ಸಿಕ್ಸ್ ಚಚ್ಚಿದ ಶಾರ್ದೂಲ್ ಬ್ಯಾಟ್ ಚೆಕ್ ಮಾಡಿದ ಬೆನ್ ಸ್ಟೋಕ್ಸ್: ವಿಡಿಯೋ

ಪುಣೆ: ಇಂಗ್ಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ರೋಚಕ 7 ರನ್ ಗೆಲುವನ್ನಾಚರಿಸಿದೆ. ಈ ಗೆಲುವಿನೊಂದಿಗೆ ಭಾರತ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 2-1ರ ಜಯ ದಾಖಲಿಸಿದೆ. ಏಕದಿನ ಸರಣಿಯಷ್ಟೇ ಅಲ್ಲ, 4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 3-1ರ ಜಯ, 5 ಪಂದ್ಯಗಳ ಟಿ20ಐ ಸರಣಿಯಲ್ಲೂ ಭಾರತ 3-2ರ ವಿಜಯ ಸಂಭ್ರಮಾಚರಿಸಿ ಪಾರಮ್ಯ ಮೆರೆದಿತ್ತು.
ಪಂದ್ಯ ಆರಂಭದಲ್ಲಿ ಕೊಂಚ ಭಾರತದ ಕಡೆ ಇತ್ತಾದರೂ ಇಂಗ್ಲೆಂಡ್ ಆಲ್ ರೌಂಡರ್ ಸ್ಯಾಮ್ ಕರನ್ ಪಂದ್ಯದ ಫಲಿತಾಂಶವನ್ನು ತಮ್ಮತ್ತ ತಿರುಗಿಸಿಕೊಳ್ಳುವುದರಲ್ಲಿದ್ದರು. ಆದರೆ ಅಂತಿಮ ಓವರ್‌ನಲ್ಲಿ ಯಾರ್ಕರ್ ಸ್ಪೆಷಾಲಿಸ್ಟ್ ಟಿ ನಟರಾಜನ್ ಬೌಲಿಂಗ್ ಭಾರತಕ್ಕೆ ಗೆಲುವು ತಂದಿತ್ತು.

ಬ್ಯಾಟಿಂಗ್‌ನಲ್ಲಿ ಶಾರ್ದೂಲ್ ಮಿಂಚು
ಪುಣೆಯಲ್ಲಿ ನಡೆದಿದ್ದ ಭಾರತ-ಇಂಗ್ಲೆಂಡ್ ತೃತೀಯ ಏಕದಿನ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟಿದ್ದ ಭಾರತ ಪರ 8ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಂದಿದ್ದ ಬೌಲರ್ ಶಾರ್ದೂಲ್ ಠಾಕೂರ್ 21 ಎಸೆತಗಳಲ್ಲಿ 31 ರನ್ ಚಚ್ಚಿ ಗಮನ ಸೆಳೆದಿದ್ದರು. ಶಾರ್ದೂಲ್ ಬ್ಯಾಟಿಂದ 1 ಫೋರ್, 3 ಸಿಕ್ಸರ್ ಕೂಡ ಸಿಡಿದಿತ್ತು. ಇಂಗ್ಲೆಂಡ್ ಇನ್ನಿಂಗ್ಸ್‌ನಲ್ಲಿ ಶಾರ್ದೂಲ್ 67 ರನ್‌ಗೆ 4 ಪ್ರಮುಖ ವಿಕೆಟ್‌ಗಳನ್ನೂ ಕೆಡವಿ ತಂಡದ ಗೆಲುವಿಗೆ ನೆರವಾಗಿದ್ದರು.
ಬ್ಯಾಟ್ ಚೆಕ್ ಮಾಡಿದ ಬೆನ್ ಸ್ಟೋಕ್ಸ್
ಭಾರತದ ಪ್ರಮುಖ ಬ್ಯಾಟ್ಸ್‌ಮನ್‌ಗಳಾದ ರೋಹಿತ್ ಶರ್ಮಾ, ಕೆಎಲ್ ರಾಹುಲ್, ವಿರಾಟ್ ಕೊಹ್ಲಿ ಅವರಿಂದ ನಿರೀಕ್ಷಿತ ರನ್ ಬಾರದಿದ್ದಾಗ ಕೆಳ ಕ್ರಮಾಂಕದಲ್ಲಿ ಬಂದಿದ್ದ ಶಾರ್ದೂಲ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಅದರಲ್ಲೂ ಆಂಗ್ಲ ಆಲ್ ರೌಂಡರ್ ಬೆನ್ ಸ್ಟೋಕ್ಸ್ ಅವರ ಓವರ್‌ನಲ್ಲಿ ಠಾಕೂರ್ ಸಿಕ್ಸ್ ಚಚ್ಚಿದ್ದು ನೋಡಿ ಒಮ್ಮೆ ಬೆರಗಾದ ಸ್ಟೋಕ್ಸ್, ಠಾಕೂರ್ ಬಳಿ ಬಂದು ಅವರ ಬ್ಯಾಟೊಮ್ಮೆ ತಿರುಗಿಸಿ ನಕ್ಕರು. ತಮಾಷೆಯ ಸ್ವಭಾವದವರೂ ಆಗಿದ್ದರಿಂದ ಸ್ಟೋಕ್ಸ್ ನಗುತ್ತ ಶಾರ್ದೂಲ್ ಬ್ಯಾಟ್‌ನಲ್ಲಿ ಸ್ಪ್ರಿಂಗ್ ಏನಾದರೂ ಇದೆಯೇ ಎಂದು ಚೆಕ್ ಮಾಡಿ ನೋಡಿದ್ದು ವಿಡಿಯೋದಲ್ಲಿ ಸೆರೆಯಾಗಿತ್ತು. ಅಂದ್ಹಾಗೆ, ಸ್ಟೋಕ್ಸ್ ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡುತ್ತಾರೆ.

ರೋಚಕ ಪಂದ್ಯದ ಸಂಕ್ಷಿಪ್ತ ಸ್ಕೋರ್
* ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತ 329 (10 wkts, 48.2 Ov), ಶಿಖರ್ ಧವನ್ 67, ರಿಷಭ್ ಪಂತ್ 78, ಹಾರ್ದಿಕ್ ಪಾಂಡ್ಯ 64 ರನ್, ಶಾರ್ದೂಲ್ ಠಾಕೂರ್ 67ಕ್ಕೆ 4 ವಿಕೆಟ್.
* ಇಂಗ್ಲೆಂಡ್ 322 (9 wkts, 50 Ov), ಡಾವಿಡ್ ಮಲಾನ್ 50, ಬೆನ್ ಸ್ಟೋಕ್ಸ್ 35, ಸ್ಯಾಮ್ ಕರನ್ ಅಜೇಯ 95 ರನ್, ಮಾರ್ಕ್‌ವುಡ್ 34ಕ್ಕೆ 3, ಆದಿಲ್ ರಶೀದ್ 2 ವಿಕೆಟ್.
* ಇಂಗ್ಲೆಂಡ್ ಪರ ಏಕಾಂಗಿ ಹೋರಾಟ ನಡೆಸಿದ ಸ್ಯಾಮ್ ಕರನ್ ಪಂದ್ಯಶ್ರೇಷ್ಠ, ಜಾನಿ ಬೇರ್ಸ್ಟೋವ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications