ಯುಎಇಯಲ್ಲಿ ಐಪಿಎಲ್: ಬಿಸಿಸಿಐಗೆ ಸರ್ಕಾರದ ಅನುಮತಿಯೊಂದೇ ಬಾಕಿ

ನವದೆಹಲಿ, ಜುಲೈ 21: ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ ಈ ಬಾರಿಯ ಟಿ20 ವಿಶ್ವಕಪ್ ಅನ್ನು ಮುಂದೂಡುವ ನಿರ್ಧಾರ ಪ್ರಕಟಿಸಿದ ಬೆನ್ನಲ್ಲೇ ಇಂಡಿಯನ್ ಪ್ರೀಮಿಯರ್ ಲೀಗ್ ನಡೆಸಲು ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ ಸಿದ್ಧತೆಗಳನ್ನು ನಡೆಸುತ್ತಿದೆ.
ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಈ ವರ್ಷದ ಐಪಿಎಲ್ ನಡೆಸಲು ಬಿಸಿಸಿಐ ಆಲೋಚಿಸಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಮಾರ್ಚ್ 29ರಂದು ಆರಂಭವಾಗಲಿದ್ದ ಐಪಿಎಲ್ ಕೊರೊನಾವೈರಸ್ ಕಾರಣದಿಂದಾಗಿ ಮುಂದೂಡಲ್ಪಟ್ಟಿತ್ತು. ಮುಂದೂಡಲ್ಪಟ್ಟಿರುವ ಈ ಟೂರ್ನಿ ಯುಎಇಯಲ್ಲಿ ನಡೆಯೋ ನಿರೀಕ್ಷೆ ಹೆಚ್ಚಿದೆ.
'ಯುಎಇಯಲ್ಲಿ ಐಪಿಎಲ್ ನಡೆಸುವ ಬಗ್ಗೆ ಮುಂದಿನ ಕೆಲ ವಾರಗಳಲ್ಲಿ ಬಿಸಿಸಿಐಯು ಸರ್ಕಾರ ಅನುಮತಿ ಪಡೆಯುವುದನ್ನು ನಿರೀಕ್ಷಿಸಲಾಗಿದೆ,' ಎಂದು ಐಪಿಎಲ್ ಗವರ್ನಿಂಗ್ ಕೌನ್ಸಿಲ್‌ನ ಮುಖ್ಯಸ್ಥ ಬ್ರಿಜೇಶ್ ಪಟೇಲ್ ಇಂಡಿಯಾ ಟುಡೇ ಜೊತೆ ಹೇಳಿಕೊಂಡಿದ್ದಾರೆ. ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ಐಪಿಎಲ್ ನಡೆಯೋ ನಿರೀಕ್ಷೆಯಿದೆ.
'ಅಲ್ಲಿನ ಸೌಲಭ್ಯಗಳ ಮತ್ತು ಸಂದರ್ಭಗಳ ಬಗ್ಗೆ ಗೊತ್ತಿರುವುದರಿಂದ ತಮ್ಮ ದೇಶದಲ್ಲಿ ಐಪಿಎಲ್ ನಡೆಸಲು ಯುಎಇ ಸರ್ಕಾರ ಆಫರ್ ಮಾಡಿತ್ತು. 2014ರಲ್ಲಿ ಐಪಿಎಲ್ ಕೆಲ ಪಂದ್ಯಗಳು ಅಲ್ಲಿ ನಡೆದಿದ್ದರಿಂದ ನಾವು ಏನನ್ನು ನೋಡುತ್ತಿದ್ದೇವೆ ಎಂಬುದು ನಮಗೆ ಗೊತ್ತಿದೆ,' ಎಂದು ಭಾರತದ ಮಾಜಿ ಬ್ಯಾಟ್ಸ್‌ಮನ್ ಬ್ರಿಜೇಶ್ ಹೇಳಿದ್ದಾರೆ.
ಐಪಿಎಲ್ ಗವರ್ನಿಂಗ್ ಕೌನ್ಸಿಲ್ ಮುಂದಿನ ವಾರದೊಳಳಗೆ ಸಭೆ ನಡೆಸಿ ಈ ಬಗ್ಗೆ ಚರ್ಚಿಸುವ ನಿರೀಕ್ಷೆಯಿದೆ. ಆ ಬಳಿಕ ಐಪಿಎಲ್ ಆಯೋಜನೆಯ ಬಗ್ಗೆ ಔಪಚಾರಿಕ ಕ್ರಮಗಳು ಕೈಗೊಳ್ಳುವ ಸಾಧ್ಯತೆಯಿದೆ. 'ಒಂದು ವಾರದೊಳಗೆ ಐಪಿಎಲ್ ಆಡಳಿತ ಮಂಡಳಿ ಸಭೆ ನಡೆಸಿ ಮುಂದಿನ ಯೋಜನೆ ಬಗ್ಗೆ ಚರ್ಸಿಸಲಿದೆ,' ಎಂದು ಮತ್ತೊಬ್ಬ ಬಿಸಿಸಿಐ ಅಧಿಕಾರಿ ಮಾಹಿತಿ ನೀಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications