'ಕೂಲ್ ಕ್ಯಾಪ್ಟನ್' ಎಂಎಸ್ ಧೋನಿಗೆ ಬಿಸಿಸಿಐನಿಂದ ವಿದಾಯ ಪಂದ್ಯ!

ನವದೆಹಲಿ: ಕೂಲ್ ಕ್ಯಾಪ್ಟನ್ ಖ್ಯಾತಿಯ ಎಂಎಸ್ ಧೋನಿಗೆ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾವು ಒಂದು ವಿದಾಯ ಪಂದ್ಯವನ್ನು ಆಯೋಜಿಸಲು ಯೋಚಿಸುತ್ತಿದೆ. ಟೀಮ್ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ನಿವೃತ್ತಿ ಘೋಷಿಸಿದ್ದರು. ಧೋನಿ ನಿವೃತ್ತಿ ನೀಡಿದ್ದ ಬೆನ್ನಲ್ಲೇ ಅವರ ಆತ್ಮೀಯ ಸ್ನೇಹಿತ, ಭಾರತದ ಆಲ್ ರೌಂಡರ್ ಸುರೇಶ್ ರೈನಾ ಕೂಡ ಅಂತಾರಾಷ್ಟ್ರೀಯ ನಿವೃತ್ತಿಯ ನಿರ್ಧಾರ ಪ್ರಕಟಿಸಿದ್ದರು.
ಎರಡು ವಿಶ್ವಕಪ್‌ಗಳು ಮತ್ತು ಚಾಂಪಿಯನ್ಸ್ ಟ್ರೋಫಿ ಸೇರಿ ಐಸಿಸಿಯ ಎಲ್ಲಾ ಪ್ರತಿಷ್ಠಿತ ಟ್ರೋಫಿಗಳನ್ನು ಭಾರತಕ್ಕೆ ಗೆಲ್ಲಿಸಿಕೊಟ್ಟ ಒಬ್ಬನೇ ಒಬ್ಬ ನಾಯಕ ಎಂಎಸ್ ಧೋನಿ. ತಲೈವಾ ಧೋನಿಯ ಆಟ ನೋಡಿ ವರ್ಷವೇ ಕಳೆದಿದೆ.
2019ರ ವಿಶ್ವಕಪ್ ಬಳಿಕ ಧೋನಿ ಯಾವುದೇ ಪಂದ್ಯಗಳನ್ನಾಡಿಲ್ಲ. ಹೀಗಾಗಿ ಎಂಎಸ್‌ಡಿಗೆ ವಿದಾಯ ಪಂದ್ಯ ಆಯೋಜಿಸಲು ಬಿಸಿಸಿಐ ಯೋಚಿಸುತ್ತಿದೆ ಎಂದು ತಿಳಿದು ಬಂದಿದೆ.

ಐಪಿಎಲ್ ವೇಳೆ ಮಾತುಕತೆ
ಐಎಎನ್ಎಸ್ ಜೊತೆಗೆ ಮಾತನಾಡಿದ ಬಿಸಿಸಿಐ ಅಧಿಕಾರಿಯೊಬ್ಬರು, ಧೋನಿಗೆ ವಿದಾಯ ಪಂದ್ಯ ಆಯೋಜಿಸುವ ಬಗ್ಗೆ ಬಿಸಿಸಿಐಯು ಮುಂಬರಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ ವೇಳೆ ಧೋನಿ ಜೊತೆ ಮಾತನಾಡಲಿದೆ. ಅದರ ಪ್ರಕಾರ ಯೋಜನೆ ರೂಪುಗೊಳ್ಳಲಿದೆ ಎಂದಿದ್ದಾರೆ.

ದೇಶಕ್ಕೆ ಧೋನಿ ಕೊಡುಗೆ ಅಪಾರ
'ಸದ್ಯಕ್ಕೆ ಯಾವುದೇ ಅಂತಾರಾಷ್ಟ್ರೀಯ ಸರಣಿಗಳಿಲ್ಲ. ಐಪಿಎಲ್ ಬಳಿಕ ಏನು ಮಾಡಬಹುದು ಎಂದು ನಾವು ನೋಡುತ್ತೇವೆ. ಯಾಕೆಂದರೆ ಧೋನಿ ದೇಶಕ್ಕಾಗಿ ಬಹಳಷ್ಟು ಕೊಡುಗೆ ನೀಡಿದ್ದಾರೆ. ಅವರು ಎಲ್ಲಾ ರೀತಿಯ ಗೌರವಕ್ಕೆ ಅರ್ಹರು,' ಎಂದು ಅಧಿಕಾರಿ ಹೇಳಿದ್ದಾರೆ.

ಒಂದು ಪಂದ್ಯ ಅಥವಾ ಸರಣಿ
ಈವರೆಗೆ ಧೋನಿ ಜೊತೆ ಈ ಬಗ್ಗೆ ಏನಾದರೂ ಮಾತನಾಡಿದ್ದೀರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅಧಿಕಾರಿ, 'ಇಲ್ಲ. ಆದರೆ ಮುಂಬರಲಿರುವ ಐಪಿಎಲ್ ವೇಳೆ ನಾವು ಖಂಡಿಯವಾಗಿಯೂ ಮಾತನಾಡುತ್ತೇವೆ. ಒಂದು ಪಂದ್ಯ ಅಥವಾ ಸರಣಿ ಬಗ್ಗೆ ಧೋನಿಯಲ್ಲಿ ಮಾತನಾಡಲು ಅದು ಸರಿಯಾದ ಜಾಗ,' ಎಂದು ಉತ್ತರಿಸಿದರು.

ಶೀಘ್ರ ಕಣಕ್ಕಿಳಿಯಲಿದ್ದಾರೆ ಧೋನಿ
ಆಗಸ್ಟ್ 15ರ ಶನಿವಾರ ಅಂತಾರಾಷ್ಟ್ರೀಯ ನಿವೃತ್ತಿ ಘೋಷಿಸಿರುವ ಧೋನಿ ಸೆಪ್ಟೆಂಬರ್ 19ರಿಂದ ಆರಂಭಗೊಳ್ಳಲಿರುವ ನಗದು ಶ್ರೀಮಂತ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಮೈದಾನಕ್ಕಿಳಿಯಲಿದ್ದಾರೆ. ಅಂದಾಜಿನ ಪ್ರಕಾರ, ಐಪಿಎಲ್ ಉದ್ಘಾಟನಾ ಪಂದ್ಯ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಮತ್ತು ಮಾಜಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ಮಧ್ಯೆ ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications