Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಖಾಲಿ ಮೈದಾನದಲ್ಲಿ ಈ ವರ್ಷದ ಐಪಿಎಲ್ ನಡೆಸಲು ಬಿಸಿಸಿಐ ತಯಾರಿ!

BCCI working towards staging IPL this year in empty stadiums: Sourav Ganguly

ನವದೆಹಲಿ: ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್, (ಐಸಿಸಿ) ಟಿ20 ವಿಶ್ವಕಪ್ ನಡೆಸಲು ನಿರ್ಧಾರ ಮುಂದೂಡುತ್ತಲೇ ಇರುವುದರಿಂದ ಖಾಲಿ ಮೈದಾನದಲ್ಲಿ ಈ ವರ್ಷ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಡೆಸಲು ಚಿಂತನೆ ನಡೆಸುತ್ತಿದ್ದೇವೆ. ಖಾಲಿ 'ಮೈದಾನದಲ್ಲಿ ಐಪಿಎಲ್' ಪ್ಲ್ಯಾನ್‌ನತ್ತ ಮುನ್ನಡೆಯಲು ಯೋಚಿಸುತ್ತಿದ್ದೇವೆ ಎಂದು ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ.

ಅಕ್ಟೋಬರ್‌-ನವೆಂಬರ್‌ನಲ್ಲಿ ನಡೆಸಲು ನಿಗದಿಯಾಗಿದ್ದ ಟಿ20 ವಿಶ್ವಕಪ್‌ ಅನ್ನು ಮುಂದೂಡಬೇಕೋ, ಬೇಡವೋ ಎಂಬ ಬಗ್ಗೆ ಪ್ರಕಟಿಸಬೇಕಾದ ನಿರ್ಧಾರವನ್ನು ಐಸಿಸಿ ಜೂನ್ 10ರಂದು ಮತ್ತೆ ಮುಂದೂಡಿತ್ತು. ಐಸಿಸಿಯ ಈ ನಡೆಯ ಬೆನ್ನಲ್ಲೇ ಬಿಸಿಸಿಐ ಖಾಲಿ ಮೈದಾನದಲ್ಲಿ ಐಪಿಎಲ್ ನಡೆಸುವ ಯೋಚಿಸಿದೆ ಎನ್ನಲಾಗಿದೆ.

ಕೊರೊನಾವೈರಸ್‌ನಿಂದಾಗಿ ಮಾರ್ಚ್ 29ರಂದೇ ಆರಂಭವಾಗಬೇಕಿದ್ದ ಐಪಿಎಲ್ ಅನಿರ್ಧಿಷ್ಟವಧಿಗೆ ಮುಂದೂಡಲ್ಪಟ್ಟಿದೆ.

ರಾಜ್ಯಗಳಿಗೆ ಪತ್ರ ರವಾನೆ

ರಾಜ್ಯಗಳಿಗೆ ಪತ್ರ ರವಾನೆ

ರಾಜ್ಯ ಅಸೋಸಿಯೇಶನ್‌ಗಳಿಗೆ ಕಳುಹಿಸಲಾಗಿರುವ ಪತ್ರದಲ್ಲಿ, 'ಐಪಿಎಲ್ ಭವಿಷ್ಯದ ಬಗ್ಗೆ ಬಿಸಿಸಿಐ ಶೀಘ್ರದಲ್ಲೇ ನಿರ್ಧಾರ ಪ್ರಕಟಿಸಲಿದೆ. ಆದಾಯ ವಿಚಾರದಲ್ಲಿ ಐಪಿಎಲ್ ನಿರ್ಣಾಯಕವಾಗಿರುವುದರಿಂದ ಈ ವರ್ಷದ ಐಪಿಎಲ್ ಅನ್ನು ಖಾಲಿ ಮೈದಾನದಲ್ಲಿ ಆಯೋಜಿಸಲು ಯೋಚಿಸಲಾಗುತ್ತಿದೆ' ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಬರೆದಿದ್ದಾರೆ ಎಂದು ತಿಳಿದುಬಂದಿದೆ.

ಮುಂದಿನ ತಿಂಗಳು ಟಿ20 ವಿಶ್ವಕಪ್ ನಿರ್ಧಾರ

ಮುಂದಿನ ತಿಂಗಳು ಟಿ20 ವಿಶ್ವಕಪ್ ನಿರ್ಧಾರ

ಪುರುಷರ ಟಿ20 ವಿಶ್ವಕಪ್ 2020 ಅನ್ನು ನಡೆಸುವ ಬಗ್ಗೆ ಪ್ರಕಟಿಸಲಿದ್ದ ನಿರ್ಧಾರವನ್ನು ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಮುಂಬರುವ ತಿಂಗಳಿಗೆ ಮುಂದೂಡಿದೆ. ಉಳಿದ ಪಂದ್ಯಗಳ ವೇಳಾಪಟ್ಟಿಯನ್ನು ಗಮನದಲ್ಲಿಟ್ಟುಕೊಂಡು ವಿಶ್ವಕಪ್ ಟೂರ್ನಿ ನಡೆಸುವ ಬಗ್ಗೆ ಚಿಂತನೆ ನಡೆಸುತ್ತಿದ್ದೇವೆ ಎಂದು ಐಸಿಸಿ ಹೇಳಿತ್ತು.

ಬಿಸಿಸಿಐ ಪತ್ರದಲ್ಲಿ ಏನಿದೆ?

ಬಿಸಿಸಿಐ ಪತ್ರದಲ್ಲಿ ಏನಿದೆ?

'ಈ ವರ್ಷದ ಐಪಿಎಲ್ ನಡೆಸಲು ಬಿಸಿಸಿಐಯು ಎಲ್ಲಾ ಸಾಧ್ಯ ಆಯ್ಕೆಗಳತ್ತ ಕಾರ್ಯ ನಿರ್ವಹಿಸುತ್ತಿದೆ. ಇದರರ್ಥ, ಖಾಲಿ ಮೈದಾನಗಳಲ್ಲೂ ಐಪಿಎಲ್ ನಡೆಸುವ ಯೋಜನೆ ಸೇರಿದೆ. ಅಭಿಮಾನಿಗಳು, ಫ್ರಾಂಚೈಸಿಗಳು, ಆಟಗಾರರು, ಪ್ರಸಾರಕರು, ಪ್ರಾಯೋಜಕರು, ಸ್ಟೇಕ್ ಹೋಲ್ಡರ್ಸ್‌ ಎಲ್ಲಾ ಈ ವರ್ಷ ಐಪಿಎಲ್ ನಡೆಯುವುದನ್ನೇ ಎದುರು ನೋಡುತ್ತಿದ್ದಾರೆ,' ಎಂದು ಗಂಗೂಲಿ ಬರೆದಿರುವ ಪತ್ರದಲ್ಲಿದೆ ಎಂದು ಬಲ್ಲ ಮೂಲ ತಿಳಿಸಿದೆ.

ವಿದೇಶದಲ್ಲಿ ಐಪಿಎಲ್ ನಡೆಯೋ ಸಾಧ್ಯತೆ

ವಿದೇಶದಲ್ಲಿ ಐಪಿಎಲ್ ನಡೆಯೋ ಸಾಧ್ಯತೆ

ಖಾಲಿ ಮೈದಾನದಲ್ಲಿ 2020ರ ಐಪಿಎಲ್ ನಡೆಸುವ ಸಾಧ್ಯತೆ ಹೆಚ್ಚಿದೆಯಾದರೂ, ವಿದೇಶದಲ್ಲಿ ಟೂರ್ನಿ ನಡೆಸುವ ಸಾಧ್ಯತೆಯೂ ಇದೆ. ಈಗಾಗಲೇ ಶ್ರೀಲಂಕಾ ತಮಗೆ ಐಪಿಎಲ್ ಆಯೋಜಿಸಲು ಆಸಕ್ತಿಯಿದೆ ಎಂದು ಹೇಳಿತ್ತು. ಯುನೈಟೆಡ್ ಅರಬ್ ಎಮಿರೇಟ್ಸ್ ಕೂಡ ನಾವು ಐಪಿಎಲ್‌ಗೆ ಆತಿಥ್ಯ ವಹಿಸಲು ತಯಾರಿದ್ದೇವೆ ಎಂದಿತ್ತು.

Story first published: Thursday, June 11, 2020, 21:44 [IST]
Other articles published on Jun 11, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+