Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಭಾರತ vs ಪಾಕಿಸ್ತಾನ: ಎಲ್ಲಾ ಪಂದ್ಯಗಳೂ ಮುಖ್ಯ ಎಂದ ಜೂಲನ್ ಗೋಸ್ವಾಮಿ

BCCI will decide India-Pakistan fate, says Jhulan Goswami

ನವದೆಹಲಿ, ಫೆಬ್ರವರಿ 27: ಕ್ರಿಕೆಟ್ ವಿಚಾರದಲ್ಲಿ ನಮಗೆ ಎಲ್ಲಾ ಪಂದ್ಯಗಳೂ ಪ್ರಮುಖವಾದದೆ. ಆದರೆ ಭಾರತ vs ಪಾಕಿಸ್ತಾನ ಪಂದ್ಯಗಳ ಬಗ್ಗೆ ಬಿಸಿಸಿಐ ನಿರ್ಧರಿಸಲಿದೆ ಎಂದು ಭಾರತದ ಅನುಭವಿ ವೇಗಿ ಜೂಲನ್ ಗೋಸ್ವಾಮಿ ಹೇಳಿದ್ದಾರೆ. ಪಾಕಿಸ್ತಾನ ವಿರುದ್ಧ ಭಾರತದ ಮಹಿಳಾ ತಂಡ ಆಡಬೇಕೋ ಎಂಬ ಬಗ್ಗೆ ಗೋಸ್ವಾಮಿ ಬುಧವಾರ (ಫೆಬ್ರವರಿ 27) ಅಭಿಪ್ರಾಯ ಹಂಚಿಕೊಂಡರು.

'ಸಕಾರಾತ್ಮಕ ಮತ್ತು ಉತ್ತಮ ಕ್ರಿಕೆಟ್ ನಿಟ್ಟಿನಲ್ಲಿ ನಮಗೆ ಎಲ್ಲಾ ಪಂದ್ಯಗಳೂ ಪ್ರಮುಖವಾದುದೇ. ಆದರೆ ಐಸಿಸಿ ಚಾಂಪಿಯನ್‌ಶಿಪ್ ಪಂದ್ಯಗಳಲ್ಲಿ ಭಾರತ ತಂಡ ಪಾಕಿಸ್ತಾನ ವಿರುದ್ಧ ಆಡಬೇಕೋ ಬೇಡವೊ ಎಂಬುದನ್ನು ಬಿಸಿಸಿಐ ನಿರ್ಧರಿಸಲಿದೆ' ಎಂದು ಭಾರತ vs ಇಂಗ್ಲೆಂಡ್ 3ನೇ ಏಕದಿನ ಪಂದ್ಯಕ್ಕೂ ಮುನ್ನ ಮುಂಬೈಯಲ್ಲಿ ಜೂಲನ್ ತಿಳಿಸಿದ್ದಾರೆ.

ಇದಕ್ಕೂ ಮುನ್ನ ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕ ಮಿಥಾಲಿ ರಾಜ್ ಕೂಡ ಈ ಬಗ್ಗೆ ಅಭಿಪ್ರಾಯ ವ್ಯಕ್ತ ಪಡಿಸಿದ್ದರು. ಇಂಗ್ಲೆಂಡ್ ವಿರುದ್ಧದ ಪಂದ್ಯಗಳು ಮುಖ್ಯವಾಗಿರುವುದರಿಂದ ಪಾಕಿಸ್ತಾನ ಪಂದ್ಯಗಳನ್ನು ಆಡದಿರಲು ಸಿದ್ಧ ಎಂಬಂತೆ ಮಿಥಾಲಿ ಮಾತನಾಡಿದ್ದರು.

ಭಾರತ ಪ್ರವಾಸದಲ್ಲಿರುವ ಇಂಗ್ಲೆಂಡ್ ಮಹಿಳಾ ತಂಡ ಆತಿಥೇಯ ಭಾರತದ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡುತ್ತಿದೆ. ಆರಂಭಿಕ ಎರಡೂ ಪಂದ್ಯಗಳನ್ನು ಭಾರತ ಜಯಿಸಿ ಸರಣಿಯಲ್ಲಿ 2-0ಯ ಮುನ್ನಡೆಯಲ್ಲಿದೆ. ಮುಂಬೈಯ ವಾಂಖೇಡೆ ಕ್ರೀಡಾಂಗಣದಲ್ಲಿ ಫೆಬ್ರವರಿ 28ರಂದು ನಡೆಯುವ ಪಂದ್ಯದಲ್ಲೂ ಭಾರತ ಗೆಲ್ಲುವ ಯೋಜನೆಯಲ್ಲಿದೆ.

Story first published: Wednesday, February 27, 2019, 16:55 [IST]
Other articles published on Feb 27, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+