For Quick Alerts
ALLOW NOTIFICATIONS  
For Daily Alerts
 

'ಐಪಿಎಲ್ 2020' ಟೂರ್ನಿ ಅನಿರ್ದಿಷ್ಟಾವಧಿವರೆಗೆ ಮುಂದೂಡಿಕೆ!

BCCI tells franchises IPL ‘postponed indefinitely’ but no official word yet

ನವದೆಹಲಿ, ಏಪ್ರಿಲ್ 14: ಕೊರೊನಾವೈರಸ್ ಕಾರಣದಿಂದಾಗಿ ಭಾರತದ ಅದ್ದೂರಿ ಕ್ರಿಕೆಟ್ ಹಬ್ಬ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2020 ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ ಎಂದು ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾಯು (ಬಿಸಿಸಿಐ) ಫ್ರಾಂಚೈಸಿಗಳಿಗೆ ತಿಳಿಸಿದೆ ಎನ್ನಲಾಗಿದೆ. ಆದರೆ ಅಧಿಕೃತವಾಗಿ ಇನ್ನೂ ಈ ವಿಚಾರ ಘೋಷಿಸಲಾಗಿಲ್ಲ.

ಕೊರೊನಾ ವೈರಸ್‌ನಿಂದಾಗಿ ಏಪ್ರಿಲ್ 15ರ ವರೆಗೆ ಐಪಿಎಲ್ 13ನೇ ಆವೃತ್ತಿಯನ್ನು ಮುಂದೂಡಲಾಗಿದೆ ಎಂದು ಬಿಸಿಸಿಐ ಈ ಮೊದಲು ಹೇಳಿತ್ತು. ಆದರೆ ಏಪ್ರಿಲ್ 14ರ ವರೆಗೆ ನಿಗದಿಯಾಗಿದ್ದ ನಿಷೇಧ ಮೇ 3ರವರೆಗೆ ಮುಂದೂಡಲ್ಪಟ್ಟಿರುವುದರಿಂದ ಏಪ್ರಿಲ್‌ನಲ್ಲಿ ಐಪಿಎಲ್ ನಡೆಸಲು ಬಿಸಿಸಿಐಗೆ ಅವಕಾಶ ಲಭಿಸಿಲ್ಲ.

'ಹೌದು, ಐಪಿಎಲ್ ಮುಂದೂಡಲಾಗಿದೆ ಎಂದು ಬಿಸಿಸಿಐ ನಮಗೆ ಮಾಹಿತಿ ನೀಡಿದೆ. ಆದರೆ ಪರಿಸ್ಥಿತಿ ಸುಧಾರಿಸಿದರೆ ಈ ವರ್ಷದ ಕೊನೆಯಲ್ಲಿ ಐಪಿಎಲ್ ನಡೆಯುವ ನಿರೀಕ್ಷೆಯಿದೆ,' ಎಂದು ಹೆಸರು ತಿಳಿಸಲಿಚ್ಛಿಸದ ಐಪಿಎಲ್‌ ಫ್ರಾಂಚೈಸಿಯೊಂದರ ಹಿರಿಯ ಅಧಿಕಾರಿಯೊಬ್ಬರು ಪಿಟಿಐ ಜೊತೆ ಹೇಳಿಕೊಂಡಿದ್ದಾರೆ.

ಹಿಂದಿನ ವೇಳಾಪಟ್ಟಿಯ ಪ್ರಕಾರ ಮಾರ್ಚ್ 29ರಿಂದ ಐಪಿಎಲ್ ಆರಂಭವಾಗಬೇಕಿತ್ತು. ಆದರೆ ಕೋವಿಡ್-19ನಿಂದಾಗಿ ಐಪಿಎಲ್ ಮುಂದೂಡಲ್ಪಟ್ಟಿದೆ. ಸದ್ಯದ ಪರಿಸ್ಥಿತಿ ಗಮನಿಸಿದರೆ ಐಪಿಎಲ್ ನಡೆಯುವ ಸಾಮಾನ್ಯ ತಿಂಗಳಾದ ಏಪ್ರಿಲ್-ಮೇನಲ್ಲಿ ಟೂರ್ನಿ ಆರಂಭಿಸುವ ಸಾಧ್ಯತೆ ತುಂಬಾ ಕಡಿಮೆಯಿದೆ. ಐಪಿಎಲ್ ಮತ್ತೂ ಮುಂದೂಡಲ್ಪಟ್ಟರೆ ಯಾವತ್ತು ನಡೆಯಲಿದೆ ಅನ್ನೋದು ಇನ್ನೂ ಸ್ಪಷ್ಟಗೊಂಡಿಲ್ಲ.

Story first published: Tuesday, April 14, 2020, 23:33 [IST]
Other articles published on Apr 14, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+