
ವಿವೋ ಹೆಸರಿನಲ್ಲಿದ್ದ ಈ ಬಾರಿಯ ಐಪಿಎಲ್‌ನ ಶೀರ್ಷಿಕೆ ಪ್ರಾಯೋಜಕತ್ವ ಭಾರೀ ವಿರೋಧ ವ್ಯಕ್ತವಾದ ಕಾರಣ ಅಮಾನತಾಗಿದೆ. ಹೀಗಾಗಿ ಹೊಸ ಪ್ರಾಯೋಜಕರನ್ನು ಬಿಸಿಸಿಐ ಆಯ್ಕೆ ಮಾಡಿಕೊಳ್ಳಬೇಕಿದೆ. ಇದಕ್ಕೆ ಈಗಾಗಲೇ ಹಲವಾರು ಕಂಪನಿಗಳು ಬಿಡ್ ಸಲ್ಲಿಸಿದ್ದು ಯಾರ ಪಾಲಾಗಲಿದೆ ಎಂಬುದು ಇನ್ನಷ್ಟೇ ಅಧಿಕೃತವಾಗಬೇಕಿದೆ.
ಸದ್ಯದ ವರದಿಗಳ ಪ್ರಕಾರ ಈ ಬಾರಿಯ ಐಪಿಎಲ್ ಟೈಟರ್ ಪ್ರಾಯೋಜತ್ವದ ರೇಸ್‌ನಲ್ಲಿ ಭಾರತಿಯ ಮೂಲದ ಕಂಪನಿ 'ಟಾಟಾ ಸನ್ಸ್' ಮುಂದಿದೆ ಎನ್ನಲಾಗುತ್ತಿದೆ. ಮತ್ತೊಂದೆಡೆ ಭಾರತಿಯ ಕಂಪನಿಗಳೇ ಆಟ ಬೈಜುಸ್, ಅನಕಾಡೆಮಿ ಮತ್ತು ರಿಲಯನ್ಸ್ ಜಿಯೋ ಕೂಡ ತಮ್ಮ ಶೀರ್ಷಿಕೆ ಪ್ರಾಯೋಜಕತ್ವ ಹಾಕಿಕೊಳ್ಳಲು ಉತ್ಸಾಹದಲ್ಲಿದೆ ಎನ್ನಲಾಗುತ್ತಿದೆ.
ವಿವೋ ವರ್ಷಕ್ಕೆ ಐಎನ್ಆರ್ 440 ಕೋಟಿ ಒಪ್ಪಂದ ವನ್ನು ಮಾಡಿಕೊಂಡಿದ್ದ ಕಾರಣ ಅಷ್ಟು ದೊಡ್ಡ ಮೊತ್ತಕ್ಕೆ ಪರ್ಯಾಯವನ್ನು ಹುಡುಕಿಲೊಳ್ಳುವುದು ಮಂಡಳಿಯ ದೊಡ್ಡ ಚಿಂತೆಯಾಗಿತ್ತು. ಆದರೆ ಕೈಗಾರಿಕಾ ತಜ್ಞರು ಕೊರೊನಾ ವೈರಸ್‌ನ ಕಾರಣದಿಂದಾಗಿ ಉಂಟಾದ ಆರ್ಥಿಕ ಪರಿಣಾಮವನ್ನು ಗಮನದಲ್ಲಿಟ್ಟುಕೊಂಡು ಅದನ್ನು ತಳ್ಳಿಹಾಕಿದ್ದಾರೆ. ಈವರೆಗೆ ತಜ್ಞರು ಹೇಳುತ್ತಿರುವುದಕ್ಕೆ ಗಮನಿಸಿದರೆ ಬಿಸಿಸಿಐ ದೊಡ್ಡ ಮೊತ್ತವನ್ನು ಪಡೆಯುವ ಸಾಧ್ಯತೆಯಿದೆ.
ಮತ್ತೊಂದೆಡೆ ಚೀನಾದ ಮೊಬೈಲ್ ತಯಾರಕರಿಂದ ಪಡೆಯಬಹುದಾಗಿದ್ದ ಅರ್ಧದಷ್ಟು ಮೊತ್ತದಲ್ಲಿ ಮಂಡಳಿಯು ಇತ್ಯರ್ಥಪಡಿಸಬಹುದು ಎಂದು ಕೆಲವರು ಹೇಳಿದರೆ, ಹೊಸ ಶೀರ್ಷಿಕೆ ಪ್ರಾಯೋಜಕತ್ವವು ಬಿಸಿಸಿಐಗೆ 300 ರಿಂದ 400 ಕೋಟಿ ರೂ.ಗಳವರೆಗೆ ಗಳಿಸಬಹುದು ಎಂದು ವರದಿಯಾಗಿದೆ.
ಶೀರ್ಷಿಕೆ ಪ್ರಾಯೋಜಕತ್ವದ ಎಲ್ಲಾ ಹಂತಗಳು ಅಂತಿಮ ಹಂತದಲ್ಲಿದ್ದು ಘೋಷಣೆ ಮಾತ್ರವೇ ಬಾಕಿಯಿದ ಎಎನ್ನಲಾಗುತ್ತಿದೆ. ಹೀಗಾಗಿ ಇಂದೇ ಬಿಸಿಸಿಐ ಈ ಬಾರಿಯ ಐಪಿಎಲ್‌ನ ಹೊಸ ಶೀರ್ಷಿಕೆ ಪ್ರಾಯೋಜಕರನ್ನು ಘೋಷಣೆ ಮಾಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.