ವಿಶ್ವಕಪ್ 2019ಗಾಗಿ ಏಪ್ರಿಲ್ 15ರಂದು ಟೀಂ ಇಂಡಿಯಾ ಪ್ರಕಟ


ಮುಂಬೈ, ಏಪ್ರಿಲ್ 08: ಐಸಿಸಿ ವಿಶ್ವಕಪ್ ಕ್ರಿಕೆಟ್ ಟೂರ್ನಮೆಂಟ್ ಗಾಗಿ ತಂಡಗಳನ್ನು ಪ್ರಕಟಿಸಲು ಏಪ್ರಿಲ್ 18 ಕೊನೆ ದಿನವಾಗಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಹಾಗೂ ಕ್ರಿಕೆಟ್ ಆಡಳಿತ ಸಮಿತಿ(ಸಿಒಎ), ಭಾರತ ತಂಡವನ್ನು ಏಪ್ರಿಲ್ 15ರಂದು ಪ್ರಕಟಿಸುವುದಾಗಿ ಘೋಷಿಸಿದೆ. ಐದು ಸದಸ್ಯರ ಆಯ್ಕೆ ಸಮಿತಿ ತಂಡದ ಘೋಷಣೆ ಮಾಡಲಿದೆ.
ಇಂಗ್ಲೆಂಡ್ ಹಾಗೂ ವೇಲ್ಸ್ ನಲ್ಲಿ ಮೇ.30 ರಿಂದ ಪಂದ್ಯಗಳು ಪ್ರಾರಂಭವಾಗಲಿದೆ. ಐಪಿಎಲ್ ಎರಡನೇ ವಾರದಲ್ಲಿ ಭಾರತೀಯ ಆಟಗಾರರು ವಿಶ್ರಾಂತಿ ಪಡೆದು ವಿಶ್ವಕಪ್ ಗೆ ಸಿದ್ಧವಾಗುವ ಸಾಧ್ಯತೆಯಿದೆ.
ಐಸಿಸಿ ಅದೇಶದ ಪ್ರಕಾರ ಏಪ್ರಿಲ್ 23ರೊಳಗೆ ಅಂತಿಮ ಪಟ್ಟಿಯನ್ನು ಎಲ್ಲಾ 10 ಅರ್ಹ ದೇಶಗಳು ಸಲ್ಲಿಸಬೇಕು. 15 ಆಟಗಾರರ ಪಟ್ಟಿಯಲ್ಲಿ ಏನಾದರೂ ಬದಲಾವಣೆಗಳಿದ್ದರೆ ಟೂರ್ನಿ ಆರಂಭದ 7 ದಿನಗಳೊಳಗೆ ಸರಿಪಡಿಸಿಕೊಳ್ಳಬೇಕಾಗುತ್ತದೆ.
ಈ ಬಾರಿ ವಿಶ್ವಕಪ್ ನಲ್ಲಿ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗಲಿದೆ. ಜೂನ್ 5ರಂದು ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವೆ ಪಂದ್ಯಾವಳಿ ನಡೆಯಲಿದೆ.
ಟೀಂ ಇಂಡಿಯಾದಲ್ಲಿ ನಾಲ್ಕನೇ ಕ್ರಮಾಂಕದ ಬ್ಯಾಟ್ಸ್ ಮನ್ ಹಾಗೂ ಮತ್ತೊಬ್ಬ ವಿಕೆಟ್ ಕೀಪರ್ ಯಾರಾಗಲಿದ್ದಾರೆ ಎಂಬ ಕುತೂಹಲ ಮನೆ ಮಾಡಿದೆ. 4ನೇ ಕ್ರಮಾಂಕಕ್ಕೆ ಅಂಬಟಿ ರಾಯುಡು, ವಿಜಯಶಂಕರ್ ಹೆಸರು ಮುಂಚೂಣಿಯಲ್ಲಿದ್ದರೆ, ವಿಕೆಟ್ ಕೀಪರ್ ಸ್ಥಾನಕ್ಕೆ ದಿನೇಶ್ ಕಾರ್ತಿಕ್ ಹಾಗೂ ರಿಷಬ್ ಪಂತ್ ಹೆಸರು ಓಡಾಡುತ್ತಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications