BCCI ವಿಶ್ವದ ಶ್ರೀಮಂತ ಕ್ರಿಕೆಟ್ ಸಂಸ್ಥೆಗಳಲ್ಲಿ ಒಂದಾಗಿದೆ. ಈ ವೇಳೆ ಬಿಸಿಸಿಐ ಖಜಾನೆ ಸಹ ದಿನದಿಂದ ದಿನಕ್ಕೆ ಭರ್ತಿ ಆಗುತ್ತಲೇ ಇದೆ. ಟೀಮ್ ಇಂಡಿಯಾ ಆಟಗಾರರು ಬೇರೆ ದೇಶಗಳಿಗೆ ಹೋಲಿಸಿದರೆ ಅತಿ ಹೆಚ್ಚಿನ ಸಂಭಾವನೆ ಪಡೆಯುತ್ತಾರೆ. ಬಿಸಿಸಿಐ ಆದಾಯದ ಕುರಿತು ಈಗ ವರದಿಯೊಂದು ಹೊರಬಂದಿದ್ದು, ಇದು ನಿಜಕ್ಕೂ ಆಶ್ಚರ್ಯಕರವಾಗಿದೆ. ಕಳೆದ ಐದು ವರ್ಷಗಳಲ್ಲಿ ಬಿಸಿಸಿಐ ಗಳಿಕೆಯಲ್ಲಿ ಭಾರೀ ಏರಿಕೆ ಕಂಡಿದೆ.
ಭಾರತೀಯ ಕ್ರಿಕೆಟ್ ನಿಯಂತ್ರಣಾ ಮಂಡಳಿ ಕಳೆದ 5 ವರ್ಷಗಳಲ್ಲಿ 14,627 ಕೋಟಿ ರೂ. ಗಳಿಸಿದೆ. ಇನ್ನು ಈ ಹಿಂದಿನ ಹಣಕಾಸು ವರ್ಷದಲ್ಲೇ ಬಿಸಿಸಿಐ ಖಜಾನೆಗೆ 4193 ರೂ. ಹರಿದು ಬಂದಿದೆ. ಹೀಗಾಗಿಯೇ ಬಿಸಿಸಿಐ ಬ್ಯಾಂಕ್ ಬ್ಯಾಲೆನ್ಸ್ ದಿನೇ ದಿನೇ ವೃದ್ಧಿಸುತ್ತಲೇ ಇದೆ. ಬಿಸಿಸಿಐ ಬ್ಯಾಂಕ್ ಬ್ಯಾಲೆನ್ಸ್ ಸದ್ಯ 20,686 ಕೋಟಿ ರೂ. ಆಗಿದೆ. ಇತ್ತೀಚಿಗೆ ಬಿಡುಗಡೆಯಾದ ವರದಿಯಲ್ಲಿ ಈ ಮಾಹಿತಿ ಹೊರ ಬಂದಿದೆ.

ಕ್ರಿಕ್‌ಬಜ್ ವರದಿಯ ಪ್ರಕಾರ ರಾಜ್ಯ ಘಟಕಗಳಿಗೆ ಬಿಸಿಸಿಐ ಬಾಕಿ ಹಣವನ್ನು ಪಾವತಿಸುದಿತ್ತು. ಈ ಹಿಂದಿನ ಮೊತ್ತಕ್ಕೆ ಹೋಲಿಸಿದರೆ, ಸಾಮಾನ್ಯ ನಿಧಿಯಲ್ಲಿ ಭಾರೀ ಏರಿಕೆ ದಾಖಲಾಗಿದೆ. 2019ರಿಂದ ಈ ನಿಧಿ 3,906 ಕೋಟಿ ರೂ.ಗಳಾಗಿದ್ದು, ಈ ಹಣ ಕಳೆದ ವರ್ಷದವರೆ ದ್ವಿಗುಣವಾಗಿದೆ. ಅಂದರೆ 7,988 ಕೋಟಿ ರೂ.ಗಳಿಗೆ ಏರಿದೆ. ಈ ಏರಿಕೆಯಾದ ನಿಧಿಯನ್ನು ಬಿಸಿಸಿಐ ರಾಜ್ಯ ಸಂಘಗಳಿಗೆ ಹಂಚಿಕೆ ಮಾಡಲಿದೆ.
ಬ್ಯಾಂಕ್ ಬ್ಯಾಲೆನ್ಸ್ ಎಷ್ಟು?
2024ರ ವಾರ್ಷಿಕ ಸಾಮಾನ್ಯ ಸಭೆಯಲ್ಲಿ (ಎಜಿಎಂ) ತಿಳಿಸಿದಂತೆ ಬಿಸಿಸಿಐ ನಗದು ಹಾಗೂ ಬ್ಯಾಂಕ್ ಠೇವಣಿಗಳು 6,059 ಕೋಟಿ ರೂ.ಗಳಿಂದ 20,686 ಕೋಟಿ ರೂ.ಗಳಿಗೆ ಏರಿಕೆ ಆಗಿವೆ. ಇನ್ನು ರಾಜ್ಯ ಕ್ರಿಕೆಟ್ ಸಂಘಗಳಿಗೆ ಪಾವತಿಸದಿದ್ದಾಗ 6,059 ಕೋಟಿ ರೂ.ಗಳನ್ನು ಬಿಟ್ಟು 20,686 ಕೋಟಿ ರೂ. ಬಿಸಿಸಿಐಗೆ ಉಳಿಯಲಿದೆ ಎಂದು ತಿಳಿದು ಬಂದಿದೆ.
ಸೆಪ್ಟೆಂಬರ್ 28 ರಂದು ಬಿಸಿಸಿಐನಲ್ಲಿ ಚುನಾವಣೆ ನಡೆಯಲಿದ್ದು, ಅದೇ ದಿನ ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ, ಖಜಾಂಚಿ ಮತ್ತು ಜಂಟಿ ಕಾರ್ಯದರ್ಶಿ ಹುದ್ದೆಗಳಿಗೆ ಹೊಸ ನೇಮಕಾತಿ ನಡೆಯಲಿದೆ. ಬಿಸಿಸಿಐ ಅಧ್ಯಕ್ಷ ಹುದ್ದೆಯನ್ನು ಅಲಂಕರಿಸಿದ್ದ ರೋಜರ್ ಬಿನ್ನಿ ವಯಸ್ಸು 70 ವರ್ಷ ಮೀರಿದ್ದರಿಂದ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ಇವರಿಂದ ತೆರೆವಾದ ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ರಾಜೀವ್ ಶುಕ್ಲಾ ಅವರನ್ನು ನೇಮಿಸಲಾಗಿದೆ. ಇನ್ನು ಬಿಸಿಸಿಐ ಅಧ್ಯಕ್ಷರಾಗಿ ಆಯ್ಕೆ ಆಗುವುದು ಯಾರು ಎಂಬ ಪ್ರಶ್ನೆ ಎಲ್ಲರಲ್ಲಿ ಮನೆ ಮಾಡಿದೆ.