ಐಪಿಎಲ್ ವೇಳಾಪಟ್ಟಿಯ ಬಗ್ಗೆ ಮಾಹಿತಿ ನೀಡಿದ ರಾಜೀವ್ ಶುಕ್ಲಾ
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ವೇಳಾಪಟ್ಟಿಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣಾ ಮಂಡಳಿ (ಬಿಸಿಸಿಐ) ಅಳೆದು ತೂಗಿ ರಿಲೀಸ್ ಮಾಡಿದೆ. ಎರಡು ಹಂತದಲ್ಲಿ ಬಿಸಿಸಿಐ ವೇಳಾಪಟ್ಟಿ ಬಿಡುಗಡೆ ಮಾಡುವ ಬಗ್ಗೆ ಈ ಮೊದಲೇ ಮಾಹಿತಿಗಳು ಬಂದಿದ್ದವು. ಅದರಂತೆ ಮಾರ್ಚ್ 11 ರಂದು ಬಿಸಿಸಿಐ ಮೊದಲ ಹಂತದ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಈಗ ಅಭಿಮಾನಿಗಳಲ್ಲಿ ಎರಡನೇ ಹಂತದ ವೇಳಾಪಟ್ಟಿಯ ಯಾವಾಗ ಬಿಡುಗಡೆಯಾಗಲಿದೆ ಎಂಬ ಬಗ್ಗೆ ಕುತೂಹಲ ಮೂಡಿದೆ. ಈಗ ಈ ಬಗ್ಗೆ ಬಿಗ್ ಅಪ್‌ಡೇಟ್ ಸಿಕ್ಕಿದೆ.
ಭಾರತದ ಐದು ರಾಜ್ಯಗಳಾದ ಅಸ್ಸಾಂ, ತಮಿಳುನಾಡು, ಕೇರಳ, ಪುದುಚೇರಿ, ಪಶ್ಚಿಮ ಬಂಗಾಳದಲ್ಲಿ ವಿಧಾನ ಸಭಾ ಚುನಾವಣೆಗಳು ನಡೆಯಲಿವೆ. ಆ ರಾಜ್ಯಗಳ ಚುನಾವಣೆಗಳ ದಿನಾಂಕವನ್ನು ನೋಡಿಕೊಂಡು ಬಿಸಿಸಿಐ ಮುಂದಿನ ವೇಳಾಪಟ್ಟಿ ಬಿಡುಗಡೆ ಮಾಡುವುದಾಗಿ ತಿಳಿಸಿತ್ತು. ಚುನಾವಣಾ ಆಯೋಗ ಭಾನುವಾರ ವಿಧಾನಸಭೆಯ ಚುನಾವಣೆಗಳ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಹೀಗಾಗಿ ಬಿಸಿಸಿಐ ಐಪಿಎಲ್ ಎರಡನೇ ಹಂತದ ವೇಳಾಪಟ್ಟಿಯನ್ನು ಯಾವಾಗ ಬಿಡುಗಡೆ ಮಾಡುತ್ತದೆ ಎಂಬ ಚರ್ಚೆಗಳು ಆರಂಭವಾಗಿವೆ. ಈ ಪ್ರಶ್ನೆಗೆ ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಉತ್ತರ ನೀಡಿದ್ದಾರೆ.

"ಚುನಾವಣಾ ದಿನಾಂಕಗಳನ್ನು ಘೋಷಿಸಲಾಗಿದೆ. ನಾಲ್ಕು ರಾಜ್ಯಗಳಲ್ಲಿ ಒಂದೇ ಹಂತದಲ್ಲಿ ಮತ್ತು ಪಶ್ಚಿಮ ಬಂಗಾಳದಲ್ಲಿ ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಐಪಿಎಲ್ ವೇಳಾಪಟ್ಟಿಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು" ಎಂದು ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಹೇಳಿದ್ದಾರೆ.
ಈ ಪಂಚ ರಾಜ್ಯಗಳಲ್ಲೂ ಐಪಿಎಲ್ ಪಂದ್ಯಗಳು ನಡೆಯುತ್ತವೆ. ಈ ರಾಜ್ಯಗಳಲ್ಲಿ ಪಶ್ಚಿಮ ಬಂಗಾಳ ಅತಿ ಹೆಚ್ಚು ಪಂದ್ಯಗಳಿಗೆ ಆತಿಥ್ಯ ನೀಡಲಿದೆ. ಇನ್ನು ಚೆನ್ನೈನ ಎಂ. ಚಿದಂಬರಂ ಕ್ರೀಡಾಂಗಣ ಸಹ ಅಭಿಮಾನಿಗಳನ್ನು ಕೈ ಬಿಸಿ ಕರೆಯಲಿದೆ. ಆದರೆ ಅಸ್ಸಾಂನ ಗುವಾಹಟಿ ಮೈದಾನದಲ್ಲಿ ಈ ಎರಡೂ ಮೈದಾನಗಳಿಗೆ ಹೋಲಿಸಿದರೆ ಕಡಿಮೆ ಪಂದ್ಯಗಳು ನಡೆಯುತ್ತವೆ.
ಐದು ರಾಜ್ಯಗಳಲ್ಲಿ ಮತದಾನ ನಡೆಯುವುದು ಯಾವಾಗ?
ಅಸ್ಸಾಂ, ಏಪ್ರಿಲ್ 9
ತಮಿಳುನಾಡು, ಏಪ್ರಿಲ್ 9
ಕೇರಳ, ಏಪ್ರಿಲ್ 9
ಪುದುಚೇರಿ, ಏಪ್ರಿಲ್ 9
ಪಶ್ಚಿಮ ಬಂಗಾಳ, ಏಪ್ರಿಲ್ 23, ಏ.29
ಈ ಐದು ರಾಜ್ಯಗಳ ಮತ ಎಣಿಕೆ ಕಾರ್ಯ ಮೇ 4 ರಂದು ನಡೆಯಲಿದೆ.
ಈ ಬಾರಿಯ ಐಪಿಎಲ್ ಉದ್ಘಾಟನಾ ಪಂದ್ಯ ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಲಿದೆ. ಮಾರ್ಚ್ 28 ರಂದು ನಡೆಯಲಿರುವ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆರ್‌ಸಿಬಿ ಹಾಗೂ ಎಸ್‌ಆರ್‌ಎಚ್ ತಂಡಗಳು ಕಾದಾಟ ನಡೆಸಲಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications