ಹೊಡೆದಾಟ ಆರೋಪ: ಬೆನ್ ಸ್ಟೋಕ್ಸ್ ನಿರಪರಾಧಿಯೆಂದ ನ್ಯಾಯಾಲಯ

ಲಂಡನ್, ಆಗಸ್ಟ್ 14: ಇಂಗ್ಲೆಂಡ್ ನ ಬ್ರಿಸ್ಟಲ್ ನೈಟ್ ಕ್ಲಬ್ ನಲ್ಲಿನ ಹೊಡೆದಾಟ ಪ್ರಕರಣಕ್ಕೆ ಸಂಬಂಧಿಸಿ ಬ್ರಿಸ್ಟಲ್ ಕ್ರೌನ್ ಕೋರ್ಟ್, ಇಂಗ್ಲೆಂಡ್ ಸರ್ವಾಂಗಿಣ ಆಟಗಾರ ಬೆನ್ ಸ್ಟೋಕ್ಸ್ ನಿರಪರಾಧಿಯೆಂದು ತೀರ್ಪಿತ್ತಿದೆ. ಪ್ರಕರಣದ ವಿಚಾರಣೆಗೆ ಸಂಬಂಧಿಸಿ ಸ್ಟೋಕ್ಸ್ ಭಾರತ ಮತ್ತು ಇಂಗ್ಲೆಂಡ್ ನಡುವಣ 3ನೇ ಟೆಸ್ಟ್ ನಿಂದ ಹೊರಗುಳಿಯುವಂತಾಗಿತ್ತು.
ಸುಮಾರು ಎರಡೂವರೆ ಗಂಟೆಗಳ ಕಾಲ ನಡೆದ ವಿಚಾರಣೆ ಬಳಿಕ ನ್ಯಾಯಾಲಯ ಸ್ಟೋಕ್ಸ್ ತಪ್ಪಿಸ್ಥನಲ್ಲ ಎಂದು ತೀರ್ಪಿತ್ತಿತು. ತಾನು ಪ್ರಜ್ಞೆ ತಪ್ಪುವಂತೆ ಹೊಡೆದಿದ್ದ ಎಂದು ಆರೋಪಿಸಿದ್ದ ಇನ್ನೊಬ್ಬ ರಿಯಾನ್ ಆಲಿ ಕೂಡ ವಿಚಾರಣೆ ಸಂದರ್ಭ ಹಾಜರಿದ್ದರು. ಅವರನ್ನೂ ನ್ಯಾಯಾಲಯ ನಿರಪರಾಧಿ ಎಂದು ಪರಿಗಣಿಸಿ ತೀರ್ಪಿತ್ತಿದೆ.
ಆರು ಪುರುಷರು ಮತ್ತು ಆರು ಮಹಿಳಾ ನ್ಯಾಯಾಧೀಷರನ್ನೊಳಗೊಂಡಿದ್ದ ಪೀಠ ವಿಚಾರಣೆ ನಡೆಸಿ ತೀರ್ಪು ನೀಡಿದೆ. ವಿಚಾರಣೆ ವೇಳೆ ಬೆನ್ ಅವರು 'ತಾನು ಹೊಡೆದಾಟದಲ್ಲಿ ಪಾಲ್ಗೊಳ್ಳುವಂತಾಗಿದ್ದು ಹೌದು. ಆದರೆ ನನ್ನ ಉದ್ದೇಶ ಅದಾಗಿರಲಿಲ್ಲ. ಘಟನೆ ಸಂದರ್ಭ ಆತ್ಮ ರಕ್ಷಣೆಯ ಕಾರಣಕ್ಕಾಗಿಯಷ್ಟೇ ತಾನೂ ಪ್ರತಿರೋಧ ಒಡ್ಡಬೇಕಾಯ್ತು. ನಾನಾಗ ಭಯದಲ್ಲಿದ್ದೆ' ಎಂದು ಕಾರಣ ನೀಡಿದ್ದರು.
ಕಳೆದ ಸೆಪ್ಟೆಂಬರ್ ನಲ್ಲಿ ಬ್ರಿಸ್ಟಲ್ ನೈಟ್ ಕ್ಲಬ್ ಇತ್ತಂಡಗಳ ನಡುವೆ ಹೊಡೆದಾಟ ನಡೆದಿತ್ತು. ಪ್ರಕರಣದಲ್ಲಿ ಸ್ಟೋಕ್ಸ್ ಕೂಡ ಸಿಕ್ಕಿಹಾಕಿಕೊಂಡಿದ್ದರು. ತವರಿನಲ್ಲಿ ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆದಿದ್ದ ಏಕದಿನ ಅಂತಾರಾಷ್ಟ್ರೀಯ ಪಂದ್ಯದ ಕೆಲ ಗಂಟೆಗಳ ಬಳಿಕ ಈ ಘಟನೆ ನಡೆದಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications