ಟೀಮ್ ಇಂಡಿಯಾ ಆಟಗಾರರಿಗೆ ಖಡಕ್ ಎಚ್ಚರಿಕೆ ಕೊಟ್ಟ ಬಿಸಿಸಿಐ!
ಜುಲೈ 16 ಮಂಗಳವಾರ, ಇತ್ತೀಚಿನ ದಿನಗಳಲ್ಲಿ ದೇಶೀಯ ಕ್ರಿಕೆಟ್ ಅನ್ನು ಉತ್ತೇಜಿಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ಸಂಪೂರ್ಣ ಪ್ರಯತ್ನಗಳನ್ನು ಮಾಡುತ್ತಿದೆ. ಭಾರತ ಕ್ರಿಕೆಟ್‌ನಲ್ಲಿ ಸಾಕಷ್ಟು ಪ್ರತಿಭೆಗಳನ್ನು ಹೊಂದಿದೆ.
ತಂಡವನ್ನು ಆಯ್ಕೆ ಮಾಡಲು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸಾಕಷ್ಟು ಹೆಣಗಾಡಬೇಕಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಟೀಮ್ ಇಂಡಿಯಾದ ಹಿರಿಯ ಆಟಗಾರರ ಬಗ್ಗೆ ಬಿಸಿಸಿಐ ಮಹತ್ವದ ನಿರ್ಧಾರ ಕೈಗೊಳ್ಳಲು ಮುಂದಾಗಿದೆ.

ಯಾವುದೇ ಪ್ರವಾಸ ಅಥವಾ ಸರಣಿಗೆ 15 ಆಟಗಾರರನ್ನು ಬಿಸಿಸಿಐ ಆಯ್ಕೆ ಮಾಡುತ್ತದೆ. ತಂಡದಲ್ಲಿ ಅವಕಾಶ ಸಿಗದ ಉಳಿದ ಆಟಗಾರರು ವಿಶ್ರಾಂತಿ ಪಡೆಯುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಟೀಮ್ ಇಂಡಿಯಾದ ಹಿರಿಯ ಆಟಗಾರಿಗೆ ಬಿಸಿಸಿಐ ಪರ್ಯಾಯ ವ್ಯವಸ್ಥೆ ಮಾಡಿದೆ.
ಈ ನಿಟ್ಟಿನಲ್ಲಿ ತಂಡದಿಂದ ಹೊರಗಿರುವ ಎಲ್ಲ ಆಟಗಾರರು ಹಿರಿಯರಿರಲಿ, ಕಿರಿಯರಿರಲಿ ದೇಶೀಯ ಕ್ರಿಕೆಟ್‌ಗೆ ಅವಕಾಶ ಕಲ್ಪಿಸುವ ಯೋಜನೆಯನ್ನು ಬಿಸಿಸಿಐ ರೂಪಿಸಿದೆ.
ಬಿಸಿಸಿಐ ಖಡಕ್ ಎಚ್ಚರಿಕೆ
ಪಿಟಿಐ ವರದಿ ಪ್ರಕಾರ, ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ಅಂತರರಾಷ್ಟ್ರೀಯ ಕ್ರಿಕೆಟ್ ಆಡದಿದ್ದರೆ, ಎಲ್ಲಾ ಸ್ಟಾರ್ ಕ್ರಿಕೆಟಿಗರು ದೇಶೀಯ ಕ್ರಿಕೆಟ್‌ನಲ್ಲಿ ಆಡಬೇಕಾಗುತ್ತದೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ಆದರೆ, ಹಿರಿಯ ಆಟಗಾರರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಜಸ್ಪ್ರೀತ್ ಬುಮ್ರಾ ಅವರಿಗೆ ಇದರಿಂದ ವಿನಾಯಿತಿ ನೀಡಲಾಗಿದೆ. ಎಲ್ಲಾ ಇತರ ಟೆಸ್ಟ್ ತಜ್ಞರು ಆಗಸ್ಟ್‌ನಲ್ಲಿ ದುಲೀಪ್ ಟ್ರೋಫಿಯ ಕನಿಷ್ಠ 1 ಪಂದ್ಯವನ್ನಾದರೂ ಆಡಬೇಕೆಂದು ಬಿಸಿಸಿಐ ಹೇಳಿದೆ.
ಇದರ ನಂತರ, ಟೀಮ್ ಇಂಡಿಯಾ ಸೆಪ್ಟೆಂಬರ್‌ನಲ್ಲಿ ಬಾಂಗ್ಲಾದೇಶ ಮತ್ತು ಅಕ್ಟೋಬರ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ತವರಿನ ಟೆಸ್ಟ್ ಸರಣಿಯನ್ನು ಆಡಲಿದೆ.
ಬಿಸಿಸಿಐ ಕೆಂಗಣ್ಣಿಗೆ ಕಿಶನ್-ಅಯ್ಯರ್ ಗುರಿ
ಟೀಮ್ ಇಂಡಿಯಾದ ಯುವ ಬ್ಯಾಟರ್ ತಮ್ಮ ತಪ್ಪಿಗೆ ಬೆಲೆ ಕೊಡುತ್ತಿದ್ದಾರೆ. ದೇಶೀಯ ಕ್ರಿಕೆಟ್ ಆಡುವ ಬಿಸಿಸಿಐ ಆದೇಶವನ್ನು ತಿರಸ್ಕರಿಸಿದ ಶ್ರೇಯಸ್ ಅಯ್ಯರ್ ಮತ್ತು ಇಶಾನ್ ಕಿಶನ್ ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗದ್ದಾರೆ. ಪರಿಣಾಮ ಈಗ ಇಬ್ಬರೂ ಆಟಗಾರರು ಕೇಂದ್ರ ಒಪ್ಪಂದದಿಂದ ಹೊರಗುಳಿದಿದ್ದಾರೆ.
ಇಶಾನ್ ಕಿಶನ್ ವಿರಾಮ ಕೇಳಿದ್ದರು, ಆದರೆ ಟೀಮ್ ಇಂಡಿಯಾದ ತಂಡದಿಂದ ಹೊರಗುಳಿದ ನಂತರ ದೇಶೀಯ ಕ್ರಿಕೆಟ್ ಆಡಲು ಬಿಸಿಸಿಐ ಹೇಳಿತ್ತು. ಮಂಡಳಿಯ ಆದೇಶವನ್ನು ಇಶಾನ್ ಪಾಲಿಸಲಿಲ್ಲ.
ಶ್ರೇಯಸ್ ಅಯ್ಯರ್ ಸ್ಥಿತಿಯೂ ಇದೇ ಆಗಿತ್ತು. ಇಲ್ಲಿಯವರೆಗೆ ಇಬ್ಬರೂ ಆಟಗಾರರು ಟೀಮ್ ಇಂಡಿಯಾದಲ್ಲಿ ಪುನರಾಗಮನ ಮಾಡುವಲ್ಲಿ ಯಶಸ್ವಿಯಾಗಲಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications