ಇಂಗ್ಲಿಷ್ ಕೌಂಟಿಗಳಿಂದ ಬಂದ ಐಪಿಎಲ್ ಆಫರ್ ಚರ್ಚಿಸಲಿದೆ ಬಿಸಿಸಿಐ

ನವದೆಹಲಿ: ನಿಲುಗಡೆಯಾಗಿರುವ 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಅನ್ನು ಪೂರ್ಣಗೊಳಿಸಲು ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ದಾರಿಗಳನ್ನು ಹುಡುಕುತ್ತಿದೆ. ಹೀಗಾಗಿ ಇಂಗ್ಲಿಷ್ ಕೌಂಟಿಯಿಂದ ಬಂದಿರುವ ಐಪಿಎಲ್ ಆಯೋಜನೆಯ ಆಫರ್ ಅನ್ನೂ ಬಿಸಿಸಿಐ ಚರ್ಚಿಸಲಿದೆ.
ಎಂಟು ತಂಡಗಳು ಪಾಲ್ಗೊಳ್ಳುವ ನಗದು ಶ್ರೀಮಂತ ಟೂರ್ನಿ ಕಳೆದ ಮಂಗಳವಾರ (ಮೇ 4) ಕೋವಿಡ್-19 ಪ್ರಕರಣಗಳ ಹೆಚ್ಚಳದಿಂದಾಗಿ ಅಮಾನತಾಗಿತ್ತು. ಬಯೋಬಬಲ್ ಒಳಗೆ ಕೊರೊನಾ ಸೋಂಕಿನ ಪ್ರಕರಣಗಳು ಕಾಣಿಸಿದ್ದರಿಂದ ಟೂರ್ನಿ ಸಿಲ್ಲಿಸುವ ನಿರ್ಧಾರಕ್ಕೆ ಬಿಸಿಸಿಐ ಬಂದಿತ್ತು.
ಐಪಿಎಲ್‌ನ ಇನ್ನುಳಿದ 31 ಪಂದ್ಯಗಳನ್ನು ನಡೆಸುವ ಆಫರ್ ಅನ್ನು ಇಂಗ್ಲಿಷ್ ಕೌಂಟಿಯ ವಾವ್ರಿಕ್‌ಶೈರ್, ಸರ್ರೆ, ಮೇರಿಲೆಬೋನ್ ಕ್ರಿಕೆಟ್ ಕ್ಲಬ್ (ಎಂಸಿಸಿ) ಕ್ಲಬ್‌ಗಳು ನೀಡಿದ್ದವು. ಟೂರ್ನಿ ತಂದರೆ ಇತ್ತ ಜಗತ್ತಿನ ಗಮನ ಹರಿಯಲಿದೆ. ಹೀಗಾಗಿ ಇಲ್ಲಿ ಟೂರ್ನಿ ನಡೆಸಲು ಆಸಕ್ತಿಯಿದೆ ಎಂದು ಲಂಡನ್ ಮೇಯರ್ ಸಾದಿಕ್ ಖಾನ್ ಕೂಡ ಹೇಳಿಕೊಂಡಿದ್ದರು.
ಆದರೆ ಐಪಿಎಲ್ ಅನ್ನು ಇಂಗ್ಲಿಷ್ ಕೌಂಟಿ ಕ್ಲಬ್‌ಗಳ ಮೂಲಕ ನಡೆಸಲು ಸಾಧ್ಯವೆ? ಬೇಕೋ-ಬೇಡವೋ ಅನ್ನೋದನ್ನು ಬಿಸಿಸಿಐ ಇನ್ನೂ ನಿರ್ಧರಿಸಿಲ್ಲ. ಈ ಬಗ್ಗೆ ಚರ್ಚೆ ನಡೆಸಿ ಹೇಳುತ್ತೇವೆ ಎಂದಿತ್ತು. ಆದ್ದರಿಂದ ಶೀಘ್ರ ಈ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆಯಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications