Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಭಾರತೀಯ ಪುರುಷ, ಮಹಿಳಾ ತಂಡ ಜೊತೆಯಾಗಿ ಮುಂಬೈಗೆ ಪ್ರಯಾಣ

 BCCI shares pictures of Team Indias men and women’s contingents for England tour heading to Mumbai

ಟೀಮ್ ಇಂಡಿಯಾ ಪುರುಷರ ತಂಡ ಜೂನ್ ಮೊದಲನೇ ವಾರ ಇಂಗ್ಲೆಂಡ್‌ಗೆ ಹಾರಲಿದ್ದು, ಜೂನ್ 18ರಿಂದ ನ್ಯೂಜಿಲೆಂಡ್ ವಿರುದ್ಧ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯವನ್ನು ಮತ್ತು ಆಗಸ್ಟ್ 4ರಿಂದ ಇಂಗ್ಲೆಂಡ್ ವಿರುದ್ಧ 5 ಟೆಸ್ಟ್ ಪಂದ್ಯಗಳ ಸರಣಿಯನ್ನು ಆಡಲಿದೆ.

ಜೂನ್ 2ರಂದು ಟೀಮ್ ಇಂಡಿಯಾ ಪುರುಷರ ತಂಡ ಇಂಗ್ಲೆಂಡ್‌ಗೆ ಹಾರುವ ಸಾಧ್ಯತೆಯಿದೆ. ಇಂಗ್ಲೆಂಡ್ ನೆಲದಲ್ಲಿಯೇ ಭಾರತೀಯ ವನಿತೆಯರ ತಂಡ ಕೂಡ ಸರಣಿಯನ್ನಾಡಲಿದ್ದು ಟೀಂ ಇಂಡಿಯಾ ಪುರುಷರ ತಂಡದ ಜೊತೆ ಇವರೂ ಕೂಡ ಇಂಗ್ಲೆಂಡ್‌ಗೆ ಹಾರುವ ಸಾಧ್ಯತೆಗಳಿವೆ. ಅದಕ್ಕೂ ಮೊದಲು ಮುಂಬೈನಲ್ಲಿ ಪುರುಷ ಮತ್ತು ಮಹಿಳಾ ತಂಡಗಳೆರಡೂ ಕ್ವಾರಂಟೈನ್ ನಿಯಮ ಪಾಲಿಸುವ ಅಗತ್ಯವಿದ್ದು ಬುಧವಾರ ಮುಂಬೈಗೆ ಪ್ರಯಾಣ ಬೆಳೆಸಿವೆ.

ಬಿಸಿಸಿಐ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಭಾರತೀಯ ಪುರುಷ ಮತ್ತು ಮಹಿಳೆಯರ ತಂಡಗಳೆರಡೂ ಸಾಮಾಜಿಕ ಅಂತರದೊಂದಿಗೆ ವಿಮಾನದಲ್ಲಿ ಮುಂಬೈಗೆ ಪ್ರಯಾಣ ಬೆಳೆಸಿರುವ ಚಿತ್ರವೊಂದನ್ನು ಹಂಚಿಕೊಂಡಿದ್ದು ಮೊದಲ ನಿಲ್ದಾಣ ಮುಂಬೈ ಎಂದು ಬರೆದುಕೊಂಡಿದೆ. ಭಾರತದ ರವಿಚಂದ್ರನ್ ಅಶ್ವಿನ್, ಮಿಥಾಲಿ ರಾಜ್, ಮಯಾಂಕ್ ಅಗರ್ವಾಲ್ ಹಾಗೂ ವಾಷಿಂಗ್ಟನ್ ಸುಂದರ್ ಬಿಸಿಸಿಐ ಹಂಚಿಕೊಂಡಿರುವ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮುಂಬೈ ತಲುಪಿದ ನಂತರ ಆಟಗಾರರು ಕ್ವಾರಂಟೈನ್‌ಗೆ ಒಳಗಾಗಲಿದ್ದು ಜೂನ್ 2ರಂದು ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದ್ದಾರೆ.

Story first published: Wednesday, May 19, 2021, 21:55 [IST]
Other articles published on May 19, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+