರಿಕೆಟ್ (SLC) ಅಧ್ಯಕ್ಷ ಶಮ್ಮಿ ಸಿಲ್ವಾ ಅವರು ಎರಡನೇ ಬಾರಿಗೆ ಜಯ್ ಶಾ ಅವರ ಅಧಿಕಾರಾವಧಿಯ ವಿಸ್ತರಣೆಯನ್ನು ಪ್ರಸ್ತಾಪಿಸಿದರು ಮತ್ತು ನಾಮನಿರ್ದೇಶನವನ್ನು ಏಷ್ಯನ್‌ ಕ್ರಿಕೆಟ್‌ ಕೌನ್ಸಿಲ್‌ನ ಎಲ್ಲಾ ಸದಸ್ಯರು ಸರ್ವಾನುಮತದಿಂದ ಬೆಂಬಲಿಸಿದರು.

BCCI Secretary Jay Shah set to continue as Asian Cricket Council president

ಜಯ್‌ ಷಾ ಅವರು ಜನವರಿ 2021 ರಲ್ಲಿ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ನಜ್ಮುಲ್ ಹಸನ್ ಅವರಿಂದ ಎಸಿಸಿ ಯ ಆಡಳಿತವನ್ನು ಪೆಡೆದಿದ್ದರು. ಎಸಿಸಿ ಅಧ್ಯಕ್ಷರಾಗಿ ಮರು ನೇಮಕಗೊಂಡ ಅತ್ಯಂತ ಕಿರಿಯ ಆಡಳಿತಗಾರ ಎಂಬ ಹಿರಿಮೆ ಜಯ್ ಷಾ ಅವರದ್ದಾಗಿದೆ. ಷಾ ಅವರ ನಾಯಕತ್ವದಲ್ಲಿ ಎಸಿಸಿ ಎಷ್ಯಾದ ಪ್ರದೇಶದಾದ್ಯಂತ ಕ್ರಿಕೆಟ್ ಅನ್ನು ಉತ್ತೇಜಿಸುವಲ್ಲಿ ಮತ್ತು ಅಭಿವೃದ್ಧಿಪಡಿಸುವಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ.

ಎಸಿಸಿ ಏಷ್ಯಾ ಕಪ್ ಅನ್ನು 2022 ರಲ್ಲಿ ಟಿ20 ಸ್ವರೂಪದಲ್ಲಿ ಮತ್ತು 2023 ರಲ್ಲಿ ಏಕದಿನ ಸ್ವರೂಪದಲ್ಲಿ ಯಶಸ್ವಿಯಾಗಿ ಆಯೋಜಿಸಿದೆ. ಪ್ರಮುಖ ಕ್ರಿಕೆಟ್ ಈವೆಂಟ್‌ಗಳನ್ನು ಆಯೋಜಿಸಿ ಏಷ್ಯಾದ ಸಾಮರ್ಥ್ಯವನ್ನು ಪ್ರದರ್ಶಿಸುತ್ತದೆ.

ಶ್ರೀಲಂಕಾ ಕ್ರಿಕೆಟ್ ಅಧ್ಯಕ್ಷ ಶಮ್ಮಿ ಸಿಲ್ವಾ ಸಭೆಯಲ್ಲಿ ಮಾತನಾಡಿ, ಏಷ್ಯನ್ ಪ್ರದೇಶದಾದ್ಯಂತ ಕ್ರಿಕೆಟ್ ಅನ್ನು ಉತ್ತೇಜಿಸುವಲ್ಲಿ ಮತ್ತು ಅಭಿವೃದ್ಧಿಪಡಿಸುವಲ್ಲಿ ಎಸಿಸಿ ಯನ್ನು ಮಹತ್ವದ ಪ್ರಗತಿಗೆ ಕೊಂಡೊಯ್ಯುವಲ್ಲಿ ಜಯ್ ಶಾ ಪ್ರಮುಖ ಪಾತ್ರ ವಹಿಸಿದ್ದಾರೆ. ಜಯ್ ಷಾ ಅವರ ಮಾರ್ಗದರ್ಶನದಲ್ಲಿ, ಬಾಂಗ್ಲಾದೇಶ, ಭಾರತ, ಪಾಕಿಸ್ತಾನ ಮತ್ತು ಶ್ರೀಲಂಕಾದಂತಹ ಕ್ರಿಕೆಟ್ ಶಕ್ತಿಗಳಲ್ಲಿ ಹೊಸ ಪ್ರತಿಭೆಗಳು ಬೆಳಕಿಗೆ ಬರುತ್ತಿವೆ. ಮತ್ತು ಕ್ರಿಕೆಟ್‌ ಉತ್ತೇಜಿಸುವಲ್ಲಿ ಎಸಿಸಿ ಪ್ರಮುಖ ಪಾತ್ರವನ್ನು ವಹಿಸಿದೆ ಎಂದು ಹೇಳಿದರು.

ಜಯ್ ಶಾ ಕೃತಜ್ಞತೆ

ಎಲ್ಲರಿಗೂ ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದ ಜಯ್ ಷಾ ಅವರು, "ಎಸಿಸಿ ಮಂಡಳಿಯ ನಿರಂತರ ವಿಶ್ವಾಸಕ್ಕಾಗಿ ನಾನು ಕೃತಜ್ಞನಾಗಿದ್ದೇನೆ. ಆಟವು ಇನ್ನೂ ಹೆಚ್ಚು ಪ್ರಚಲಿತ ಪಡೆಯಲು ಶ್ರಮಿಸುವೆ. ರಿಮೋಟ್‌ ಪ್ರದೇಶಗಳ ಮೇಲೆ ವಿಶೇಷ ಗಮನಹರಿಸುವ ಮೂಲಕ ಅದರ ಸರ್ವತೋಮುಖ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಲು ನಾವು ಬದ್ಧರಾಗಿರಬೇಕು. ಎಸಿಸಿಯು ಏಷ್ಯಾದಾದ್ಯಂತ ಕ್ರಿಕೆಟ್ ಅನ್ನು ಉತ್ತೇಜಿಸಲು ಬದ್ಧವಾಗಿದೆ ಎಂದು ತಿಳಿಸಿದ್ದಾರೆ.

ಏಷ್ಯಾ ಖಂಡದಾದ್ಯಂತ ಆಟದ ವಿವಿಧ ಅಂಶಗಳನ್ನು ಸಂಯೋಜಿಸುವಲ್ಲಿ ಎಸಿಸಿ ಪ್ರಮುಖ ಪಾತ್ರ ವಹಿಸುತ್ತದೆ. ಪುರುಷರು ಮತ್ತು ಮಹಿಳೆಯರಿಗಾಗಿ ಏಷ್ಯಾ ಕಪ್ ಮತ್ತು ಮಹಿಳೆಯರು ಮತ್ತು ಪುರುಷರಿಗಾಗಿ ಉದಯೋನ್ಮುಖ ಕ್ರಿಕೆಟ್‌ ಆಟಗಾರರಿಗೆ ವಿವಿಧ ವಯೋಮಿತಿಯ ಅಡಿಯಲ್ಲಿ ಪ್ರತಿಷ್ಠಿತ ಪಂದ್ಯಾವಳಿಗಳನ್ನು ಮೇಲ್ವಿಚಾರಣೆ ಮಾಡುತ್ತದೆ.

Story first published: Wednesday, January 31, 2024, 14:34 [IST]
Other articles published on Jan 31, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+