ಆದಾಯ ಹಂಚಿಕೆ ತಿಕ್ಕಾಟ, 405 ಮಿಲಿಯನ್ ಡಾಲರ್ ಗೆ ಒಪ್ಪಿದ ಬಿಸಿಸಿಐ
ನವದೆಹಲಿ, ಜೂನ್ 22 : ಆದಾಯ ಹಂಚಿಕೆಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಐಸಿಸಿ) ಹಾಗೂ ಬಿಸಿಸಿಐ ನಡುವಿನ ತಿಕ್ಕಾಟ ಕೊನೆಗೂ ರಾಜಿಯಲ್ಲಿ ಅಂತ್ಯವಾಗಿದೆ.
ಅಂತಾರಾಷ್ಟ್ರೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಐಸಿಸಿ)ಯ ಆದಾಯ ಹಂಚಿಕೆ ಮಾದರಿ ಪ್ರಕಾರ ಭಾರತೀಯ ಕ್ರಿಕೆಟ್ ನಿಯಂತ್ರ ಮಂಡಳಿ(ಬಿಸಿಸಿಐ) 405 ಮಿಲಿಯನ್ ಅಮೆರಿಕನ್ ಡಾಲರ್ ಪಡೆಯಲು ಬಿಸಿಸಿಐ ಒಪ್ಪಿಗೆ ಸೂಚಿಸಿದೆ.
ಇಂದು(ಗುರುವಾರ) ಲಂಡನ್ ನಲ್ಲಿ ನಡೆದ ಐಸಿಸಿಯ ವಾರ್ಷಿಕ ಸಭೆಯಲ್ಲಿ 405 ಮಿಲಿಯನ್ ಡಾಲರ್ ಪಡೆಯಲು ಬಿಸಿಸಿಐ ಒಪ್ಪಿಗೆ ಸೂಚಿಸಿದೆ. ಈ ಮುಂಚೆ ಐಸಿಸಿ ಬಿಸಿಸಿಐಗೆ 293 ಮಿಲಿಯನ್ ಡಾಲರ್ ನೀಡಲು ಒಪ್ಪಿಕೊಂಡಿತ್ತು.
ಆದರೆ, ಇದಕ್ಕೆ ಒಪ್ಪದ ಬಿಸಿಸಿಐ ಹೆಚ್ಚು ಆದಾಯ ನೀಡುವಂತೆ ಒತ್ತಾಯಿಸಿತ್ತು. ಐಸಿಸಿ ಅಧ್ಯಕ್ಷ ಶಶಾಂಕ್ ಮನೋಹರ್ 100 ಮಿಲಿಯನ್ ಡಾಲರ್ ಹೆಚ್ಚಿಸಿಲು ಒಪ್ಪಿಕೊಂಡಿದ್ದರು. ಯಾವ ಕ್ರಿಕೆಟ್ ಮಂಡಳಿ ಎಷ್ಟು ಆದಾಯ ಪಡೆಯುತ್ತಿವೆ? ಮುಂದೆ ಓದಿ..

ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಲ್ಗೊಳ್ಳಲು ಬಿಸಿಸಿಐ ನಿರಾಕರಿಸಿತ್ತು
ಇದೇ ಆದಾಯ ಹಂಚಿಕೆ ವಿಚಾರವಾಗಿ ಐಸಿಸಿ ಕ್ರಿಕೆಟ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಲ್ಗೊಳ್ಳಲು ಬಿಸಿಸಿಐ ನಿರಾಕರಿಸಿತ್ತು.

ಯಾವ ಕ್ರಿಕೆಟ್ ಮಂಡಳಿ ಎಷ್ಟು ಆದಾಯ ಪಡೆಯುತ್ತಿವೆ?
ಇಂಗ್ಲೆಂಡ್ 139 ಮಿಲಿಯನ್ ಡಾಲರ್, ಆಸ್ಟ್ರೇಲಿಯಾ, ಪಾಕಿಸ್ತಾನ, ವೆಸ್ಟ್ ಇಂಡೀಸ್, ನ್ಯೂಜಿಲೆಂಡ್, ಶ್ರೀಲಂಕಾ ಹಾಗೂ ಬಾಂಗ್ಲಾದೇಶ ತಲಾ 128 ಮಿಲಿಯನ್ ಡಾಲರ್ ಆದಾಯ ಪಡೆದುಕೊಳ್ಳುತ್ತಿವೆ.

ಇಂಗ್ಲೆಂಡ್ ಗಿಂತ 266 ಮಿಲಿಯನ್ ಡಾಲರ್ ಹೆಚ್ಚು
ಭಾರತ ಇಂಗ್ಲೆಂಡ್ ಗಿಂದ 266 ಮಿಲಿಯನ್ ಡಾಲರ್ ಹೆಚ್ಚು ಪಡೆದುಕೊಳ್ಳುತ್ತಿದೆ.

ಬಿಸಿಸಿಐ ಒಟ್ಟು 405 ಮಿಲಿಯನ್ ಡಾಲರ್ ಪಡೆಯಲಿದೆ
ಐಸಿಸಿ ಈಗ ಅಂತಿಮವಾಗಿ ಬಿಸಿಸಿಐಗೆ ಹೆಚ್ಚುವರಿಯಾಗಿ 112 ಮಿಲಿಯನ್ ಡಾಲರ್ ನೀಡಲು ನಿರ್ಧರಿಸಿದ್ದು, ಇದರೊಂದಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಒಟ್ಟು 405 ಮಿಲಿಯನ್ ಡಾಲರ್ ಪಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications