Zaheer Khan ಖಾನ್ ಹೆಗಲಿಗೆ ಬಿಸಿಸಿಐ ಹೊಸ ಜವಾಬ್ದಾರಿ ನೀಡುವ ಸಾಧ್ಯತೆ
ಭಾರತದಲ್ಲಿ ಪ್ರತಿಭಾನ್ವಿತ ಕ್ರಿಕೆಟ್ ಆಟಗಾರರ ದೊಡ್ಡ ದಂಡೆ ಇದೆ. ಈ ಆಟಗಾರರಿಗೆ ಸರಿಯಾದ ಮಾರ್ಗದರ್ಶನ ಹಾಗೂ ಸಲಹೆ ಬೇಕಿದೆ. ಈ ನಿಟ್ಟಿನಲ್ಲಿ ಬಿಸಿಸಿಐ ದೊಡ್ಡ ಕಾರ್ಯಕ್ಕೆ ಮುಂದಾಗಿದೆ. ಟೀಮ್ ಇಂಡಿಯಾದ ಮಾಜಿ ವೇಗದ ಬೌಲರ್ ಜಹೀರ್ ಖಾನ್ ಅವರ ಹೆಗಲಿಗೆ ಬಿಸಿಸಿಐ ದೊಡ್ಡ ಜವಾಬ್ದಾರಿಯನ್ನು ನೀಡಲು ನಿರ್ಧರಿಸಿದೆ. ಹಾಗಿದ್ದರೆ ಆ ಜವಾಬ್ದಾರಿ ಏನು ಎಂಬ ಬಗ್ಗೆ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.
ಭಾರತದಲ್ಲಿ ಹೊಸ ವೇಗದ ಬೌಲರ್‌ಗಳನ್ನು ತಯಾರಿಸಲು ಬಿಸಿಸಿಐ ಪ್ಲ್ಯಾನ್ ಮಾಡಿಕೊಂಡಿದೆ. ಇದರ ಅನುಸಾರವಾಗಿ ವೇಗದ ಬೌಲಿಂಗ್ ಆಂದೋಲನವನ್ನು ಮುನ್ನಡೆಸುವ ಜವಾಬ್ದಾರಿಯನ್ನು ಬಿಸಿಸಿಐ ಜಹೀರ್ ಖಾನ್ ಅವರಿಗೆ ವಹಿಸಿದೆ. ಯುವ ವೇಗದ ಬೌಲರ್ ಅವರ ಕೌಶಲ್ಯವನ್ನು ಸುಧಾರಿಸಲು ಇನ್ನು ಜಹೀರ್ ಖಾನ್ ಬೆವರು ಹರಿಸಲಿದ್ದಾರೆ.

ಬೆಂಗಳೂರಿನಲ್ಲಿರುವ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ವಿಶೇಷ ವೇಗದ ಬೌಲಿಂಗ್ ತರಬೇತಿ ಶಿಬಿರಗಳನ್ನು ಆಯೋಜಿಸುವ ಕಾರ್ಯವನ್ನು ಜಹೀರ್ ಖಾನ್ ಅವರಿಗೆ ವಹಿಸಲಾಗಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಕಳೆದ ವರ್ಷದ ಡಿಸೆಂಬರ್‌ನಲ್ಲಿ ಸೆಂಟರ್ ಆಫ್ ಎಕ್ಸಲೆನ್ಸ್‌ಗೆ ಮುಖ್ಯ ವೇಗದ ಬೌಲಿಂಗ್ ತರಬೇತುದಾರರ ಸ್ಥಾನ ಖಾಲಿ ಇದೆ.ನಾಲ್ಕು ವರ್ಷಗಳ ಕಾಲ ಈ ಹುದ್ದೆಯಲ್ಲಿ ಟ್ರಾಯ್ ಕೂಲಿ ಜವಾಬ್ದಾರಿಯನ್ನು ನಿರ್ವಹಿಸಿದ್ದರು. ಅವರ ಅಧಿಕಾರವಧಿ ಡಿಸೆಂಬರ್‌ನಲ್ಲಿ ಕೊನೆಯಾಗಿದೆ. ಈ ಖಾಲಿ ಹುದ್ದೆಗೆ ಬಿಸಿಸಿಐ ಫೆಬ್ರವರಿ 9 ರಂದು ಅರ್ಜಿಗಳನ್ನು ಸ್ವೀಕರಿಸಲು ಪ್ರಾರಂಭಿಸಿತು. ಆದರೆ ಕೂಲಿ ಅವರ ಸ್ಥಾನಕ್ಕೆ ಇನ್ನು ಯಾರನ್ನೂ ನೇಮಕ ಮಾಡಿಲ್ಲ.
ಜಹೀರ್ ಖಾನ್ ಕೆಲಸ ಏನು?
ಫೆಬ್ರವರಿ 28 ರಿಂದ ಮಾರ್ಚ್ 2 ರವರೆಗೆ ನಡೆಯಲಿರುವ ವೇಗದ ಬೌಲಿಂಗ್ ಶಿಬಿರವನ್ನು ಜಹೀರ್ ಖಾನ್ ಮುನ್ನಡೆಸುವ ಸಾಧ್ಯತೆ ಇದೆ. ಈ ಶಿಬಿರದಲ್ಲಿ ಹಲವಾರು ರಾಜ್ಯ ಕ್ರಿಕೆಟ್ ಸಂಘಗಳಿಂದ ವೇಗದ ಬೌಲರ್‌ಗಳ ಗುಂಪನ್ನು ಆಹ್ವಾನಿಸಲಾಗಿದೆ ಎಂದು ವರದಿಗಳು ಬಂದಿವೆ. ಸೆಂಟರ್ ಆಫ್ ಎಕ್ಸಲೆನ್ಸ್‌ನ ಕ್ರಿಕೆಟ್ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಸಹ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಜಹೀರ್ ಖಾನ್ ಕೋಚಿಂಗ್ ಪಾತ್ರವನ್ನು ಉತ್ಸಾಹದಿಂದ ನೋಡುತ್ತಿದ್ದಾರೆ ಎಂದು ತಿಳಿದು ಬಂದಿದೆ. ಇವರು ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ಪೂರ್ಣ ಸಮಯದ ಕೋಚ್ ಸ್ಥಾನವನ್ನು ತುಂಬಲಿದ್ದಾರಾ ಎಂಬ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ಇನ್ನು ಬಿಸಿಸಿಐ ಕೋಚ್ ಸ್ಥಾನಕ್ಕೆ ಅರ್ಜಿಯನ್ನು ಕರೆದಾಗ ಇವರು ಭಾರತದ ಬೌಲಿಂಗ್ ಕೋಚ್ ಜೊತೆಗೆ ಕೆಲಸವನ್ನು ಮಾಡುತ್ತಾರೆ ಎಂದು ಸೂಚಿಸಿದೆ. ಅಲ್ಲದೆ ಯುವ ಪೀಳಿಗೆಯ ಬೌಲರ್‌ಗಳನ್ನು ಸಿದ್ಧಪಡಿಸುವ ಮಹತ್ತರ ಜವಾಬ್ದಾರಿ ಇವರಿಗೆ ಇರುತ್ತದೆ ಎಂದು ಬಿಸಿಸಿಐ ತಿಳಿಸಿತ್ತು.
ಟೀಮ್ ಇಂಡಿಯಾದ ಸ್ಟಾರ್ ವೇಗದ ಬೌಲರ್ ಜಹೀರ್ ಖಾನ್ ಈಗಾಗಲೇ ಐಪಿಎಲ್‌ನಲ್ಲಿ ಕೋಚಿಂಗ್ ಮಾಡಿದ ಅನುಭವ ಹೊಂದಿದ್ದಾರೆ. ಇವರು ಸ್ವಿಂಗ್ ಬೌಲಿಂಗ್‌ಗೆ ಹೆಸರುವಾಸಿ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications