ಐಪಿಎಲ್ ಆರಂಭಿಕ ಪಂದ್ಯಗಳಿಗೆ ಇಂಗ್ಲೆಂಡ್ ಸ್ಟಾರ್ ಬೆನ್ ಸ್ಟೋಕ್ಸ್ ಅಲಭ್ಯ

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ ಫ್ರಾಂಚೈಸಿ ರಾಜಸ್ಥಾನ್ ರಾಯಲ್ಸ್ ಆಲ್ ರೌಂಡರ್ ಬೆನ್ ಸ್ಟೋಕ್ಸ್ ಅವರನ್ನು ಐಪಿಎಲ್ ಆರಂಭಿಕ ಪಂದ್ಯಗಳಲ್ಲಿ ಮಿಸ್ ಮಾಡಿಕೊಳ್ಳಲಿದೆ. ವಿಶ್ವಕಪ್ ವಿಜೇತ ಇಂಗ್ಲೆಂಡ್ ಆಟಗಾರ ಸ್ಟೋಕ್ಸ್ ಸದ್ಯ ನ್ಯೂಜಿಲೆಂಡ್‌ನಲ್ಲಿದ್ದಾರೆ.
ವಿಶ್ವದ ಶ್ರೇಷ್ಠ ಆಲ್ ರೌಂಡರ್‌ಗಳಲ್ಲಿ ಗುರುತಿಸಿಕೊಂಡಿರುವ ಸ್ಟೋಕ್ಸ್ ಪಾಕಿಸ್ತಾನ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಷ್ಟೇ ಆಡಿದ್ದರು. ತನ್ನ ತಂದೆ ಜೆಡ್ ಸ್ಟೋಕ್ಸ್ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರಿಂದ ಅನಂತರದ ಪಂದ್ಯಗಳನ್ನು ಕೈಬಿಟ್ಟು ತಂದೆ ದಾಖಲಾಗಿದ್ದ ನ್ಯೂಜಿಲೆಂಡ್‌ನಲ್ಲಿರುವ ಆಸ್ಪತ್ರೆಗೆ ತೆರಳಿದ್ದರು. ಆಸ್ಟ್ರೇಲಿಯಾ ವಿರುದ್ಧದ ಟಿ20ಐ ಸರಣಿಯಲ್ಲೂ ಸ್ಟೋಕ್ಸ್ ಆಡಿಲ್ಲ.
'ನ್ಯೂಜಿಲೆಂಡ್ ಕ್ವಾರಂಟೈನ್ ನಿಯಮದ ಪ್ರಕಾರ ಬೆನ್ ಸ್ಟೊಕ್ಸ್ ನ್ಯೂಜಿಲೆಂಡ್ ತಲುಪಿದ ಬಳಿಕ 14 ದಿನಗಳ ಐಸೊಲೇಶನ್ ಮುಗಿಸಿದ್ದಾರಷ್ಟೇ. ಈಗ ಸ್ಟೋಕ್ಸ್ ತಂದೆಯನ್ನು ನೋಡಲು ಹೋಗಲಿದ್ದಾರೆ. ಹೀಗಾಗಿ ಸ್ಟೋಕ್ಸ್ ಸಹಜವಾಗೇ ಕೊಂಚ ಕಾಲ ತನ್ನ ಕುಟುಂಬದ ಜೊತೆಗೆ ಕಳೆಯಲಿದ್ದಾರೆ,' ಎಂದು ಮೂಲವೊಂದು ಮಾಹಿತಿ ಪಿಟಿಐಗೆ ನೀಡಿದೆ.
ಮೂಲಗಳಿಂದ ದೊರೆಯ ಮಾಹಿತಿಯಂತೆ ಐಪಿಎಲ್‌ನ ಆರಂಭಿಕ ಪಂದ್ಯಗಳಲ್ಲಿ ಸ್ಟೋಕ್ಸ್ ಆಡುತ್ತಿಲ್ಲ. ಆ ಬಳಿಕ ಸ್ಟೋಕ್ಸ್ ಅವರು ರಾಜಸ್ಥಾನ್ ರಾಯಲ್ಸ್ ಸೇರಿಕೊಳ್ಳುವ ನಿರೀಕ್ಷೆಯಿದೆ. ರಾಜಸ್ಥಾನ್ ರಾಯಲ್ಸ್ ತಂಡ ಸ್ಟೋಕ್ಸ್ ಅವರನ್ನು 12.5 ಕೋ.ರೂ.ಗೆ ಖರೀದಿಸಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications