ವಿವೋ ಐಪಿಎಲ್ ಪ್ರಾಯೋಜಕತ್ವ ಒಪ್ಪಂದ ವಿಮರ್ಶೆಗೆ ನಿರ್ಧರಿಸಿದ ಬಿಸಿಸಿಐ

ನವದೆಹಲಿ, ಜೂನ್ 20: ಲಡಾಕ್‌ನ ಗಾಲ್ವಾನ್ ಕಣಿವೆಯಲ್ಲಿ ನಡೆಯುತ್ತಿರುವ ಭಾರತ-ಚೀನಾ ಗಡಿ ಸಂಘರ್ಷದಲ್ಲಿ 20 ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ. ಈ ಘಟನೆಗೆ ಸಂಬಂಧಿಸಿ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾವು (ಬಿಸಿಸಿಐ) ಚೀನಾ ಮೂಲ ಕಂಪನಿಗಳ ಪ್ರಾಯೋಜಕತ್ವ ಒಪ್ಪಂದವನ್ನು ವಿಮರ್ಶಿಸಲು ನಿರ್ಧರಿಸಿದೆ.
ಐಪಿಎಲ್ ಟೈಟಲ್ ಹಕ್ಕುಗಳ ಒಪ್ಪಂದಗಳನ್ನು ಪುನರ್ ವಿಮರ್ಶಿಸುವ ಸಲುವಾಗಿ ಮುಂದಿನ ತಿಂಗಳು ಸಭೆಯಲ್ಲಿ ಪಾಲ್ಗೊಳ್ಳುವಂತೆ ಬಿಸಿಸಿಐಯು ಐಪಿಎಲ್ ಗವರ್ನಿಂಗ್ ಕೌನ್ಸಿಲ್ ಅನ್ನು ಮನವೊಲಿಸಿದೆ. ಚೈನೀಸ್ ಕಂಪನಿ ವಿವೋ ಜೊತೆಗಿನ ಒಪ್ಪಂದ ವಾರ್ಷಿಕವಾಗಿ 440 ಕೋ.ರೂ. ಆದಾಯ ತರುತ್ತಿದ್ದು, ಈ ಒಪ್ಪಂದ ವಿಮರ್ಶೆಗೆ ಒಳಪಡಲಿದೆ.
'ಗಡಿಗೆ ಸಂಬಂಧಿಸದ ಸಂಘರ್ಷದಲ್ಲಿ ನಮ್ಮ ಧೀರ ಯೋಧರು ಹುತಾತ್ಮರಾದ ಘಟನೆಯನ್ನು ಪರಿಗಣಿಸಿ, ಐಪಿಎಲ್ ಹೊಂದಿರುವ ವಿವಿಧ ಪ್ರಾಯೋಜಕತ್ವ ಒಪ್ಪಂದಗಳನ್ನು ವಿಮರ್ಶಿಸಲು ಐಪಿಎಲ್ ಆಡಳಿತ ಮಂಡಳಿ ಯೋಚಿಸಿದೆ,' ಎಂದು ಐಪಿಎಲ್ ಅಧಿಕೃತ ಟ್ವಿಟರ್ ಖಾತೆ ಶುಕ್ರವಾರ ರಾತ್ರಿ ಟ್ವೀಟ್ ಮಾಡಿದೆ.
ಐಪಿಎಲ್ ಆಡಳಿತ ಮಂಡಳಿಯು ಐಪಿಎಲ್ ಪ್ರಮುಖ ಪ್ರಾಯೋಜಕರಾದ ಪೇಟಿಎಂ, ಡೀಮ್ XI ಮುಂತಾದವುಗಳನ್ನೂ ವಿಮರ್ಶೆಗೆ ತೆಗೆದುಕೊಳ್ಳಲಿದೆ ಎಂದು ಬಿಸಿಸಿಐ ಮೂಲ ತಿಳಿಸಿದೆ. ಪೇಟಿಎಂ ಕೂಡ ಸುಮಾರು 326 ಕೋ.ರೂ. ಬೆಲೆಯ ಐಪಿಎಲ್ ಟೈಟಲ್ ಸ್ಪಾನ್ಸರ್‌ಶಿಪ್ ಹೊಂದಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications