ಏಷ್ಯನ್ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೇರಿದ ಜಯ್ ಶಾ

ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಏಷ್ಯನ್ ಕ್ರಿಕೆಟ್ ಕೌನ್ಸಿಲ್(ACC)ಯ ಅಧ್ಯಕ್ಷರಾಗಿ ಶನಿವಾರ ಅವಿರೋಧವಾಗಿ ನೇಮಕಗೊಂಡಿದ್ದಾರೆ. ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ಮುಖ್ಯಸ್ಥ ನಜ್‌ಮುಲ್ ಹಸನ್ ಪಪಾನ್ ಅವರು ಈವರೆಗೆ ಎಸಿಸಿಯ ಅಧ್ಯಕ್ಷ ಸ್ಥಾನದಲ್ಲಿದ್ದರು. ಶಾ ಈಗ ಆ ಸ್ಥಾನವನ್ನು ವಹಿಸಿಕೊಂಡಿದ್ದಾರೆ.
ಈ ಬಗ್ಗೆ ಅಧಿಕೃತ ಪ್ರಕಟಣೆಯಲ್ಲಿ ಎಸಿಸಿ "ಬಿಸಿಸಿಐ ನ ಕಾರ್ಯದರ್ಶಿ ಜಯ್ ಶಾ ಅವರನ್ನು ಎಸಿಸಿ ತನ್ನ ಹೊಸ ಅಧ್ಯಕ್ಷರನ್ನಾಗಿ ನೇಮಕಗೊಳಿಸಿದೆ. ಜಯ್ ಶಾ ಎಸಿಸಿ ಅಧ್ಯಕ್ಷ ಸ್ಥಾನಕ್ಕೇರಿದ ಅತ್ಯಂತ ಕಿರಿಯ ವ್ಯಕ್ತಿಯಾಗಿದ್ದಾರೆ. ಅವರ ಉತ್ಸಾಹದ ಮತ್ತು ಕ್ರಿಯಾತ್ಮಕ ನಾಯಕತ್ವದಲ್ಲಿ ಕೆಲಸ ನಿರ್ವಹಿಸಲು ನಾವು ಎದುರು ನೋಡುತ್ತಿದ್ದೇವೆ" ಎಂದು ಹೇಳಿದೆ.
ಇನ್ನು ಈ ಸುದ್ದಿಯನ್ನು ಬಿಸಿಸಿಐನ ಖಜಾಂಚಿ ಅರುಣ್ ಸಿಂಗ್ ಧುಮಲ್ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದು "ಅಭಿನಂದನೆಗಳು ಜಯ್ ಶಾ ಏಷ್ಯನ್ ಕ್ರಿಕೆಟ್ ಕೌನ್ಸಿಲ್‌ನ ಅಧ್ಯಕ್ಷರಾಗಿ ನೇಮಕಗೊಂಡಿರುವುದಕ್ಕೆ. ನಿಮ್ಮ ನಾಯಕತ್ವದಲ್ಲಿ ಎಸಿಸಿ ಅತ್ಯುನ್ನತ ಸ್ಥಾನಕ್ಕೇರಲಿದೆ ಎಂಬ ಭರವಸೆಯಿದೆ. ಇದರ ಲಾಭವನ್ನು ಏಷ್ಯಾದ ಎಲ್ಲಾ ಕ್ರಿಕೆಟರ್‌ಗಳು ಕೂಡ ಪಡೆಯಲಿದ್ದಾರೆ. ನಿಮ್ಮ ಹೊಸ ಸಾಹಸಕ್ಕೆ ನನ್ನ ಶುಭ ಹಾರೈಕೆಗಳು" ಎಂದು ಬರೆದುಕೊಂಡಿದ್ದಾರೆ.
ಏಷ್ಯಾ ವಿಭಾಗದ ಕ್ರಿಕೆಟ್ ಚಟುವಟಿಕೆಗಳ ಆಡಳಿತ ಮಂಡಳಿಯಾಗಿರುವ ಎಸಿಸಿ 24 ಸದಸ್ಯರನ್ನು ಹೊಂದಿದೆ. ಏಷ್ಯಾ ಕಪ್ ಟೂರ್ನಿಯನ್ನು ಆಯೋಜನೆ ಮಾಡುವ ಹೊಣೆಗಾರಿಗೆ ಎಸಿಸಿಯದ್ದಾಗಿದೆ. ಕಳೆದ ಜೂನ್‌ನಲ್ಲಿ ನಡೆಯಬೇಕಿದ್ದ 2020 ಆವೃತ್ತಿಯ ಏಷ್ಯಾಕಪ್ ಟೂರ್ನಿ ಕೊರೊನಾ ವೈರಸ್ ಕಾರಣದಿಂದಾಗಿ ಈ ವರ್ಷಕ್ಕೆ ಮುಂದೂಡಿಕೆಯಾಗಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications