ಮೊಹಮ್ಮದ್ ಶಮಿಗೆ ಟಾಸ್ಕ್ ನೀಡಿದ BCCI: ಪಾಸಾದರೆ ಆಸ್ಟ್ರೇಲಿಯಾ ಟಿಕೇಟ್
ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಕ್ರಿಕೆಟ್ ಆಟಗಾರ ಮೊಹಮ್ಮದ್ ಶಮಿ ಅವರು ಆಸ್ಟ್ರೇಲಿಯಾ ಪ್ರವಾಸವನ್ನು ಯಾವಾಗ ಬೆಳೆಸಲಿದ್ದಾರೆ ಎಂಬ ಪ್ರಶ್ನೆಗಳು ಉದ್ಭವಿಸಿವೆ. ಈ ನಿಟ್ಟಿನಲ್ಲಿ ಹಲವು ಊಹಾಪೋಗಳು ಎದ್ದಿವೆ. ಶಮಿ ಸದ್ಯ ದೇಶೀಯ ಟೂರ್ನಿಯಲ್ಲಿ ಬೆವರು ಹರಿಸುತ್ತಿದ್ದಾರೆ. ಮೊದಲು ಬಂಗಾಳ ಪರ ರಣಜಿ ಕ್ರಿಕೆಟ್ ಟೂರ್ನಿಯನ್ನು ಆಡಿದರೆ ಈಗ ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟೂರ್ನಿ ಆಡುತ್ತಿದ್ದಾರೆ. ಈ ನಡುವೆ ಶಮಿಗೆ ಸಂಬಂಧಿಸಿದಂತೆ ಬಿಗ್ ಅಪ್‌ಡೇಟ್ ಸಿಕ್ಕಿದೆ.
ಬಿಸಿಸಿಐ ಮೊಹಮ್ಮದ್ ಶಮಿಗೆ ಒಂದು ಟಾಸ್ಕ್ ನೀಡಿದೆ. ಈ ಟಾಸ್ಕಗೆ ಟೈಮ್ ಲೈನ್ ಸಹ ನೀಡಿದೆ. ಈ ಟೈಮ್ ಲೈನ್‌ನಲ್ಲಿ ಶಮಿ, ಬಿಸಿಸಿಐ ಹೇಳಿದ ಟಾಸ್ಕ್ ಕಂಪ್ಲೀಟ್ ಮಾಡಿದ್ದೇ ಆದಲ್ಲಿ, ಆಸ್ಟ್ರೇಲಿಯಾ ಫ್ಲೈಟ್ ಏರಬಹುದು. ಹಾಗಿದ್ದರೆ ಬಿಸಿಸಿಐ, ಶಮಿಗೆ ನೀಡಿರುವ ಟಾಸ್ಕ್ ಏನು ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಬಿಸಿಸಿಐ ನೀಡಿರುವ ಟಾಸ್ಕ್ ಏನು?
ಭಾರತದಲ್ಲಿ ನಡೆದಿದ್ದ ಏಕದಿನ ವಿಶ್ವಕಪ್ ಫೈನಲ್ ಪಂದ್ಯದ ಬಳಿಕ ಮೊಹಮ್ಮದ್ ಶಮಿ ಅಂಗಳದಿಂದ ದೂರ ಉಳಿದಿದ್ದರು. ಈ ವೇಳೆ ಅವರು ಶಸ್ತ್ರ ಚಿಕಿತ್ಸೆಗೂ ಒಳಗಾಗಿದ್ದರು. ಅಲ್ಲದೆ ಚಿಕಿತ್ಸೆಯ ಬಳಿಕ ಚೇತರಿಸಿಕೊಂಡು ಈಗ ಮತ್ತೆ ಅಂಗಳಕ್ಕೆ ಇಳಿಯಲು ರೆಡಿ ಆಗಿದ್ದಾರೆ. ಶಮಿ ಸುಮಾರು ಒಂದು ವರ್ಷದ ನಂತರ ಮೈದಾನಕ್ಕೆ ಮರಳಿದ್ದಾರೆ. ಇವರನ್ನು ಬಿಸಿಸಿಐ ವೈದ್ಯಕೀಯ ತಂಡ ಸೂಕ್ಷ್ಮವಾಗಿ ಗಮನಿಸುತ್ತಿದೆ. ಶಮಿ ಮೈದಾನಕ್ಕೆ ವಾಪಸ್ ಆಗುತ್ತಿದ್ದಂತೆ ಭರ್ಜರಿ ಪ್ರದರ್ಶನ ನೀಡಿ ಗಮನ ಸೆಳೆಯುತ್ತಿದ್ದಾರೆ.
ವರದಿಗಳ ಪ್ರಕಾರ, ಶಮಿ ತೂಕ ಇಳಿಸಿಕೊಳ್ಳಲು ಮತ್ತು ಫಿಟ್ನೆಸ್ ಸುಧಾರಿಸಲು ಬಿಸಿಸಿಐ ಸಲಹೆ ನೀಡಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ ತಿಳಿದು ಬಂದಿದೆ. ಇನ್ನು ಶಮಿ ಅವರಿಗೆ ತಮ್ಮ ಫಿಟ್ನೆಸ್ ಸಾಬೀತು ಪಡಿಸಲು 10 ದಿನಗಳ ಕಾಲ ಕಾಲಾವಕಾಶ ಇದೆ. ಶಮಿ ಅವರ ಫಿಟ್ನೆಸ್ ಬಗ್ಗೆ ಮಂಡಳಿ ಯಾವುದೇ ಆತುರದ ನಿರ್ಧಾರ ತೆಗೆದುಕೊಳ್ಳಲು ಮನಸ್ಸು ಮಾಡುತ್ತಿಲ್ಲ. ಏಕೆಂದರೆ ಫೆಬ್ರವರಿಯಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಗೆ ಶಮಿ ತಂಡ ಸೇರುವುದು ಅವಶ್ಯಕ.

ಬಿಸಿಸಿಐ ನೀಡಿರುವ ಟಾಸ್ಕ್‌ನಲ್ಲಿ ಶಮಿ ಪಾಸ್‌ದಲ್ಲಿ ಅವರು ಆಸ್ಟ್ರೆಲಿಯಾ ವಿರುದ್ಧದ ಮೂರನೇ ಟೆಸ್ಟ್‌ಗೆ ತಂಡವನ್ನು ಸೇರಬಹುದು. ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೀಮ್ ಇಂಡಿಯಾ ಶುಭಾರಂಭ ಮಾಡಿದೆ. ಪರ್ತ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ತಂಡವು ದಾಖಲೆಯ 295 ರನ್‌ಗಳ ಜಯ ಸಾಧಿಸಿದೆ. ಉಭಯ ದೇಶಗಳ ನಡುವಣ ಎರಡನೇ ಟೆಸ್ಟ್ ಆಡಿಲೇಡ್‌ನಲ್ಲಿ ಆಡಲಿದೆ. ಈ ವೇಳೆ ಈ ಪಂದ್ಯ ಹಗಲು ರಾತ್ರಿ ನಡೆಯಲಿದೆ. ಹೀಗಾಗಿ ಈ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾ ಒಂದು ಹಗಲು ರಾತ್ರಿ ಅಭ್ಯಾಸ ಪಂದ್ಯವನ್ನು ಸಹ ಆಡಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications