2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 17ನೇ ಆವೃತ್ತಿ ಆರಂಭವಾಗುವ ಮೊದಲು, ಕೆಲವು ಸ್ಟಾರ್ ಆಟಗಾರರು ಭಾರೀ ನಿರೀಕ್ಷೆ ಮೂಡಿಸಿದ್ದರು. ಆದರೆ, ಟೂರ್ನಿ ಆರಂಭವಾಗುತ್ತಿದ್ದಂತೆಯೇ ಅವರ ಅಸಲಿ ಆಟ ಬಯಲಾಗಿದೆ.
ಐಪಿಎಲ್ ಪಂದ್ಯಾವಳಿ ಇತಿಹಾಸದಲ್ಲಿಯೇ ಅತಿ ಹೆಚ್ಚು ಸಂಭಾವನೆ ಪಡೆದ ವೇಗಿ ಮಿಚೆಲ್ ಸ್ಟಾರ್ಕ್ ಮತ್ತು ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಅವರಂತಹ ಸ್ಟಾರ್ ಆಟಗಾರರ ಮೇಲೆ ಎಲ್ಲರ ಕಣ್ಣುಗಳು ನೆಟ್ಟಿದ್ದವು. ಏಕೆಂದರೆ ಅವರು ಐಪಿಎಲ್ ಆರಂಭಕ್ಕೂ ಮುನ್ನ ಉತ್ತಮ ಫಾರ್ಮ್‌ನಲ್ಲಿದ್ದರು.
ಆದರೆ, ಐಪಿಎಲ್ ಟೂರ್ನಿ ನಡೆಯುತ್ತಿದ್ದಂತೆಯೇ ಈ ಆಟಗಾರರು ಫಾರ್ಮ್ ಕಳೆದುಕೊಂಡು, ಹೆಚ್ಚಿನ ನಿರೀಕ್ಷೆ ಹೊಂದಿದ್ದ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು. ಐಪಿಎಲ್ 2024ರಲ್ಲಿ ಈವರೆಗೆ ವೈಫಲ್ಯ ಅನುಭವಿಸಿದ ಐವರು ಆಟಗಾರರ ಪಟ್ಟಿ ಇಲ್ಲಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಇತಿಹಾಸದಲ್ಲಿ ಅತಿ ಹೆಚ್ಚು (24.75 ಕೋಟಿ ರೂಪಾಯಿ) ಸಂಭಾವನೆ ಪಡೆದ ಆಟಗಾರ ಮಿಚೆಲ್ ಸ್ಟಾರ್ಕ್. ಆಸ್ಟ್ರೇಲಿಯಾದ ವೇಗಿಯಿಂದ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡಕ್ಕೆ ನಷ್ಟವಾಗಿದೆ ಎಂಬುದು ಸಾಬೀತಾಗಿದೆ.
ಎಡಗೈ ವೇಗಿ ಈವರೆಗೆ ತನ್ನ ಸಾಮರ್ಥ್ಯ ಹಾಗೂ ಬೆಲೆಗೆ ತಕ್ಕ ಪ್ರದರ್ಶನ ನೀಡಿಲ್ಲ. ಆಡಿದ ನಾಲ್ಕು ಪಂದ್ಯಗಳಲ್ಲಿ ಮಿಚೆಲ್ ಸ್ಟಾರ್ಕ್ 11ರ ಎಕಾನಮಿ ದರದಲ್ಲಿ ಎನ್ ನೀಡಿ, ಕೇವಲ ಎರಡು ವಿಕೆಟ್‌ಗಳನ್ನು ಪಡೆದಿದ್ದಾರೆ.
ಅತಿ ಹೆಚ್ಚು ಸಂಬಳ ಪಡೆಯುವ ಆಟಗಾರ ಎಂಬ ಶಾಪಕ್ಕೆ ಮಿಚೆಲ್ ಸ್ಟಾರ್ಕ್ ಗುರಿಯಾಗಿದ್ದಾರೆ ಎಂದು ತೋರುತ್ತದೆ. ಇದು ಹೆಚ್ಚಿನ ಸಂಭಾವನೆಯ ಒತ್ತಡದಲ್ಲಿ ಆಟಗಾರರು ಉತ್ತಮ ಪ್ರದರ್ಶನ ನೀಡಲು ಆಗಾಗ್ಗೆ ವಿಫಲರಾಗುತ್ತಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಪಾಲಿಗೆ ಫಾಫ್ ಡು ಪ್ಲೆಸಿಸ್ ಅವರ ಕಳಪೆ ನುಂಗಲಾರದ ಬಿಸಿತುಪ್ಪವಾಗಿ ಪರಿಣಮಿಸಿದೆ. ಆರ್‌ಸಿಬಿ ಪ್ರಸ್ತುತ ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ.
ಇದಕ್ಕೆ ಕಾರಣ, ಆರ್‌ಸಿಬಿ ತಂಡದ ಪ್ರಮುಖ ಆಟಗಾರರು ತಮ್ಮ ಅತ್ಯುತ್ತಮ ಪ್ರದರ್ಶನ ನೀಡಲು ವಿಫಲರಾಗಿದ್ದಾರೆ. ಸ್ವತಃ ಆರ್‌ಸಿಬಿ ನಾಯಕ ಫಾಫ್ ಡು ಪ್ಲೆಸಿಸ್ ಕೂಡ ರನ್ ಗಳಿಸಲು ಹೆಣಗಾಡುತ್ತಿದ್ದಾರೆ.

ಆಸ್ಟ್ರೇಲಿಯಾ ಸ್ಟಾರ್ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಹಿಂದಿನ ಆವೃತ್ತಿಯಲ್ಲಿ ಅತ್ಯುತ್ತಮವಾಗಿ ಕಂಡುಬಂದಿದ್ದರು. ಆರ್‌ಸಿಬಿ ತಂಡಕ್ಕೆ ಮಧ್ಯಮ ಕ್ರಮಾಂಕದಲ್ಲಿ ತಮ್ಮ ಸ್ಫೋಟಕ ಬ್ಯಾಟಿಂಗ್‌ನಿಂದ ಸ್ಕೋರ್ ಬೋರ್ಡ್ ಹೆಚ್ಚಿಸುವ ಇವರದ್ದಾಗಿತ್ತು.
ಆದರೆ, ಈ ಆವೃತ್ತಿಯಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಮೇಲೆ ಇದ್ದ ಅಪಾರ ನಿರೀಕ್ಷೆಗಳು ಹುಸಿಯಾಗಿವೆ. ಮ್ಯಾಕ್ಸ್‌ವೆಲ್ ಐದು ಪಂದ್ಯಗಳಲ್ಲಿ ಕೇವಲ 32 ರನ್ ಗಳಿಸುವ ಮೂಲಕ ಮೈದಾನದಲ್ಲಿ ಪರದಾಡುತ್ತಿದ್ದಾರೆ.

ಗುಜರಾತ್ ಟೈಟನ್ಸ್ ಜೊತೆಗಿನ ಬೃಹತ್ ಮೊತ್ತದ ವ್ಯಾಪಾರದ ಮೂಲಕ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ಹಾರ್ದಿಕ್ ಪಾಂಡ್ಯರನ್ನು ಸ್ವಾಧೀನಪಡಿಸಿಕೊಂಡಿತು. ತಂಡಕ್ಕೆ ಮರಳಿದ ಬಳಿಕ ಮುಂಬೈ ಇಂಡಿಯನ್ಸ್ ಮ್ಯಾನೇಜ್‌ಮೆಂಟ್ ತಮ್ಮ ತಂಡದ ಭವಿಷ್ಯಕ್ಕಾಗಿ ಅವರನ್ನು ನಾಯಕರನ್ನಾಗಿ ಕೂಡ ನೇಮಿಸಿತು.
ಐಪಿಎಲ್ 2024ರ ಆವೃತ್ತಿಯಲ್ಲಿ ಹಾರ್ದಿಕ್ ಪಾಂಡ್ಯ ಯಾವುದೇ ಬ್ಯಾಟಿಂಗ್, ಬೌಲಿಂಗ್ ಮತ್ತು ನಾಯಕತ್ವದ ವಿಭಾಗದಲ್ಲಿ ಉತ್ತಮ ಪ್ರದರ್ಶನ ನೀಡಲು ವಿಫಲವಾಗಿದೆ. ಮುಂಬೈ ಇಂಡಿಯನ್ಸ್ ತಂಡ ಆಡಿದ 4 ಪಂದ್ಯಗಳಲ್ಲಿ ಕೇವಲ ಒಂದು ಪಂದ್ಯ ಮಾತ್ರ ಗೆದ್ದಿದೆ.

ಐಪಿಎಲ್ 2024ರ ಆವೃತ್ತಿಯಲ್ಲಿ ಆರ್‌ಸಿಬಿ ತಂಡದ ವೈಫಲ್ಯಕ್ಕೆ ಅವರ ಬೌಲಿಂಗ್ ವಿಭಾಗದ ಕಳಪೆ ಪ್ರದರ್ಶನವೂ ಒಂದು ಕಾರಣವಾಗಿದೆ. ಪ್ರತಿ ಪಂದ್ಯದಲ್ಲೂ ದುಬಾರಿಯಾಗುತ್ತಿರುವುದು ಬ್ಯಾಟರ್‌ಗಳ ಪ್ರಯತ್ನವನ್ನು ಹೊಳೆಯಲ್ಲು ಹುಣಸೆ ಹಣ್ಣು ತೊರೆದಂತಾಗಿದೆ.
ಆರ್‌ಸಿಬಿ ಪ್ರಮುಖ ವೇಗಿ ಮೊಹಮ್ಮದ್ ಸಿರಾಜ್ ಅವರು ವಿಕೆಟ್ ಪಡೆಯಲು ಸಾಧ್ಯವಾಗದೆ, ಹೆಚ್ಚಿನ ರನ್ ಬಿಟ್ಟುಕೊಟ್ಟು ದುಬಾರಿಯಾಗುತ್ತಿರುವುದು ಕಳಪೆ ಫಾರ್ಮ್ ಮೂಲಕ ಸಾಗುತ್ತಿದ್ದಾರೆ. ಸಿರಾಜ್ ಐದು ಪಂದ್ಯಗಳಲ್ಲಿ ಕೇವಲ ನಾಲ್ಕು ವಿಕೆಟ್‌ಗಳನ್ನು ಪಡೆದಿದ್ದಾರೆ.