ಕೊರೊನಾವೈರಸ್ ವಿರುದ್ಧದ ಹೋರಾಟಕ್ಕೆ ಕೈ ಜೋಡಿಸಿದ ಬಿಸಿಸಿಐ

ನವದೆಹಲಿ: ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಕೋವಿಡ್-19 ವಿರುದ್ಧದ ಹೋರಾಟಕ್ಕೆ ಕೈ ಜೋಡಿಸಿದೆ. ಕೊರೊನಾವೈರಸ್ ವಿರುದ್ಧದ ಪರಿಹಾರರ್ಥವಾಗಿ ಬಿಸಿಸಿಐ 10 ಲೀಟರ್‌ಗಳ 2000 ಆಮ್ಲಜನಕ ಸಾಂದ್ರಕಗಳನ್ನು ಕೊಡುಗೆಯಾಗಿ ನೀಡಲಿದೆ.
ಭಾರತದಲ್ಲಿ ಕೋವಿಡ್-19 ದ್ವಿತೀಯ ಅಲೆ ಸಾಕಷ್ಟು ಸಮಸ್ಯೆ ತಂದಿದೆ. ಭಾರತದಲ್ಲಿ ಕೊರೊನಾ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದ್ದು, ಆಸ್ಪತ್ರೆಗಳಲ್ಲಿ ಆಮ್ಲಜನಕ ಸಿಲಿಂಡರ್‌ಗಳ ಕೊರತೆ, ಬೆಡ್‌ಗಳ ಕೊರತೆ ಎದುರಾಗಿದೆ. ಹೀಗಾಗಿ ಅನೇಕ ಕ್ರೀಡಾಪಟುಗಳು, ಕ್ರೀಡಾ ಸಂಸ್ಥೆಗಳು ಜನರಿಗೆ ನೆರವಾಗುತ್ತಿವೆ.
ಕೋವಿಡ್ ವಿರುದ್ಧದ ಹೋರಾಟಕ್ಕೆ ನೆರವು ನೀಡುತ್ತಿರುವ ಸಂಗತಿಯನ್ನು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಾಕಿಕೊಂಡಿದೆ. 'ಕೋವಿಡ್-19 ಪಿಡುಗಿನ ವಿರುದ್ಧದ ಭಾರತದ ಹೋರಾಟಕ್ಕೆ ಬೆಂಬಲಿಸಿ ಬಿಸಿಸಿಐಯು 10 ಲೀಟರ್‌ಗಳ 2000 ಆಮ್ಲಜನಕ ಸಾಂದ್ರಕಗಳನ್ನು ನೀಡಲಿದೆ' ಎಂದು ಟ್ವಿಟರ್‌ನಲ್ಲಿ ಬರೆದುಕೊಳ್ಳಲಾಗಿದೆ.
'ಮುಂದಿನ ಕೆಲವ ತಿಂಗಳ ಕಾಲ ಭಾರತದಾದ್ಯಂತ ಆಸ್ಪತ್ರೆಗಳಲ್ಲಿ ಆಮ್ಲಜನಕ ನೆರವು ಬೇಕಾದವರಿಗೆ ಸಾಂದ್ರಕಗಳನ್ನು ವಿತರಿಸಲಾಗುತ್ತದೆ. ತುರ್ತಾಗಿ ಆಮ್ಲಜನಕದ ಅಗತ್ಯವಿರುವವರಿಗೆ ಸಿಗಲಿ ಎಂಬ ಆಶಯದಲ್ಲಿ ಮತ್ತು ಪಿಡುಗನ್ನು ಹತ್ತಿಕ್ಕಲು ಈ ಪ್ರಯತ್ನ ಮಾಡಲಿದ್ದೇವೆ,' ಎಂದು ಬಿಸಿಸಿಐ ತನ್ನ ಜಾಲತಾಣದಲ್ಲಿ ತಿಳಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications