ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೊರೊನಾ ವೈರಸ್ ಭೀತಿ: ಕ್ರಿಕೆಟ್ ಅಭಿಮಾನಿಗಳಿಗೆ ಬಿಸಿಸಿಐ ಸಂದೇಶ

Bcci Sends Message To Fans Amid Covid-19 Threat

ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಕ್ರಿಕೆಟ್ ಅಭಿಮಾನಿಗಳಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಅಭಿಮಾನಿಗಳಿಗೆ ಸಂದೇಶವೊಂದನ್ನು ಕಳುಹಿಸಿದೆ. ಜಗತ್ತಿನಾದ್ಯಂತ ಕೊರೊನಾ ವೈರಸ್ ಹಬ್ಬುತ್ತಿರುವುದರಿಂದ ಎಲ್ಲಾ ಕ್ರೀಡಾ ಟೂರ್ನಮೆಂಟ್‌ಗಳು ಸ್ಥಗಿತಗೊಂಡಿದೆ ಈ ಹಿನ್ನೆಲೆಯಲ್ಲಿ ಟ್ವಿಟರ್ ಮೂಲಕ ಸಂದೇಶವೊಂದನ್ನು ಬಿಸಿಸಿಐ ನೀಡಿದೆ.

ವಿಶ್ವಾದುದ್ದಕ್ಕೂ ಕೊರೊನಾ ವೈರಸ್ ಬಿಗಿ ಹಿಡಿತವನ್ನು ಸಾಧಿಸುವಲ್ಲಿ ಯಶಸ್ವಿಯಾಗಿದೆ. ವಿಶ್ವದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 2 ಲಕ್ಷದ ಸಮೀಪಕ್ಕೆ ಬಂದು ನಿಂತಿದೆ. ಕೊರೊನಾ ವೈರಸ್‌ಗೆ ಮೃತಪಟ್ಟವರ ಸಂಖ್ಯೆ ಸರಿ ಸುಮಾರು 7 ಸಾವಿರದಷ್ಟಾಗಿದೆ. ಹೀಗಾಗಿ ಎಲ್ಲಾ ಕ್ರೀಡಾಕೂಟಗಳನ್ನೂ ರದ್ದುಗೊಳಿಸಿ ಕೊರೊನಾ ವಿರುದ್ಧ ಹೋರಾಟವನ್ನು ನಡೆಸಲಾಗ್ತಿದೆ.

ಕೊಹ್ಲಿ ತರದ ನಾಯಕನೇ ನಮಗೆ ಬೇಕು ಎಂದ ಮಾಜಿ ಕ್ರಿಕೆಟಿಗಕೊಹ್ಲಿ ತರದ ನಾಯಕನೇ ನಮಗೆ ಬೇಕು ಎಂದ ಮಾಜಿ ಕ್ರಿಕೆಟಿಗ

ಕೊರೊನಾ ಪರಿಣಾಮ ಕ್ರಿಕೆಟ್ ಮೇಲೂ ಬಹುದೊಡ್ಡ ಪ್ರಮಾಣದಲ್ಲಿ ಬೀರಿದೆ. ಐಪಿಎಲ್‌ನಂತಾ ಟೂರ್ನಿಗಳ ಜೊತೆಗೆ ಅನೇಕ ಟೂರ್ನಿಗಳು ದಿಢೀರ್ ಆಗಿ ರದ್ದುಗೊಳಿಸಲಾಗಿದೆ. ಆರ್ಥಿಕ ದೃಷ್ಟಿಯಿಂದ ಇದು ಋಣಾತ್ಮಕ ಪರಿಣಾಮ ಬೀರಿದರೂ ವಿಶ್ವದ ಹಿತದೃಷ್ಟಿಯಿಂದ ಈ ರೀತಿಯ ಕ್ರಮಗಳು ಅನಿವಾರ್ಯವಾಗಿದೆ. ಹೀಗಾಗಿ ಯಾವುದೇ ಟೂರ್ನಿಗಳು ಇಲ್ಲದಿರುವುದು ಕ್ರಿಕೆಟ್‌ ಪ್ರೇಮಿಗಳಿಗೆ ನಿರಾಸೆಯನ್ನು ಮೂಡಿಸಿದೆ.

ಬಿಸಿಸಿಐ ತನ್ನ ಟ್ವಿಟ್ಟರ್ ಖಾತೆಯಲ್ಲಿ ಟೀಮ್ ಇಂಡಿಯಾ ಕೆಲ ಆಟಗಾರರ ಹಳೆ ಫೋಟೋವೊಂದನ್ನು ಹಂಚಿಕೊಂಡಿದ್ದು 'ನಗುವಿನಿಂದಿಗೆ ಮುಂದುವರಿಯಿರಿ' ಎಂದು ಬರೆದುಕೊಂಡಿದೆ. ಪೃಥ್ವಿ ಶಾ, ಮನೀಸ್ ಪಾಂಡೆ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್ ಮತ್ತು ಫೀಲ್ಡಿಂಗ್ ಕೋಚ್ ಆರ್‌ ಶೀಧರ್ ಅವರ ಫೋಟೊವೊಂದನ್ನು ಹಂಚಿಕೊಂಡಿದೆ.

ಕೊರೊನಾ ವೈರಸ್ ಭೀತಿ : ಪಾಕಿಸ್ತಾನ ಸೂಪರ್ ಲೀಗ್ ಮುಂದೂಡಿಕೆಕೊರೊನಾ ವೈರಸ್ ಭೀತಿ : ಪಾಕಿಸ್ತಾನ ಸೂಪರ್ ಲೀಗ್ ಮುಂದೂಡಿಕೆ

ಕೊರೊನಾ ವೈರಸ್ ಭೀತಿಯಿಂದಾಗಿ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯನ್ನು ಧಿಡೀರ್ ಆಗಿ ರದ್ದುಗೊಳಿಸಿತ್ತು. ಬಳಿಕ ಮಾರ್ಚ್ 29ಕ್ಕೆ ಆರಂಭವಾಗಬೇಕಿದ್ದ ಐಪಿಎಲ್ ಟೂರ್ನಿಯನ್ನು ಏಪ್ರಿಲ್ 15ರ ವರೆಗೆ ಮುಂದೂಡಲಾಗಿದೆ.

Story first published: Wednesday, March 18, 2020, 11:20 [IST]
Other articles published on Mar 18, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X