ಮ್ಯಾಂಚೆಸ್ಟರ್‌ನಿಂದ ಟ್ರಿನಿಡಾಡ್‌ಗೆ ಟೀಮ್ ಇಂಡಿಯಾ ಪ್ರಯಾಣಿಸಲು ಬಿಸಿಸಿಐ ಮಾಡಿದ ಖರ್ಚು ಎಷ್ಟು ಗೊತ್ತಾ!

ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ಮುಕ್ತಾಯದ ಬಳಿಕ ಭಾರತೀಯ ಕ್ರಿಕೆಟ್ ತಂಡ ವೆಸ್ಟ್ ಇಂಡೀಸ್ ವಿರುದ್ಧ ವೈಟ್‌ಬಾಲ್ ಸರಣಿಯನ್ನಾಡಲು ಸಜ್ಜಾಗಿದೆ. ಮೊದಲಿಗೆ ಮೂರು ಪಮದ್ಯಗಳ ಏಕದಿನ ಸರಣಿ ನಡೆಯಲಿದ್ದು ಬಳಿಕ ಐದು ಪಂದ್ಯಗಳ ಟಿ20 ಸರಣಿ ಆಯೋಜನೆಯಾಗಲಿದೆ. ಮುಂಬರುವ ಟಿ20 ವಿಶ್ವಕಪ್‌ನ ದೃಷ್ಟಿಯಿಂದ ಆಟಗಾರರ ಫಾರ್ಮ್ ಕಂಡುಕೊಳ್ಳಲು ಈ ಸರಣಿ ಭಾರತ ಹಾಗೂ ವೆಸ್ಟ್ ಇಂಡೀಸ್ ಎರಡೂ ತಂಡಗಳಿಗೂ ಪ್ರಮುಖವಾಗಿದೆ.
ಆದರೆ ಈ ಸರಣಿಯಲ್ಲಿ ಪಾಲ್ಗೊಳ್ಳಲು ಭಾರತ ತಂಡದ ಪ್ರಯಾಣಕ್ಕೆ ಮಾಡಿದ ವೆಚ್ಚ ಇದೀಗ ಬಹಿರಂಗವಾಗಿದ್ದು ಕ್ರಿಕೆಟ್ ಪ್ರೇಮಿಗಳು ದಂಗಾಗುವಂತಿದೆ. ಇಂಗ್ಲೆಂಡ್‌ನಲ್ಲಿ ಏಕದಿನ ಸರಣಿಯಲ್ಲಿ ಭಾಗಿಯಾಗಿದ್ದ ಭಾರತೀಯ ತಂಡದ ಆಟಗಾರರನ್ನು ಆ ಸರಣಿ ಮುಕ್ತಾಯವಾದ ಬಳಿಕ ಮ್ಯಾಂಚೆಸ್ಟರ್‌ನಿಂದ ಟ್ರಿನಿಡಾಡ್‌ನ ಪೋರ್ಟ್ ಆಫ್ ಸ್ಪೇನ್‌ಗೆ ಚಾರ್ಟರ್ಡ್ ವಿಮಾನದಲ್ಲಿ ಕರೆತರಲಾಗಿದೆ.
ಪ್ರಯಾಣಕ್ಕೆ 3.5 ಕೋಟಿ ಖರ್ಚು: ಇಂಗ್ಲೆಂಡ್‌ನಿಂದ ಕೆರಿಬಿಯನ್ ರಾಷ್ಟ್ರಕ್ಕೆ 16 ಸದಸ್ಯರ ಭಾರತೀಯ ಆಟಗಾರರ ತಂಡವನ್ನು ಖಾಸಗಿ ವಿಮಾನದಲ್ಲಿ ಕಳುಹಿಸಲಾಗಿದೆ. ಈ ಪ್ರಯಾಣಕ್ಕೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ 3. ಕೋಟಿ ರೂಪಾಯಿ ವೆಚ್ಚ ಮಾಡಿದೆ ಎಂದು ಮಾಹಿತಿ ತಿಳಿದು ಬಂದಿದೆ. ಭಾರತೀಯ ತಂಡದಲ್ಲಿ ಕ್ರಿಕೆಟ್ ಆಟಗಾರರು ಹಾಗೂ ಸಿಬ್ಬಂದಿಗಳ ಜೊತೆಗೆ ಕೆಲ ಆಟಗಾರರ ಪತ್ನಿಯರು ಕೂಡ ಇದ್ದ ಕಾರಣ ಚಾರ್ಟರ್ಡ್ ವಿಮಾನದಲ್ಲಿ ಪ್ರಯಾಣಿಸಬೇಕಾಯಿತು ಎನ್ನಲಾಗಿದೆ.
ಈ ಬಗ್ಗೆ ಬಿಸಿಸಿಐ ಮೂಲಗಳು ಮಾಹಿತಿ ನೀಡಿದೆ. ಭಾರತೀಯ ಪಡೆಯಲ್ಲಿ ಆಟಗಾರರ ಜೊತೆಗೆ ಅವರ ಪತ್ನಿಯರು ಹಾಗೂ ಸಿಬ್ಬಂದಿಗಳು ಕೂಡ ಇದ್ದರು. ದೊಡ್ಡ ಬಳಗವಾಗಿದ್ದ ಕಾರಣ ವಾಣಿಜ್ಯ ವಿಮಾನದಲ್ಲಿ ಪ್ರಯಾಣಿಸುವುದು ಕಷ್ಟವಾಗಿತ್ತು ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಟೈಮ್ಸ್ ಆಪ್ ಇಂಡಿಯಾಗೆ ಹೇಳಿಕೆ ನೀಡಿದ್ದಾರೆ. ಹೀಗಾಗಿ ಚಾರ್ಟರ್ಡ್ ವಿಮಾನ ಅನಿವಾರ್ಯವಾಗಿತ್ತು ಅವರು ಹೇಳಿಕೆ ನೀಡಿದ್ದಾರೆ.
ಸಾಮಾನ್ಯವಾಗಿ ವಾಣಿಜ್ಯ ವಿಮಾನಗಳಲ್ಲಿ ಇದರ ಖರ್ಚು ಸುಮಾರು 2 ಕೋಟಿಗಳಷ್ಟಾಗಿರುತ್ತಿತ್ತು. ಮ್ಯಾಂಚೆಸ್ಟರ್‌ನಿಂದ ಪೋರ್ಟ್ ಆಫ್ ಸ್ಪೈನ್‌ಗೆ ಬುಸಿನೆಸ್ ಕ್ಲಾಸ್ ಒಂದು ಟಿಕೆಟ್‌ನ ದರ ಸುಮಾರು ಎರಡು ಲಕ್ಷದಷ್ಟಿದೆ. ಚಾರ್ಟರ್ಡ್ ವಿಮಾನ ಮತ್ತಷ್ಟು ದುಬಾರಿ. ಆದರೆ ಇದು ನಮಗೆ ಅನಿವಾರ್ಯವಾಗಿತ್ತು. ಈಗ ಹೆಚ್ಚಿನ ಅಗ್ರ ಫುಟ್ಬಾಲ್ ತಂಡಗಳು ತಮ್ಮ ಪ್ರಯಾಣಕ್ಕಾಗಿ ಚಾರ್ಟರ್ಡ್ ವಿಮಾನಗಳನ್ನು ಹೊಂದಿದೆ" ಎಂದಿದ್ದಾರೆ.
ಇನ್ನು ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿ ಶುಕ್ರವಾರದಿಂದ ಆರಂಭವಾಗಲಿದೆ. ಈ ಏಕದಿನ ಸರಣಿಗೆ ಭಾರತದ ಖಾಯಂ ನಾಯಕ ರೋಹಿತ್ ಶರ್ಮಾ ಸೇರಿದಂತೆ ಕೆಲ ಅನುಭವಿ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ. ಇನ್ನು ಪ್ರಮುಖ ಆಟಗಾರ ವಿರಾಟ್ ಕೊಹ್ಲಿ ವಿಂಡೀಸ್ ವಿರುದ್ಧದ ಏಕದಿನ ಹಾಗೂ ಟಿ20 ಎರಡು ಮಾದರಿಯಿಂದಲೂ ಹೊರಗುಳಿದಿದ್ದು ವಿಶ್ರಾಂತಿಯಲ್ಲಿದ್ದಾರೆ.
ಸ್ಕ್ವಾಡ್‌ಗಳು ಹೀಗಿದೆ: ಭಾರತ ಏಕದಿನ ತಂಡ: ಶಿಖರ್ ಧವನ್ (ನಾಯಕ), ಋತುರಾಜ್ ಗಾಯಕ್ವಾಡ್, ಶುಬ್ಮನ್ ಗಿಲ್, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ದೀಪಕ್ ಹೂಡಾ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಇಶಾನ್ ಕಿಶನ್, ಸಂಜು ಸ್ಯಾಮ್ಸನ್, ಶಾರ್ದೂಲ್ ಠಾಕೂರ್, ಯುಜ್ವೇಂದ್ರ ಚಾಹಲ್, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್
ವೆಸ್ಟ್ ಇಂಡೀಸ್ ODI ತಂಡ: ನಿಕೋಲಸ್ ಪೂರನ್ (ನಾಯಕ), ಶಮ್ರಾಹ್ ಬ್ರೂಕ್ಸ್, ಬ್ರೆಂಡನ್ ಕಿಂಗ್, ರೋಮನ್ ಪೊವೆಲ್, ಕೀಸಿ ಕಾರ್ಟಿ, ಕೈಲ್ ಮೇಯರ್ಸ್, ಜೇಸನ್ ಹೋಲ್ಡರ್, ಗುಡಾಕೇಶ್ ಮೋಟಿ, ಕೀಮೋ ಪಾಲ್, ಶಾಯ್ ಹೋಪ್, ಅಕೆಲ್ ಹೊಸೈನ್, ಅಲ್ಜಾರಿ ಜೋಸೆಫ್, ಜೇಡನ್ ಸೀಲ್ಸ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications