Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ರಾಜೀವ್ ಶುಕ್ಲಾ ಕೈಯಲ್ಲಿ ಚೆನ್ನೈ, ರಾಜಸ್ಥಾನ ಭವಿಷ್ಯ

ಮುಂಬೈ, ಜು. 19: ಚೆನ್ನೈ ಮತ್ತು ರಾಜಸ್ಥಾನ ತಂಡಗಳ ನಿಷೇಧದ ಕುರಿತಾದ ವಿಚಾರಗಳನ್ನು ಚರ್ಚೆ ಮಾಡಿ ಅಂತಿಮ ತೀರ್ಮಾನ ತೆಗೆದುಕೊಳ್ಳುವ ಅಧಿಕಾರವನ್ನು ಇಂಡಿಯನ್ ಪ್ರಿಮಿಯರ್ ಲೀಗ್ ಗೌರವ ಮಂಡಳಿ, ಅಧ್ಯಕ್ಷ ರಾಜೀವ್ ಶುಕ್ಲಾ ನೇತೃತ್ವದ ಸಮಿತಿಗೆ ನೀಡಿದೆ.

ನಿಷೇಧದ ಬಗ್ಗೆ ಚರ್ಚೆ ಮಾಡಲು ಎರಡು ತಂಡದ ಪ್ರಾಂಚೈಸಿಗಳು ಮತ್ತು ಮಂಡಳಿ ಮುಂಬೈನಲ್ಲಿ ಭಾನುವಾರ ಸಭೆ ಸೇರಿದ್ದವು. ಆದರೆ ಯಾವುದೆ ಸೂಕ್ತ ನಿರ್ಧಾರಕ್ಕೆ ಬರಲು ಸಾಧ್ಯವಾಗಲಿಲ್ಲ. ಇನ್ನು ಆರು ವಾರದ ಒಳಗೆ ತೀರ್ಮಾನಕ್ಕೆ ಬರಲಾಗುವುದು ಎಂದು ಸಭೆ ತಿಳಿಸಿದೆ.[ಅಮಾನತುಗೊಂಡರೂ ಚೆನ್ನೈ, ರಾಜಸ್ಥಾನ ಐಪಿಎಲ್ ನಲ್ಲಿ ಆಡ್ಬಹುದು!]

shukla

ನಾವು ನ್ಯಾಯಾಧೀಶ ಲೋಧಾ ಅವರ ತೀರ್ಮಾನವನ್ನು ಗೌರವಿಸುತ್ತೇವೆ. ಚರ್ಚೆಯ ನಂತರವ ಸಮಸ್ಯೆ ಬಗೆಹರಿಸಿಕೊಳ್ಳಲಾಗುವುದು ಎಂದು ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್ ಸಭೆ ನಂತರ ತಿಳಿಸಿದರು.

ಭಾನುವಾರದ ಸಭೆಯ ಅಂತಿಮ ತೀರ್ಮಾನಗಳು [ಐಪಿಎಲ್ ಹಗರಣ 2013 ರಿಂದ 2015: ಟೈಮ್ ಲೈನ್]
* ನ್ಯಾಯಾಧೀಶ ಲೋಧಾ ಅವರ ಆದೇಶಕಕ್ಕೆ ಬದ್ಧರಾಗಿಯೆ ಪರ್ಯಾಯ ಕ್ರಮಗಳ ಬಗ್ಗೆ ಯೋಜನೆ ಮಾಡಲಾಗುವುದು.
* ಯಾವುದೇ ತೀರ್ಮಾನಗಳು ವ್ಯಕ್ತಿಗಳ ಮೇಲೆ ಪರಿಣಾಮ ಬೀರಲು ಸಾಧ್ಯವಿಲ್ಲ. ಬಿಸಿಸಿಐ ಈ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಿ ಅಂತಿಮ ನಿರ್ಧಾರಕ್ಕೆ ಬರಲಿದೆ.
* ಮುಂದಿನ ಎಲ್ಲ ಬೆಳವಣಿಗೆಗಳ ನೇತೃತ್ವವನ್ನು ರಾಜೀವ್ ಶುಕ್ಲಾ ವಹಿಸಿಕೊಳ್ಳಲಿದ್ದು ಅವರ ಮಾರ್ಗದರ್ಶನದ ಅಡಿಯಲ್ಲೇ ಕಾರ್ಯ ಚಟುವಟಿಕೆಗಳು ನಡೆಯಲಿದೆ.
* ರಾಜೀವ್ ಶುಕ್ಲಾ ನೇತೃತ್ವದ ಸಮಿತಿ ಆರು ವಾರಗಳ ಅವಧಿಯಲ್ಲಿ ವರದಿ ತಯಾರಿಸಿ ನೀಡಲಿದ್ದು ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುವುದು.

Story first published: Wednesday, January 3, 2018, 10:03 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+