Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಟೀಮ್ ಇಂಡಿಯಾಗೆ ಹೊಸ ಕಿಟ್ ಪ್ರಾಯೋಜಕರು: MPL ಜೊತೆ ಒಪ್ಪಂದ ಮಾಡಿಕೊಂಡ ಬಿಸಿಸಿಐ

BCCI signs three-year kit sponsorship deal with Mobile Premiere League

ಟೀಮ್ ಇಂಡಿಯಾದ ಕಿಟ್ ಪ್ರಾಯೋಜಕತ್ವ ಬದಲಾವಣೆಯಾಗಿದೆ. ಮೊಬೈಲ್ ಪ್ರೀಮಿಯರ್ ಲೀಗ್ ಜೊತೆಗೆ ಹೊಸದಾಗಿ ಬಿಸಿಸಿಐ ಕಿಟ್ ಪ್ರಾಯೋಜಕತ್ವ ಒಪ್ಪಂದವನ್ನು ಮಾಡಿಕೊಂಡಿದ್ದು ಮುಂದಿನ ಮೂರು ವರ್ಷಗಳವರೆಗಿನ ಒಡಂಬಡಿಕೆ ನಡೆದಿದೆ. ಹೀಗಾಗಿ ಇನ್ನು ಮೂರು ವರ್ಷಗಳ ಕಾಲ MPL ಲೋಗೋ ಟೀಮ್ ಇಂಡಿಯಾ ಜರ್ಸಿಯಲ್ಲಿ ಕಾಣಿಸಿಕೊಳ್ಳಲಿದೆ.

ನವೆಂಬರ್ 2020ರಿಂದ 2023ರ ಡಿಸೆಂಬರ್ ವರೆಗೆ ಈ ಒಪ್ಪಂದವನ್ನು ಬಸಿಸಿಐ ಮಾಡಿಕೊಂಡಿದೆ. ಈ ಅವಧಿಯಲ್ಲಿ ಟೀಮ್ ಇಂಡಿಯಾ ಪಾಲ್ಗೊಳ್ಳುವ ಪ್ರತಿ ಪಂದ್ಯಕ್ಕೂ ಬಿಸಿಸಿಐ 65 ಲಕ್ಷ ರೂಪಾಯಿ ಈ ಪ್ರಾಯೋಜಕತ್ವದ ಒಪ್ಪಂದದಿಂದ ಪಡೆದುಕೊಳ್ಳಲಿದೆ. ಜೊತೆಗೆ 3 ವರ್ಷಗಳಲ್ಲಿ ಪ್ರತಿ ವರ್ಷ 3ಕೋಟಿ ವ್ಯಾಪಾರೀಕರಣ ಮೊತ್ತ ಬಿಸಿಸಿಐ ಪಾಲಾಗಲಿದೆ.

ಇದಕ್ಕೂ ಮುನ್ನ ನೈಕ್ ಕಂಪನಿ ಬಿಸಿಸಿಐ ಜೊತೆಗೆ ಈ ಒಪ್ಪಂದವನ್ನು ಮಾಡಿಕೊಂಡಿತ್ತು. ಆದರೆ ಈ ಒಪ್ಪಂದದ ಅವಧಿ ಮುಕ್ತಾಯವಾದ ಬಳಿಕ ಮುಂದುವರಿಸದಿರಲು ನೈಕ್ ನಿರ್ಧರಿಸಿತ್ತು. ವಿಶ್ವಾದ್ಯಂತ ಕೊರೊನಾ ವೈರಸ್‌ ದಾಳಿಯ ಕಾರಣದಿಂದಾಗಿ ಉಂಟಾಗಿರುವ ನಷ್ಟದ ಕಾರಣವನ್ನು ನೀಡಿತ್ತು ನೈಕ್. ಹೀಗಾಗಿ ಬಿಸಿಸಿಐ ಹೊಸ ಒಪ್ಪಂದಕ್ಕಾಗಿ ಆಹ್ವಾನವನ್ನು ನೀಡಿತ್ತು.

ಕೊರೊನಾ ವೈರಸ್‌ನ ಬಳಿಕ ಟೀಮ್ ಇಂಡಿಯಾ ತನ್ನ ಮೊದಲ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯವನ್ನು ಆಸ್ಟ್ರೇಲಿಯಾ ವಿರುದ್ಧ ಆಡಲಿದೆ. ಆಸ್ಟ್ರೇಲಿಯಾಗೆ ಪ್ರವಾಸ ಕೈಗೊಳ್ಳಲಿರುವ ಭಾರತ ಸೀಮಿತ ಓವರ್‌ಗಳ ಸರನಿ ಹಾಗೂ ಟೆಸ್ಟ್ ಸರಣಿಯನ್ನು ಆಡಲಿದೆ. ಇದೇ ತಿಂಗಳ 27ರಿಂದ ಈ ಸರಣಿಗೆ ಚಾಲನೆ ದೊರೆಯಲಿದೆ.

Story first published: Monday, November 2, 2020, 12:03 [IST]
Other articles published on Nov 2, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+