World Cup 2023: ಭಾರತದಲ್ಲಿ ಈ ಸಾಧನೆ ಮಾಡಿದ ಇಂಗ್ಲೆಂಡ್‌ನ 8ನೇ ಬ್ಯಾಟರ್ ಬೆನ್ ಸ್ಟೋಕ್ಸ್
ಗುರುವಾರ, ಅಕ್ಟೋಬರ್ 26ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯತ್ತಿರುವ 2023ರ ಐಸಿಸಿ ಏಕದಿನ ವಿಶ್ವಕಪ್‌ನ 25ನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವು ಶ್ರೀಲಂಕಾ ತಂಡದ ವಿರುದ್ಧ ಸಾಧಾರಣ ಮೊತ್ತಕ್ಕೆ ಆಲೌಟ್ ಆಗಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡದ ಬ್ಯಾಟರ್‌ಗಳು ವೈಫಲ್ಯ ಕಂಡ ಕಾರಣ 33.2 ಓವರ್‌ಗಳಲ್ಲಿ ಕೇವಲ 156 ರನ್‌ಗಳಿಗೆ ಸರ್ವಪತನ ಕಂಡಿದೆ.

ಇದೇ ವೇಳೆ 73 ಎಸೆತಗಳಲ್ಲಿ 6 ಬೌಂಡರಿ ಮೂಲಕ 43 ರನ್ ಬಾರಿಸಿ ಇಂಗ್ಲೆಂಡ್ ತಂಡದ ಪರ ಗರಿಷ್ಠ ಸ್ಕೋರರ್ ಎನಿಸಿದ ಬೆನ್ ಸ್ಟೋಕ್ಸ್ ಅವರು ಭಾರತದ ನೆಲದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 1000 ರನ್ ಪೂರ್ಣಗೊಳಿಸಿದ ಇಂಗ್ಲೆಂಡ್‌ನ 8ನೇ ಬ್ಯಾಟರ್ ಎನಿಸಿದರು.
ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಶ್ರೀಲಂಕಾ ವಿರುದ್ಧ 2023ರ ವಿಶ್ವಕಪ್ ಪಂದ್ಯದಲ್ಲಿ ಇಂಗ್ಲೆಂಡ್ ಸ್ಟಾರ್ ಬ್ಯಾಟರ್ ಈ ಸಾಧನೆ ಮಾಡಿದರು.
ಇಂಗ್ಲೆಂಡ್‌ನ ಮಾಜಿ ಆಟಗಾರರಾದ ಕೆವಿನ್ ಪೀಟರ್ಸನ್ (1876), ಜೋ ರೂಟ್ (1797), ಅಲೆಸ್ಟರ್ ಕುಕ್ (1586), ಮೈಕ್ ಗ್ಯಾಟಿಂಗ್ (1408), ಗ್ರಹಾಂ ಗೂಚ್ (1187), ಆಂಡ್ರ್ಯೂ ಸ್ಟ್ರಾಸ್ (1090) ಮತ್ತು ಇಯಾನ್ ಬೆಲ್ (1062) ಈ ಸಾಧನೆ ಮಾಡಿದ ಇತರ ಏಳು ಬ್ಯಾಟ್ಸ್‌ಮನ್‌ಗಳಾಗಿದ್ದಾರೆ.

ಬೆನ್ ಸ್ಟೋಕ್ಸ್ ಮೊದಲ ಬಾರಿಗೆ 2016ರ ಟಿ20 ವಿಶ್ವಕಪ್‌ನಲ್ಲಿ ಭಾರತದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದರು. ಇತ್ತೀಚಿಗೆ ಸೊಂಟದ ಗಾಯದಿಂದಾಗಿ ಬೆನ್ ಸ್ಟೋಕ್ಸ್ ಈ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ಪರ ಮೊದಲ ನಾಲ್ಕು ಪಂದ್ಯಗಳನ್ನು ಆಡಲಿಲ್ಲ. ಅಲ್ಲದೆ, ಭಾರತ ಮತ್ತು ಬಾಂಗ್ಲಾದೇಶ ವಿರುದ್ಧ ಅಭ್ಯಾಸ ಪಂದ್ಯಗಳಲ್ಲಿಯೂ ಆಡಿರಲಿಲ್ಲ.
ಬೆನ್ ಸ್ಟೋಕ್ಸ್ ಅಕ್ಟೋಬರ್ 21ರಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಇಂಗ್ಲೆಂಡ್‌ನ ಪಂದ್ಯದಲ್ಲಿ ಆಡಲು ಮೈದಾನಕ್ಕೆ ಮರಳಿದರು. ಆದರೆ, ಎಂಟು ಎಸೆತಗಳಲ್ಲಿ ಒಂದು ಬೌಂಡರಿಯೊಂದಿಗೆ 5 ರನ್ ಗಳಿಸಿ ವೇಗದ ಬೌಲರ್ ಕಗಿಸೊ ರಬಾಡ ಅವರಿಗೆ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು.
ಬೆನ್ ಸ್ಟೋಕ್ಸ್ ನಂ.4ರಲ್ಲಿ ಬ್ಯಾಟ್ ಮಾಡಲು ಬಂದು ಕಗಿಸೊ ರಬಾಡಗೆ ಸುಲಭ ಕ್ಯಾಚ್ ನೀಡಿ ಔಟ್ ಆದರು. ಬಳಿಕ ಬೆನ್ ಸ್ಟೋಕ್ಸ್ ಹತಾಶೆಯಿಂದ ಗಾಳಿಯಲ್ಲಿ ಬ್ಯಾಟ್‌ನ್ನು ತೂರಿದರು. ಈ ವೇಳೆ ಇಂಗ್ಲೆಂಡ್ 229 ರನ್‌ಗಳಿಂದ ದಕ್ಷಿಣ ಆಫ್ರಿಕಾ ವಿರುದ್ಧ ಸೋಲು ಅನುಭವಿಸಿತು ಮತ್ತು 50 ಓವರ್‌ಗಳ ಸ್ವರೂಪದಲ್ಲಿ ಇಂಗ್ಲೆಂಡ್ ಬೃಹತ್ ಸೋಲಿಗೆ ಶರಣಾಯಿತು.
ಈ ವಿಶ್ವಕಪ್ ಪಂದ್ಯಾವಳಿಗೂ ಮುನ್ನ ಬೆನ್ ಸ್ಟೋಕ್ಸ್ ತಮ್ಮ ನಿವೃತ್ತಿ ನಿರ್ಧಾರ ವಾಪಸ್ ಪಡೆದು ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಏಕದಿನ ಪಂದ್ಯಗಳಲ್ಲಿ ಆಡಿದ್ದರು. ಸ್ಟೋಕ್ಸ್ ಅರ್ಧಶತಕವನ್ನು ಗಳಿಸುವ ಮೂಲಕ ಸರಣಿಯನ್ನು ಪ್ರಾರಂಭಿಸಿದರು. ನಂತರ ಅದೇ ಸರಣಿ ಏಕದಿನ ಪಂದ್ಯಗಳಲ್ಲಿ ಇಂಗ್ಲೆಂಡ್ ಬ್ಯಾಟರ್‌ನಿಂದ ಗರಿಷ್ಠ ವೈಯಕ್ತಿಕ ಸ್ಕೋರ್ ಗಳಿಸಿದರು ಮತ್ತು ಜೇಸನ್ ರಾಯ್ ಅವರ ದಾಖಲೆಯನ್ನು ಮುರಿದರು.
ಬೆನ್ ಸ್ಟೋಕ್ಸ್ ಅವರು ಆಸ್ಟ್ರೇಲಿಯಾ ನೆಲದಲ್ಲಿ 2019ರ ಏಕದಿನ ವಿಶ್ವಕಪ್ ಮತ್ತು 2022ರ ಟಿ20 ವಿಶ್ವಕಪ್ ಗೆದ್ದ ಇಂಗ್ಲೆಂಡ್ ತಂಡದ ಪ್ರಮುಖ ಆಟಗಾರನಾಗಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications