Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಇರಾನಿ ಕಪ್ ಸೇರಿ ಎಲ್ಲಾ ದೇಸಿ ಟೂರ್ನಿಗಳ ರದ್ದುಗೊಳಿಸಿದ ಬಿಸಿಸಿಐ

BCCI suspends all domestic tournaments including Irani Cup

ನವದೆಹಲಿ, ಮಾರ್ಚ್ 14: ಆತಂಕಕಾರಿಯಾಗಿ ಹಬ್ಬುತ್ತಿರುವ ಕೊರೊನಾ ವೈರಸ್ ಸೋಂಕಿನ ಕಾರಣ, ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾವು (ಬಿಸಿಸಿಐ) ಇರಾನಿ ಕಪ್ ಸೇರಿಸಿ ಎಲ್ಲಾ ದೇಸಿ ಟೂರ್ನಿಗಳನ್ನು ರದ್ದು ಮಾಡಿದೆ. ಇದರೊಂದಿಗೆ ದೇಶದಲ್ಲಿನ ಯಾವುದೇ ಪ್ರಮುಖ ಕ್ರೀಡಾಕೂಟಗಳು ನಡೆಯುತ್ತಿಲ್ಲ.

'ನೋವೆಲ್ ಕೊರೊನಾ ವೈರಸ್ ಸೋಂಕಿನಿಂದಾಗಿ ಬಿಸಿಸಿಐ ಶನಿವಾರ (ಮಾರ್ಚ್ 14) ಪೇಟಿಎಂ ಇರಾನಿ ಕಪ್, ಹಿರಿಯ ಮಹಿಳೆಯರ ಒನ್‌ ಡೇ ನಾಕೌಟ್, ವಿಝ್ಝಿ ಟ್ರೋಫಿ, ಹಿರಿಯ ಮಹಿಳೆಯರ ಒನ್ ಡೇ ಚಾಲೆಂಜೆ, ಮಹಿಳೆಯರ ಅಂಡರ್ 19 ಒನ್‌ ಡೇ ನಾಕೌಟ್, ಮಹಿಳೆಯರ ಅಂಡರ್ 19 ಟಿ20 ಲೀಗ್, ಸೂಪರ್ ಲೀಗ್ ಆ್ಯಂಡ್ ನಾಕೌಟ್, ಮಹಿಳೆಯರ ಅಂಡರ್ 19 ಚಾಲೆಂಜ್ ಟ್ರೋಫಿ, ಮಹಿಳೆಯರ ಅಂಡರ್ 23 ನಾಕೌಟ್, ಮಹಿಳೆಯರ ಅಂಡರ್ 23 ಒನ್ ಡೇ ಚಾಲೆಂಜರ್ ಈ ಎಲ್ಲಾ ಪಂದ್ಯಗಳನ್ನು ಮುಂದಿನ ಸೂಚನೆ ಬರುವವರೆಗೂ ಹಿಡಿದಿಟ್ಟುಕೊಂಡಿದೆ,' ಎಂದು ಹೇಳಿಕೆಯಲ್ಲಿ ಬಿಸಿಸಿಐ ತಿಳಿಸಿದೆ.

ಈ ಪ್ರಕಟನೆ ನೀಡಿವುದಕ್ಕೂ ಮುನ್ನ ಬಿಸಿಸಿಐಯು ದಕ್ಷಿಣ ಆಫ್ರಿಕಾ-ಭಾರತ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯಗಳನ್ನು ಅಮಾನತುಗೊಳಿಸಿತ್ತು. ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಪಂದ್ಯ ಮಳೆಯಿಂದ ರದ್ದಾಗಿತ್ತು. ಇನ್ನೆರಡು ಪಂದ್ಯಗಳನ್ನು ಕೊರೊನಾ ವೈರಸ್ ಸೋಂಕಿನ ತೀವ್ರತೆಯಿಂದಾಗಿ ರದ್ದುಗೊಳಿಸಲಾಗಿದೆ.

Story first published: Saturday, March 14, 2020, 17:13 [IST]
Other articles published on Mar 14, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+