AUS vs ENG: ಆಸ್ಟ್ರೇಲಿಯಾ ಬೌಲಿಂಗ್ "ಬೆನ್ನು" ಮುರಿದ ಡಕೆಟ್: ಇಂಗ್ಲೆಂಡ್ ಇತಿಹಾಸ
ಇಂಗ್ಲೆಂಡ್ ತಂಡದ ಅನುಭವಿ ಆರಂಭಿಕ ಆಟಗಾರ ಬೆನ್ ಡಕೆಟ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಇತಿಹಾಸ ನಿರ್ಮಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ "ಬಿ" ಗುಂಪಿನ ಪಂದ್ಯದಲ್ಲಿ ಇಂಗ್ಲೆಂಡ್ ಆರಂಭಿಕ ಆಟಗಾರ ಶತಕ ಬಾರಿಸಿ ಅಬ್ಬರಿಸಿದ್ದಾರೆ. ಈ ಮೂಲಕ ಆಸ್ಟ್ರೇಲಿಯಾಕ್ಕೆ ಸವಾಲಿನ ಮೊತ್ತವನ್ನು ನೀಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ. ಇಂಗ್ಲೆಂಡ್ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 351 ರನ್ ಕಲೆ ಹಾಕಿದೆ. ಈ ಪಂದ್ಯ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಇತಿಹಾಸ ನಿರ್ಮಿಸಿದೆ.
ಇಂಗ್ಲೆಂಡ್ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆಯಿತು. ತಂಡದ ಪರ ಫಿಲ್ ಸಾಲ್ಟ್ ಹಾಗೂ ಮಧ್ಯಮ ಕ್ರಮಾಂಕದಲ್ಲಿ ವಿಕೆಟ್ ಕೀಪರ್ ಬ್ಯಾಟರ್ ಜೇಮಿ ಸ್ಮಿತ್ ತಂಡಕ್ಕೆ ಆಧಾರವಾಗಲಿಲ್ಲ. 43 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಆರಂಭಿಕ ಬೆನ್ ಡಕೆಟ್ ಹಾಗೂ ಅನುಭವಿ ಬ್ಯಾಟರ್ ಜೋ ರೂಟ್ ಆಧಾರವಾಯಿತು. ಈ ಜೋಡಿ ಮಿಡ್ಲ್ ಓವರ್‌ನಲ್ಲಿ ಅಮೋಘ ಜೊತೆಯಾಟ ನೀಡಿತು.

ಮೂರನೇ ವಿಕೆಟ್‌ಗೆ ಭರ್ಜರಿ ಜೊತೆಯಾಟ
ಮೂರನೇ ವಿಕೆಟ್ ಡಕೆಟ್ ಹಾಗೂ ರೂಟ್ ಜೋಡಿ ಭರ್ಜರಿ ಜೊತೆಯಾಟವನ್ನು ನೀಡಿತು. ಈ ಜೋಡಿ ಕೆಟ್ಟ ಎಸೆತವನ್ನು ದಂಡಿಸುತ್ತಾ, ಒಳ್ಳೆಯ ಎಸೆತಗಳಿಗೆ ಮರ್ಯಾದೆ ನೀಡುತ್ತಾ ಸಾಗಿತು. ಈ ಜೋಡಿ 155 ಎಸೆತಗಳಲ್ಲಿ 158 ರನ್ ಸೇರಿಸಿತು. ಆಗ ಜೋ ರೂಟ್ ಅವರಿಗೆ ಆಡಂ ಜಾಂಪಾ ಖೆಡ್ಡಾ ತೋಡಿದರು. ಜೋ ರೂಟ್ 4 ಬೌಂಡರಿ ನೆರವಿನಿಂದ 68 ರನ್ ಕಲೆ ಹಾಕಿದರು.
ಮಧ್ಯಮ ಕ್ರಮಾಂಕದಲ್ಲಿ ಹ್ಯಾರಿ ಬ್ರೂಕ್ (3), ಜೋಸ್ ಬಟ್ಲರ್ (23), ಲಿಯಾಮ್ ಲಿವಿಂಗ್ ಸ್ಟೋನ್ (14), ದೊಡ್ಡ ಆಟವನ್ನು ಆಡಲಿಲ್ಲ. ಆದರೆ ಬೌಲರ್ ಜೋಫ್ರಾ ಆರ್ಚರ್ ಮೈಚಳಿ ಬಿಟ್ಟು ಬ್ಯಾಟ್ ಮಾಡಿದರು. ಇವರು 10 ಎಸೆತಗಳಲ್ಲಿ 21 ರನ್ ಸಿಡಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು.
ಬೆನ್ ಡಕೆಟ್ ಅಬ್ಬರ
ಬೆನ್ ಡಕೆಟ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಇತಿಹಾಸ ನಿರ್ಮಿಸಿದರು. ಇವರು ಈ ಟೂರ್ನಿಯಲ್ಲಿ 150ಕ್ಕೂ ಹೆಚ್ಚು ರನ್ ಬಾರಿಸಿದ ಹಿರಿಮೆ ತಮ್ಮದಾಗಿಸಿಕೊಂಡರು. ಇವರು 143 ಎಸೆತಗಳಲ್ಲಿ 17 ಬೌಂಡರಿ, 3 ಸಿಕ್ಸರ್ ಸಹಾಯದಿಂದ 165 ರನ್ ಸಿಡಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು.

ಆಸ್ಟ್ರೇಲಿಯಾದ ಪರ ಬೆನ್ ದ್ವಾರ್ಶುಯಿಸ್ 3, ಆಡಂ ಜಂಪಾ ಹಾಗೂ ಮಾರ್ನಸ್ ಲಂಬುಶೇನೆ ತಲಾ ಎರಡು ವಿಕೆಟ್ ಪಡೆದರು.
ಇಂಗ್ಲೆಂಡ್ ಇತಿಹಾಸ
ಇಂಗ್ಲೆಂಡ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಇತಿಹಾಸ ನಿರ್ಮಿಸಿದೆ. ಈ ತಂಡದ ಚಾಂಪಿಯನ್ಸ್ ಟ್ರೋಫಿಯಲ್ಲಿ ಯಾರು ನಿರ್ಮಿಸದ ದಾಖಲೆಯನ್ನು ಬರೆದಿದೆ. ಈ ಟೂರ್ನಿಯಲ್ಲಿ ಯಾವುದೇ ತಂಡ 350 ರನ್ ಮುಟ್ಟಿರಲಿಲ್ಲ. ಈ ತಂಡ ಲಾಹೋರ್‌ನಲ್ಲಿ ಈ ಸಾಧನೆ ಮಾಡಿ ಅಬ್ಬರಿಸಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications