ಕೆಪಿಎಲ್: ಇಂದು ಬಿಜಾಪುರ ಬುಲ್ಸ್-ಬೆಳಗಾವಿ ಪ್ಯಾಂಥರ್ಸ್ ಫೈನಲ್ ಹಣಾಹಣಿ
ಹುಬ್ಬಳ್ಳಿ, ಸೆಪ್ಟೆಂಬರ್ 23 : ಭರತ್ ಚಿಪ್ಲಿ ನಾಯಕತ್ವದ ಬಿಜಾಪುರ ಬುಲ್ಸ್ ತಂಡ ಕರ್ನಾಟಕ ಪ್ರಿಮಿಯರ್ ಲೀಗ್ ನ 6ನೇ ಆವೃತ್ತಿಯ ಫೈನಲ್ ತಲುಪಿದೆ.
ಶುಕ್ರವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ನಮ್ಮ ಶಿವಮೊಗ್ಗ ತಂಡ ವಿರುದ್ಧ ನಾಲ್ಕು ವಿಕೆಟ್ ಗಳಿಂದ ಭರ್ಜರಿ ಜಯ ಸಾಧಿಸಿ ಫೈನಲ್ ಗೆ ಲಗ್ಗೆ ಇಟ್ಟಿತು.

ಮೊದಲು ಬ್ಯಾಟ್ ಮಾಡಿದ ಶಿವಮೊಗ್ಗ ತಂಡ 20 ಓವರ್‌ಗಳಲ್ಲಿ ಐದು ವಿಕೆಟ್ ಕಳೆದುಕೊಂಡು 157 ರನ್ ಗಳಿಸಿತು. ಈ ಗುರಿಯನ್ನು ಬುಲ್ಸ್ 19.4 ಓವರ್‌ಗಳಲ್ಲಿ ತಲುಪಿ ಟೂರ್ನಿಯಲ್ಲಿ ಎರಡನೇ ಬಾರಿ ಫೈನಲ್ ಪ್ರವೇಶಿಸಿತು.
ಶನಿವಾರ ಇಲ್ಲಿನ ರಾಜನಗರದಲ್ಲಿರುವ ಕೆಎಸ್ ಸಿಎ ಕ್ರೀಡಾಂಗಣದಲ್ಲಿ ನಡೆಯಲಿರುವ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಬುಲ್ಸ್ ತಂಡ ಬೆಳಗಾವಿ ಪ್ಯಾಂಥರ್ಸ್ ಎದುರು ಪೈಪೋಟಿ ನಡೆಸಲಿದೆ.
ಸಂಕ್ಷಿಪ್ತ ಸ್ಕೋರು: ನಮ್ಮ ಶಿವಮೊಗ್ಗ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 157 (ಲಿಯಾನ್ ಖಾನ್ 45, ಅಬ್ದುಲ್ ಮಜಿದ್ 17, ಆರ್. ಜೊನಾಥನ್ 22, ಬಾಲಚಂದ್ರ ಅಖಿಲ್ 14, ಶೋಯಬ್ ಮ್ಯಾನೇಜರ್ 36; ಎಂ.ಜಿ. ನವೀನ್ 27ಕ್ಕೆ2, ಎಚ್.ಎಸ್.ಶರತ್ 33ಕ್ಕೆ1).
ಬಿಜಾಪುರ ಬುಲ್ಸ್: 19.4 ಓವರ್‌ಗಳಲ್ಲಿ 6 ವಿಕೆಟ್‌ಗೆ 159 (ಮೊಹಮ್ಮದ್ ತಹಾ 10, ಭರತ್ ಚಿಪ್ಲಿ 10, ಎಂ.ಜಿ.ನವೀನ್ 19, ದಿಕ್ಷಾಂಶು ನೇಗಿ ಔಟಾಗದೆ 24, ಎಚ್.ಎಸ್. ಶರತ್ 17, ಎಂ. ನಿದೇಶ್ 25, ಎ.ಎಂ. ಕಿರಣ್ 15, ಅಭಿಮನ್ಯು ಮಿಥುನ್ ಔಟಾಗದೆ 32; ಬಾಲಚಂದ್ರ ಅಖಿಲ್ 20ಕ್ಕೆ2).

ಫಲಿತಾಂಶ: ಬಿಜಾಪುರ ಬುಲ್ಸ್ ತಂಡಕ್ಕೆ 4 ವಿಕೆಟ್ ಗೆಲುವು. ಪಂದ್ಯ ಶ್ರೇಷ್ಠ: ಅಭಿಮನ್ಯು ಮಿಥುನ್.
ಫೈನಲ್ ಪಂದ್ಯಕ್ಕೆ ಉಚಿತ ಪ್ರವೇಶ: ಶನಿವಾರ ಸೆ.23 ರಂದು ಸಂಜೆ 7 ಗಂಟೆಗೆ ನಡೆಯುವ ಕರ್ನಾಟಕ ಪ್ರೀಮಿಯರ್ ಲೀಗ್'ನ 6ನೇ ಆವೃತ್ತಿಯ ಫೈನಲ್ ಪಂದ್ಯಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ.
ಇಲ್ಲಿನ ರಾಜನಗರ ಕ್ರೀಡಾಂಗಣದ ಗೇಟ್ ನಂ 3 ಮತ್ತು ನಾಲ್ಕರಲ್ಲಿ ಸಾರ್ವಜನಿಕರಿಗೆ ಪ್ರವೇಶ ಉಚಿತವಿರುತ್ತದೆ. ಪಂದ್ಯ ರಾತ್ರಿ 7 ಗಂಟೆಗೆ ಆರಂಭಗೊಳ್ಳಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications