For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 10 ತಂಡಗಳ ಟೂರ್ನಿಯ ಯೋಚನೆ ಕೈ ಬಿಡುತ್ತಾ ಬಿಸಿಸಿಐ?

BCCI hold plans of 10 team tournament after IPL 2021 suspension

ನವದೆಹಲಿ: 2022ಕ್ಕೆ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಒಟ್ಟು 10 ತಂಡಗಳನ್ನು ಮೈದಾನಕ್ಕಿಳಿಸುವ ಆಲೋಚನೆಯಲ್ಲಿ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಇತ್ತು. 2021ರ ಐಪಿಎಲ್ ಆವೃತ್ತಿ ಅಮಾನತಾದ ಬಳಿಕ 10 ತಂಡಗಳ ಆಲೋಚನೆಯನ್ನು ಸದ್ಯಕ್ಕೆ ಹಾಗೇ ಇರಿಸಿಕೊಂಡಿದೆ. ಅಂದರೆ ಸದ್ಯಕ್ಕೆ 10 ತಂಡಗಳ ಐಪಿಎಲ್ ಅನ್ನು ಶೀಘ್ರ ಜಾರಿ ತರುವ ಆಲೋಚನೆಯಲ್ಲಿ ಬಿಸಿಸಿಐ ಇಲ್ಲ.

ಈವರೆಗೆ ಐಪಿಎಲ್‌ನಲ್ಲಿ ಒಟ್ಟು 8 ತಂಡಗಳು ಆಡುತ್ತಿವೆ. ಆದರೆ 2021ರ ವೇಳೆ, ಐಪಿಎಲ್ 15ನೇ ಆವೃತ್ತಿಯ ಹೊತ್ತಿನಲ್ಲಿ ಮೆಗಾ ಆಕ್ಷನ್ ನಡೆಸುವ ಜೊತೆಗೆ ಎರಡು ಹೊಸ ತಂಡಗಳನ್ನು ಸೇರಿಸಿ 10 ತಂಡಗಳ ಅದ್ದೂರಿ ಐಪಿಎಲ್ ನಡೆಸಲು ಬಿಸಿಸಿಐ ಯೋಚಿಸುತ್ತಿತ್ತು. ಆದರೆ ಸದ್ಯದ ಐಪಿಎಲ್ ಪರಿಸ್ಥಿತಿಯಲ್ಲಿ ಬಿಸಿಸಿಐಯು ಆ ಯೋಜನೆಯ ಕಾರ್ಯರೂಪಕ್ಕೆ ಮುಂದಾಗುತ್ತಿಲ್ಲ.

ಐಪಿಎಲ್ 14ನೇ ಆವೃತ್ತಿಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್‌ನ ವರುಣ್ ಚಕ್ರವರ್ತಿ, ಸಂದೀಪ್ ವಾರಿಯರ್, ಸನ್ ರೈಸರ್ಸ್ ಹೈದರಾಬಾದ್‌ನ ವೃದ್ಧಿಮಾನ್ ಸಾಹ, ಚೆನ್ನೈ ಸೂಪರ್ ಕಿಂಗ್ಸ್‌ನ ಬೌಲಿಂಗ್ ಕೋಚ್ ಲಕ್ಷ್ಮೀಪತಿ ಬಾಲಾಜಿ ಮತ್ತು ಡೆಲ್ಲಿ ಕ್ಯಾಪಿಟಲ್ಸ್‌ನ ಅಮಿತ್ ಮಿಶ್ರಾಗೆ ಕೋವಿಡ್ ಸೋಂಕು ತಗುಲಿತ್ತು. ಹೀಗಾಗಿ 2021ರ ಐಪಿಎಲ್ ಅನ್ನು ಬಿಸಿಸಿಐ ಅಮಾನತುಗೊಳಿಸಿದೆ.

'ಕೋವಿಡ್-19 ಅತಿಯಾಗಿ ಕಾಡುತ್ತಿರುವ ಈ ಹೊತ್ತಿನಲ್ಲಿ ಐಪಿಎಲ್‌ನಲ್ಲಿ 10 ತಂಡಗಳನ್ನು ಆಡಿಸುವ ಬಗ್ಗೆ ಮಾತನಾಡುವುದೂ ಸರಿಯಲ್ಲ. ನಾವಿದಕ್ಕೆ ನಿರ್ದಿಷ್ಟ ಕಾಲಾವಧಿ ಸೂಚಿಸುವ ಸ್ಥಿತಿಯಲ್ಲಿ ಇಲ್ಲ. ಮೊದಲೇ ಹೇಳಿದಂತೆ 10 ತಂಡಗಳಿಗೆ ಸಂಬಂಧಿಸಿ ಚರ್ಚಿಸುವ ಯಾವುದೇ ಸ್ಥಿತಿಯಲ್ಲಿ ಬಿಸಿಸಿಐ ಇಲ್ಲ,' ಎಂದು ಇನ್‌ಸೈಡ್‌ ಸ್ಪೋರ್ಟ್ಸ್ ಜೊತೆ ಬಿಸಿಸಿಐ ಅಧಿಕಾರಿಯೊಬ್ಬರು ಹೇಳಿದ್ದಾರೆ.

Story first published: Tuesday, May 18, 2021, 13:20 [IST]
Other articles published on May 18, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+