ಭಾರತದಲ್ಲಿ ಟಿ20 ವಿಶ್ವಕಪ್?, ಇಂಗ್ಲೆಂಡ್‌ನಲ್ಲಿ ಐಪಿಎಲ್ ನಡೆಯಲಿದೆಯಾ?

ನವದೆಹಲಿ: ಮೇ 29ಕ್ಕೆ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ವಿಶೇಷ ಸಾಮಾನ್ಯ ಸಭೆ ಕರೆದಿದೆ. ಈ ಸಭೆಯಲ್ಲಿ ಈ ಬಾರಿ ನಡೆಯಲಿರುವ ಟಿ20 ವಿಶ್ವಕಪ್‌, ಮುಂದಿನ ಕ್ರಿಕೆಟ್ ಸೀಸನ್ ಮತ್ತು ಐಪಿಎಲ್ ನಿಲುಗಡೆಯಾಗಿರುವ ಪಂದ್ಯಗಳನ್ನು ಪೂರ್ಣಗೊಳಿಸುವ ಬಗ್ಗೆ ಚರ್ಚೆ ನಡೆಯಲಿದೆ.

T20 World Cup ನಡೆಯೋದು ಭಾರತದಲ್ಲಾ? | Oneindia Kannada

ಐಪಿಎಲ್‌ಗಿಂತ ಪಿಎಸ್ಎಲ್ ಉತ್ತಮ ಎಂದಿದ್ದ ಸ್ಟೇನ್ ಮತ್ತೆ ಐಪಿಎಲ್ ಕುರಿತು ಮಾತನಾಡಿದ್ದಾರೆ

ಮೇ 29ಕ್ಕೆ ನಡೆಯುವ ಸಭೆಯಲ್ಲಿ, ಭಾರತದಲ್ಲೇ ಟಿ20ಐ ವಿಶ್ವಕಪ್‌ ಉಳಿಸಿಕೊಳ್ಳುವುದಕ್ಕೆ ಸಂಬಂಧಿಸಿ ಮಾತುಕತೆಗಳಾಗಲಿವೆ. ಜೊತೆಗೆ ಐಪಿಎಲ್ ಇನ್ನುಳಿದ ಪಂದ್ಯಗಳನ್ನು ಇಂಗ್ಲೆಂಡ್‌ನಲ್ಲಿ ನಡೆಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಮೂಲವೊಂದು ಸುಳಿವು ನೀಡಿದೆ.

ಜೂನ್ 1ಕ್ಕೆ ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಸಭೆ ನಡೆಯಲಿದ್ದು, ಇದಕ್ಕೂ ಮುನ್ನವೇ ಬಿಸಿಸಿಐ ಸಭೆ ನಡೆಸಿ ನಿರ್ಧಾರಕ್ಕೆ ಬರಲಿದೆ. ಆ ನಿರ್ಧಾರವನ್ನು ಐಸಿಸಿ ಸಭೆಯ ವೇಳೆ ಬಿಸಿಸಿಐಯು ವಿಶ್ವ ಕ್ರಿಕೆಟ್ ಆಡಳಿತ ಸಮಿತಿಯ ಮುಂದಿಡಲಿದೆ ಎಂದು ಹೇಳಲಾಗಿದೆ.

ವೆಸ್ಟ್‌ ಇಂಡೀಸ್, ಐರ್ಲೆಂಡ್ ಪ್ರವಾಸಕ್ಕೆ ದಕ್ಷಿಣ ಆಫ್ರಿಕಾ ತಂಡ ಪ್ರಕಟ

'ಈಗಿನವರೆಗೆ ಭಾರತವೇ ಟಿ20 ವಿಶ್ವಕಪ್‌ ನಡೆಸಲು ತಾಣ. ಬಿಸಿಸಿಐ ಇದನ್ನು ಹೇಗೆಯೇ ನೋಡಲಿದೆ. ಒಂದು ವೇಳೆ ಟಿ20 ವಿಶ್ವಕಪ್‌ ಬೇರೆಡೆಗೆ ಸ್ಥಳಾಂತರಗೊಂಡರೆ ಅದನ್ನು ಜೂನ್‌ ಬಳಿಕಷ್ಟೇ ತಿಳಿಸುತ್ತೇವೆ. ಟಿ20 ವಿಶ್ವಕಪ್ ಭಾರತದಲ್ಲಿ ನಡೆಯದಿದ್ದರೆ ಯುನೈಟೆಡ್ ಅರಬ್ ಎಮಿರೇಟ್ಸ್ ದ್ವಿತೀಯ ಆಯ್ಕೆ,' ಎಂದು ಬಿಸಿಸಿಐ ಮೂಲ ತಿಳಿಸಿದೆ. ಅಕ್ಟೋಬರ್‌-ನವೆಂಬರ್‌ನಲ್ಲಿ ಟಿ20 ವಿಶ್ವಕಪ್‌ ನಡೆಯಲಿದೆ.

For Quick Alerts
ALLOW NOTIFICATIONS
For Daily Alerts
Story first published: Wednesday, May 19, 2021, 14:58 [IST]
Other articles published on May 19, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X