Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

BCCI ಬೊಕ್ಕಸಕ್ಕೆ ಐಪಿಎಲ್‌ನಿದ 9742 ಕೋಟಿ ರೂ.

ಭಾರತ ಕ್ರಿಕೆಟ್‌ ನಿಯಂತ್ರಣಾ ಮಂಡಳಿ (ಬಿಸಿಸಿಐ) ಪ್ರಸಕ್ತ ಆರ್ಥಿಕ ವರ್ಷದಲ್ಲಿ ಭಾರೀ ಮೊತ್ತದ ಲಾಭವನ್ನು ಗಳಿಸಿದೆ. ವಿಶ್ವದ ಶ್ರೀಮಂತ ಸಂಸ್ಥೆ ಎಂದೇ ಕರೆಸಿಕೊಳ್ಳುವ ಬಿಸಿಸಿಐ ಮುಡಿಗೆ ಈಗ ಮತ್ತೊಂದು ಗರಿ ಸಂದಿದೆ. ರೆಡಿಫ್ಯೂಷನ್ ಸಂಸ್ಥೆಯ ವರದಿಯ ಪ್ರಕಾರ ಕಳೆದ ವರ್ಷ ಬಿಸಿಸಿಐ ಒಟ್ಟು ಆದಾಯ 9742 ಕೋಟಿ ಆಗಿದೆ ಎಂದು ತಿಳಿಸಿದೆ. ಇದರ ದೊಡ್ಡ ಒಂದು ಭಾಗವು ಐಪಿಎಲ್‌ನಿಂದ ಹರಿದು ಬಂದಿದೆ.

ಬಿಸಿಸಿಐ ಬೊಕ್ಕಸಕ್ಕೆ ಐಪಿಎಲ್‌ ಅರ್ಧಕ್ಕಿಂತ ಹೆಚ್ಚು ಮೊತ್ತ ಲಾಭದ ರೂಪದಲ್ಲಿ ಹರಿದು ಬಂದಿದೆ. ಬಿಸಿಸಿಐ ಒಟ್ಟು ಗಳಿಕೆಯ ಶೆಕಡಾ 59 ರಷ್ಟು ಮೊತ್ತ ಐಪಿಎಲ್‌ನಿಂದ ಹರಿದು ಬಂದಿದೆ. ಅಂದರೆ ಸುಮಾರು 5761 ಕೋಟಿ ರೂ ಹರಿದು ಬಂದಿದೆ. ಬಿಸಿಸಿಐ ಐಪಿಎಲ್‌ ಅಷ್ಟೇ ಅಲ್ಲದೇ ಮಾಧ್ಯಮ ಹಕ್ಕುಗಳ ಮಾರಾಟದಿಂದಲೂ ದೊಡ್ಡ ಮೊತ್ತವನ್ನು ಬೊಕ್ಕಸಕ್ಕೆ ಹಾಕಿಕೊಂಡಿದೆ. ಬಿಸಿಸಿಐ ಮಾಧ್ಯಮ ಹಕ್ಕು ಮಾರಾಟದಿಂದ ಸುಮಾರು 361 ಕೋಟಿ ರೂ. ಗಳಿಸಿದೆ.

BCCI s Record Earnings IPL Fuels 59 of 9742 Cr Revenue RCB Wins 18th Season

ಹೆಚ್ಚು ಹಣ ಬರುವುದೇ ಇಲ್ಲಿಂದ

ವಿಶ್ವದ ಶ್ರೀಮಂತ ಲಿಗ್‌ ಎಂಬ ಹೆಗ್ಗಳಿಕೆಗೆ ಪಾತ್ರರವಾಗಿರುವ ಐಪಿಎಲ್‌ ಈಗ ಬಿಸಿಸಿಐನ ಪ್ರಮುಖ ಆದಾಯದ ಮೂಲವಾಗಿದೆ. ದೇಶೀಯ ಟೂರ್ನಿಗಳಾದ ರಣಜಿ, ದುಲೀಪ್‌, ಸಿಕೆ ನಾಯ್ದು ಅಂತಹ ಟ್ರೋಫಿಗಳನ್ನು ಸಹ ವಾಣಿಜ್ಯೀ ಕರಿಸಬಹುದಾಗುವ ಸಾಮರ್ಥ್ಯವನ್ನು ಹೊಂದಿದೆ ಎಂದು ರೆಡಿಫ್ಯೂಷನ್ ವ್ಯವಸ್ಥಾಪಕ ನಿರ್ದೇಶಕ ಸಂದೀಪ್ ಗೋಯಲ್‌ ತಿಳಿಸಿದ್ದಾರೆ. ಬಿಸಿಸಿಐ 30 ಸಾವಿರ ಕೋಟಿಗಳನ್ನು ಮೀಸಲಿಟ್ಟಿದ್ದು, ಇದು ಪ್ರತಿ ವರ್ಷ ಸುಮಾರು 1 ಸಾವಿರ ಕೋಟಿ ರೂಗಳ ಬಡ್ಡಿಯನ್ನು ನೀಡುತ್ತದೆ.

ಬಿಸಿಸಿಐ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ 3 ಸಾವಿರ ಕೋಟಿ ರೂಗಳಗಿಂತಲೂ ಹೆಚ್ಚಿನ ಆದಾಯವನ್ನು ಗಳಿಸಿದೆ. ಕಳೆದ ಹಣಕಾಸು ವರ್ಷದಲ್ಲಿ ಬಿಸಿಸಿಐ 6820 ಕೋಟಿ ರೂ.ಗಳ ಆದಾಯವನ್ನು ಗಳಿಸಿತ್ತು. ಈ ಬಾರಿ 9741 ಕೋಟಿ ರೂ. ಗಳಿಸಿದೆ. ಇನ್ನು 2021-22ರ ಹಣಕಾಸು ವರ್ಷದಲ್ಲಿ ಬಿಸಿಸಿಐ 4230 ರೂಗಳ ಗಳಿಕೆಯನ್ನು ಮಾಡಿತ್ತು.

ಬಿಸಿಸಿಐಗೆ ಆದಾಯ ಹೇಗೆ?

ಬಿಸಿಸಿಐ ತನ್ನ ಮಾಧ್ಯಮ ಪ್ರಸಾರ ಹಕ್ಕುಗಳು ಅಂದರೆ ಐಪಿಎಲ್‌ ನೇರ ಪ್ರಸಾರದ ಹಕ್ಕುಗಳಿಂದ ಹೆಚ್ಚಿನ ಹಣವನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳುತ್ತಿದೆ. ಇನ್ನು ಬಿಸಿಸಿಐ ತೆಕ್ಕೆ ಸೇರಲಿರುವ ಇನ್ನೊಂದು ದೊಡ್ಡ ಆದಾಯ ಎಂದರೆ ಶೀರ್ಷಿಕೆ ಪ್ರಾಯೋಜಕತ್ವ. ಇನ್ನು ಫ್ರಾಂಚೈಸಿಗಳು ನೀಡುವ ಶುಲ್ಕವೂ ಬಿಸಿಸಿಐ ಬೊಕ್ಕಸ ಸೇರುತ್ತದೆ.

ಜೂನ್‌ 3 ರಂದು ಅಹಮದಾಬಾದ್‌ನಲ್ಲಿ ನಡೆದ ಐಪಿಎಲ್‌ ಫೈನಲ್‌ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್ ತಂಡವನ್ನು 6 ರನ್‌ಗಳಿಂದ ಮಣಿಸಿದ ಆರ್‌ಸಿಬಿ, ಐಪಿಎಲ್‌ ಚಾಂಪಿಯನ್‌ ಪಟ್ಟವನ್ನು ಅಲಂಕರಿಸಿದ 8ನೇ ತಂಡ ಎಂಬ ಹೆಗ್ಗಳಿಕೆ ತನ್ನದಾಗಿಸಿಕೊಂಡಿದೆ.

Story first published: Friday, July 18, 2025, 21:00 [IST]
Other articles published on Jul 18, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+