ಐಪಿಎಲ್ ದ್ವಿತೀಯ ಹಂತದಲ್ಲಿ 30,000 ಆರ್‌ಟಿ-ಪಿಸಿಆರ್ ಪರೀಕ್ಷೆಗಳ ನಡೆಸಲಿದೆ ಬಿಸಿಸಿಐ

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ದ್ವಿತೀಯ ಹಂತದ ಟೂರ್ನಿಗೆ ಕ್ಷಣ ಗಣನೆ ಶುರುವಾಗಿದೆ. ಇದೇ ತಿಂಗಳು ಅಂದರೆ ಸೆಪ್ಟೆಂಬರ್ 19ರಿಂದ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ 2021ರ ಐಪಿಎಲ್ ದ್ವಿತೀಯ ಹಂತದ ಪಂದ್ಯಗಳು ಶುರುವಾಗಲಿವೆ. ನಗದು ಶ್ರೀಮಂತ ಟೂರ್ನಿಗಾಗಿ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ತಯಾರಿ ಮಾಡಿಕೊಳ್ಳುತ್ತಿದೆ.
ಕೋವಿಡ್-19 ಭೀತಿಯ ನಡುವೆಯೇ ಐಪಿಎಲ್ 2021ರ ದ್ವಿತೀಯ ಹಂತದ ಪಂದ್ಯಗಳು ನಡೆಯಲಿರುವುದರಿಂದ ಬಿಸಿಸಿಐ ಮುನ್ನೆಚ್ಚರಿಕೆಯಾಗಿ ಸುಮಾರು 30,000 ಆರ್‌ಟಿ-ಪಿಸಿಆರ್ ಪರೀಕ್ಷೆಗಳ ನಡೆಸಲು ಯೋಚಿಸಿದೆ. ಎಲ್ಲಾ ಐಪಿಎಲ್ ಆಟಗಾರರು, ಬೆಂಬಲ ಸಿಬ್ಬಂದಿ, ಮಧ್ಯಸ್ಥಗಾರರು ಎಲ್ಲರಿಗೂ ಸೇರಿ ಸುಮಾರು 30,000 ಪರೀಕ್ಷೆಗಳನ್ನು ನಡೆಸಲಾಗುತ್ತದೆ ಎಂದು ಬಿಸಿಸಿಐ ಮಾಹಿತಿ ನೀಡಿದೆ.
ದುಬೈ ಮೂಲದ ಹೆಲ್ತ್ ಕೇರ್ ಕಂಪನಿ ಕೂಡ ಟೂರ್ನಿಯಲ್ಲಿ ಆರೋಗ್ಯಕ್ಕೆ ಸಂಬಂಧಿಸಿ ಜಾಗ್ರತೆ ವಹಿಸಲಿದೆ. ತುರ್ತು ಚಿಕಿತ್ಸೆ, ಸ್ಪೋರ್ಟ್ಸ್ ಮೆಡಿಸಿನ್, ಏರ್ ಆ್ಯಂಬ್ಯುಲೆನ್ಸ್ ಬೆಂಬಲ ಮೊದಲಾದ ಸೇವೆಗಳನ್ನು ಈ ಹೆಲ್ತ್ ಕೇರ್ ಕಂಪನಿ ನೀಡಲಿದೆ. ಐಪಿಎಲ್ ಬಯೋ ಬಬಲ್‌ನಿಂದ ಆಟಗಾರರು ಹೊರಗೆ ಹೋಗುವುದನ್ನು ತಪ್ಪಿಸಲು ಬಯೋ ಬಬಲ್ ಒಳಗೇನೇ ಆರೋಗ್ಯ ಸಿಬ್ಬಂದಿಗಳು ತಂಗಲಿದ್ದಾರೆ.
ಭಾರತದಲ್ಲಿ ಆರಂಭವಾಗಿದ್ದ ಐಪಿಎಲ್ ಟೂರ್ನಿ ಕೋವಿಡ್-19 ಕಾರಣದಿಂದಲೇ ಆರ್ಧಕ್ಕೆ ನಿಲ್ಲಿಸಲ್ಪಟ್ಟಿತ್ತು. ಐಪಿಎಲ್ ಫ್ರಾಂಚೈಸಿಗಳಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳು ಹೆಚ್ಚುತ್ತಾ ಸಾಗಿದ್ದರಿಂದ ಟೂರ್ನಿಯನ್ನು ಬಿಸಿಸಿಐ ಅಮಾನತುಗೊಳಿಸಿತ್ತು. ಆ ಟೂರ್ನಿ ಯುಎಇಯಲ್ಲಿ ನಡೆಯಲಿದೆ.
ಸೆಪ್ಟೆಂಬರ್ 19ರಿಂದ ಅಕ್ಟೋಬರ್ 15ರ ವರೆಗೆ ಐಪಿಎಲ್
ಸೆಪ್ಟೆಂಬರ್ 19ರಂದು ಆರಂಭಗೊಳ್ಳುವ ಐಪಿಎಲ್ ದ್ವಿತೀಯ ಹಂತದ ಟೂರ್ನಿ ಅಕ್ಟೋಬರ್ 15ರಂದು ಕೊನೆಗೊಳ್ಳಲಿದೆ. ಐಪಿಎಲ್ ಆರಂಭಿಕ ಆವೃತ್ತಿಯಲ್ಲಿ ಆರ್‌ಸಿಬಿ ತಂಡ ಐಪಿಎಲ್ ಅಂಕಪಟ್ಟಿಯಲ್ಲಿ ತೃತೀಯ ಸ್ಥಾನದಲ್ಲಿತ್ತು. 7 ಪಂದ್ಯಗಳಲ್ಲಿ 5ರಲ್ಲಿ ಗೆದ್ದು 2ರಲ್ಲಿ ಸೋತು -0.171 ರೇಟಿಂಗ್ ಪಾಯಿಂಟ್ಸ್ ಕಲೆ ಹಾಕಿತ್ತು. ಸೆಪ್ಟೆಂಬರ್ 20ರಂದು ಆರಂಭಿಕ ಪಂದ್ಯದಲ್ಲಿ ಆರ್‌ಸಿಬಿ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಲಿವೆ. ಭಾರತದಲ್ಲಿ ಆರಂಭಗೊಂಡಿದ್ದ ಐಪಿಎಲ್ ಟೂರ್ನಿ ಕೋವಿಡ್ ಕಾರಣದಿಂದಾಗಿ ಅರ್ಧಕ್ಕೆ ನಿಲ್ಲಿಸಲ್ಪಟ್ಟಿತ್ತು. 29 ಪಂದ್ಯಗಳು ಆರಂಭಿಕ ಹಂತದಲ್ಲಿ ನಡೆದಿದ್ದವು. ಇನ್ನುಳಿದ 31 ಪಂದ್ಯಗಳು ಯುಎಇಯಲ್ಲಿ ನಡೆಯಲಿದೆ.
60 ಶೇಕಡಾ ಪ್ರೇಕ್ಷಕರಿಗೆ ಯುಎಇ ಗ್ರೀನ್ ಸಿಗ್ನಲ್
"ಆತಿಥೇಯರಾಗಿ, ಪ್ರೇಕ್ಷರಿಗೆ ಸ್ಟೇಡಿಯಂ ಒಳಗೆ ಪ್ರವೇಶ ನೀಡುವುದಕ್ಕೂ ಮುನ್ನ ಯಾವ ಪ್ರೋಟೋಕಾಲ್‌ಗಳನ್ನು ಅನುಸರಿಸಬೇಕು ಎಂಬುದರ ಕುರಿತು ಅನುಮೋದನೆ ಪಡೆಯಲು ಅಧಿಕಾರಿಗಳೊಂದಿಗೆ ಇಸಿಬಿ ನಿಕಟವಾಗಿ ಕೆಲಸ ಮಾಡುತ್ತಿದೆ. ಇಲ್ಲಿ ಚರ್ಚಿಸಲಾಗುತ್ತಿರುವ ವಿಚಾರ ಸ್ಟೇಡಿಯಂಗೆ ವೀಕ್ಷಕರ ಪ್ರವೇಶಕ್ಕೆ ಸಂಬಂಧಿಸಿದ್ದಾಗಿದೆ. ನಾವು ಅದನ್ನು ಬಿಸಿಸಿಐ ಹಾಗೂ ಐಸಿಸಿಯೊಂದಿಗೆ ಚರ್ಚಿಸಿ ಅವರ ಪ್ರೇಕ್ಷಕರ ಅಗತ್ಯತೆಗಳನ್ನು ನಿರ್ಣಯಿಸುತ್ತೇವೆ. ಯುಎಇಯಲ್ಲಿರುವ ನಮ್ಮ ವಲಸಿಗರು ಮತ್ತು ಎಮಿರಾಟಿ ಕ್ರೀಡೆಯನ್ನು ಪ್ರೀತಿಸುವ ಅಭಿಮಾನಿಗಳು ಸ್ಟ್ಯಾಂಡ್‌ನಿಂದ ಈ ಕ್ರಮವನ್ನು ವೀಕ್ಷಿಸಬೇಕೆಂದು ನಾವು ಬಯಸುತ್ತಿದ್ದೇವೆ,"ಎಂದು ಉಸ್ಮಾನಿ ಹೇಳಿದ್ದಾರೆ. ಮಾಹಿತಿಯ ಪ್ರಕಾರ, ಯುಎಇ ಸರ್ಕಾರ ಐಪಿಎಲ್ ವೇಳೆ 60 ಶೇ. ವೀಕ್ಷಕರಿಗೆ ಸ್ಟೇಡಿಯಂ ಒಳಗೆ ಅನುಮತಿ ನೀಡಲು ಗ್ರೀನ್ ಸಿಗ್ನಲ್ ನೀಡಿದೆ.
ಐಪಿಎಲ್ 2ನೇ ಹಂತದ ಪಂದ್ಯಗಳ ವೇಳೆ ಆರಂಭಿಕ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಮತ್ತು ಮಾಜಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಕಾದಾಡಲಿರುವುದರಿಂದ ಸದ್ಯ ಎರಡೂ ತಂಡಗಳು ಯುಎಇಗೆ ತಲುಪಿದೆ. ಸಿಎಸ್‌ಕೆ ಕೂಡ ತಂಡ ಯುಎಇ ತಲುಪಿರುವುದಕ್ಕೆ ಪೋಸ್ಟ್‌ಗಳನ್ನು ಹಾಕಿಕೊಂಡಿದೆ. ತಂಡದ ಪ್ರಮುಖ ಆಲ್ ರೌಂಡರ್ ಸುರೇಶ್ ರೈನಾ ದುಬೈಯಲ್ಲಿರುವ ಫೋಟೋವನ್ನು ಟ್ವಿಟರ್‌ನಲ್ಲಿ ಹಾಕಿಕೊಂಡಿದ್ದಾರೆ. ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಮುಂಬೈ ಮತ್ತು ಚೆನ್ನೈ ಸೆಣಸಾಡಲಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications