For Quick Alerts
ALLOW NOTIFICATIONS  
For Daily Alerts
 

ತನ್ನ 'ಕುಟುಂಬದ ರಹಸ್ಯ ದುರಂತ' ವರದಿಗೆ ಕಿಡಿ ಕಾರಿದ ಬೆನ್ ಸ್ಟೋಕ್ಸ್!

ಇದು ಕೀಳು ಮಟ್ಟದ ಪತ್ರಿಕೋದ್ಯಮ ಎಂದ ಸ್ಟೋಕ್ಸ್. | Ben Stokes | Oneindia Kannada
Ben Stokes blasts English daily over his ‘secret family tragedy’ report

ಲಂಡನ್, ಸೆಪ್ಟೆಂಬರ್ 18: ತನ್ನ ಕುಟುಂಬದ 'ರಹಸ್ಯ ದುರಂತ'ವೊಂದರ ವರದಿ ಪ್ರಕಟಿಸಿದ ಇಂಗ್ಲೆಂಡ್ ಪತ್ರಿಕೆಯ ಮೇಲೆ ಇಂಗ್ಲೆಂಡ್ ಆಲ್ ರೌಂಡರ್ ಬೆನ್ ಸ್ಟೋಕ್ಸ್ ಕಿಡಿ ಕಾರಿದ್ದಾರೆ. ಇದು ಕೀಳು ಮಟ್ಟದ ಪತ್ರಿಕೋದ್ಯಮ ಎಂದು ಸ್ಟೋಕ್ಸ್ ತನ್ನ ಅಸಮಾಧಾನ ಹೊರ ಹಾಕಿದ್ದಾರೆ.

ಸುಮಾರು 31 ವರ್ಷಗಳ ಹಿಂದಕ್ಕೆ ಹೋಗಿ ನನ್ನ ಕುಟುಂಬದ, ವೈಯಕ್ತಿಕ ವ್ಯಕ್ತಿಗಳ ಸೂಕ್ಷ್ಮ, ಅತ್ಯಂತ ನೋವಿನ ಸಂಗತಿಯೊಂದನ್ನು 'ದ ಸನ್' ಪತ್ರಿಗೆ ವರದಿ ಮಾಡಿದ್ದು ಈ ದಿನ ನನಗೆ ಕಾಣಿಸಿದೆ,' ಎಂದು ಬೆನ್ ಸ್ಟೋಕ್ಸ್ ಹೇಳಿಕೆಯೊಂದರಲ್ಲಿ ಬರೆದಿದ್ದಾರೆ. ಟ್ಯಾಬ್ಲಾಯ್ಡ್ ಮಾದರಿಯ ಪತ್ರಿಕೆ 'ದ ಸನ್' ಸ್ಥಾಪಿಸಲ್ಪಟ್ಟಿದ್ದು 1964ರಲ್ಲಿ ಇಂಗ್ಲೆಂಡ್‌ನಲ್ಲಿ.

ಪತ್ರಿಕೆ ಪ್ರಕಟಿಸಿರುವ ವರದಿಯಲ್ಲಿ ಬೆನ್ ಸ್ಟೋಕ್ಸ್‌ ಕುಟುಂಬದಲ್ಲಾದ ರಹಸ್ಯಮಯ ದುರಂತವೊಂದರ ಬಗ್ಗೆ ಹೇಳಲಾಗಿತ್ತು. ಸ್ಟೋಕ್ಸ್ ಹುಟ್ಟುವುದಕ್ಕೂ ಕೆಲ ವರ್ಷಗಳಿಗೆ ಮೊದಲು ಸ್ಟೋಕ್ಸ್ ತಾಯಿಯ ಇಬ್ಬರು ಮಕ್ಕಳನ್ನು ಅವರ ಮಾಜಿ ಪ್ರೇಮಿ ಕೊಂದಿದ್ದಾರೆ. ಈ ಘಟನೆ 1988ರಲ್ಲಿ ನಡೆದಿದೆ ಎಂದು ಆ ವರದಿಯಲ್ಲಿ ಹೇಳಲಾಗಿತ್ತು.

ದ ಸನ್ ಪ್ರಕಟಿಸಿರುವ ವರದಿಯನ್ನು 'ಹೃದಯಹೀನ ಮತ್ತು ಅನೈತಿಕ' ಎಂದು ಜರೆದಿರುವ ಸ್ಟೋಕ್ಸ್, ಈ ವರದಿ ಪ್ರಕಟವಾದ ಬಳಿಕ 'ಈ ಸಹಿಸಲಾರದ ಬೇಸರದ ಸಂಗತಿ'ಯ ಬಗ್ಗೆ ತನ್ನ ಹೆತ್ತವರಲ್ಲಿ ವಿಚಾರಿಸುವುದಕ್ಕಾಗಿ ವರದಿಗಾರರು ನ್ಯೂಜಿಲೆಂಡ್‌ಗೆ ತೆರಳುತ್ತಿದ್ದಾರೆ ಎಂದು ನೋವು ತೋರಿಕೊಂಡಿದ್ದಾರೆ.

Ben Stokes blasts English daily over his ‘secret family tragedy’ report

'ಇಂಥಹ ಕೀಳು ಮಟ್ಟದ, ತುಚ್ಛ ಪತ್ರಿಕೋದ್ಯಮವನ್ನು ವಿವರಿಸಲು ನನಗೆ ಪದಗಳನ್ನು ಹುಡುಕಲು ಕಷ್ಟವಾಗುತ್ತಿದೆ. ಆಯಾ ಸಂದರ್ಭಕ್ಕೆ ನನ್ನ ಕುಟುಂಬಕ್ಕೆ ಸಂಬಂಧಿಸಿ ಘಟಿಸಿ ಹೋದ ಘಟನೆಗೆ ಇನ್ನೂ ಹೆಚ್ಚಿನ ಹೃದಯಹೀನ ಅಥವಾ ತಿರಸ್ಕಾರದ ಭಾವನೆ ತಾಳಲು ನನ್ನಿಂದ ಸಾಧ್ಯವಿಲ್ಲ,' ಎಂದು ಸ್ಟೋಕ್ಸ್ ಹೇಳಿದ್ದಾರೆ.

Story first published: Wednesday, September 18, 2019, 1:03 [IST]
Other articles published on Sep 18, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+