ಆತನಂತಾ ಆಟಗಾರ ಟೀಮ್ ಇಂಡಿಯಾದಲ್ಲಿದ್ದರೆ ಸೋಲೇ ಇಲ್ಲ: ಇರ್ಫಾನ್ ಪಠಾಣ್

ಟೀಂ ಇಂಡಿಯಾ ವಿಶ್ವ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಪ್ರದರ್ಶನವನ್ನು ನೀಡುತ್ತಿದೆ. ಆದರೆ ಸೋಲಿಲ್ಲದ ಸರದಾರನಂತೆ ಮುನ್ನುಗ್ಗಬೇಕಾದರೆ ತಂಡಕ್ಕೆ ಓರ್ವ ವಿಶೇಷ ಆಟಗಾರನ ಅನಿವಾರ್ಯತೆ ತಂಡಕ್ಕಿದೆ ಎಂದು ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಟೀಮ್ ಇಂಡಿಯಾ ವಿಶ್ವ ಕ್ರಿಕೆಟ್‌ನಲ್ಲಿ ಸೋಲಿಲ್ಲದೆ ಮೆರೆಯಬೇಕಾದರೆ ತಂಡದಲ್ಲಿ ಅದ್ಭುತ ಆಲ್‌ರೌಂಡರ್ ಓರ್ವನ ಅವಶ್ಯಕತೆಯಿದೆ ಎಂದು ಇರ್ಫಾನ್ ಅಭಿಪ್ರಾಯವ್ಯಕ್ತಪಡಿಸಿದ್ದಾರೆ. ಇದೇ ಸಂದರ್ಭದಲ್ಲಿ ಟೀಮ್ ಇಂಡಿಯಾ ಮಾಜಿ ಆಟಗಾರ ಯುವರಾಜ್ ಸಿಂಗ್ ಅವರನ್ನು ನೆನಪಿಸಿಕೊಂಡಿರುವ ಪಠಾಣ್ ಯುವರಾಜ್ ಸಿಂಗ್ ಅಧಿಕೃತವಾಗಿ ನಿವೃತ್ತಿಯನ್ನು ಪಡೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಇರ್ಫಾನ್ ಪಠಾಣ್ ಉಲ್ಲೇಖಿಸಿದ ಆ ಕ್ರಿಕೆಟಿಗ ಯಾರು? ಯಾವ ಕಾರಣಕ್ಕೆ ಪಠಾಣ್ ಈ ಮಾತನ್ನು ಹೇಳಿದ್ದಾರೆ ಅನ್ನೊದಕ್ಕೆ ಮುಂದೆ ಓದಿ

ಅದ್ಭುತ ಆಲ್‌ರೌಂಡರ್ ಬೇಕು
ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಟೀಮ್ ಇಂಡಿಯಾಗೆ ಅದ್ಭುತ ಆಲ್‌ರೌಂಡರ್ ಅವಶ್ಯಕತೆಯಿದೆ ಎಂದಿದ್ದಾರೆ. ಅದರಲ್ಲೂ ಇಂಗ್ಲೆಂಡ್‌ನ ಆಟಗಾರ ಬೆನ್ ಸ್ಟೋಕ್ಸ್ ಅವರಂತಹ ಅಪ್ರತಿಮ ಆಲ್‌ರೌಂಡರ್ ಭಾರತ ತಂಡದಲ್ಲಿದ್ದರೆ ಟೀಮ್ ಇಂಡಿಯಾವನ್ನು ಕಟ್ಟಿಹಾಕುವುದು ಅಸಾಧ್ಯ ಎಂದು ಪಠಾಣ್ ಎಂದಿದ್ದಾರೆ.

ವಿಂಡೀಸ್ ವಿರುದ್ಧ ಅದ್ಭುತ ಪ್ರದರ್ಶನ
ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಬೆನ್ ಸ್ಟೋಕ್ಸ್ ಅದ್ಭುತ ಪ್ರದರ್ಶನವನ್ನು ನೀಡುತ್ತಿದ್ದಾರೆ. ಗೆಲುವಿನ ಅನಿವಾರ್ಯತೆಯಲ್ಲಿದ್ದ ಇಂಗ್ಲೆಂಡ್‌ಗೆ ಸ್ಟೋಕ್ಸ್ ಮೊದಲ ಇನ್ನಿಂಗ್ಸ್‌ನಲ್ಲಿ ಅದ್ಭುತ ಶತಕ ಹಾಗೂ ಎರಡನೇ ಇನ್ನಿಂಗ್ಸ್‌ನಲ್ಲಿ ವೇಗದ ಅರ್ಧ ಶತಕದ ಮೂಲಕ ಗೆಲುವನ್ನು ತಂದುಕೊಟ್ಟಿದ್ದಾರೆ.

ಬೌಲಿಂಗ್‌ನಲ್ಲೂ ಸ್ಟೋಕ್ಸ್ ಮಿಂಚು
ಇನ್ನು ಸರಣಿಯಲ್ಲಿ ಸ್ಟೋಕ್ಸ್ ಬೌಲಿಂಗ್ ವಿಭಾಗದಲ್ಲೂ ಅದ್ಭುತವಾಗಿ ಮಿಂಚಿದ್ದಾರೆ. ಎರಡು ಪಂದ್ಯಗಳಿಂದ ಒಟ್ಟು 9 ವಿಕೆಟ್ ಪಡೆದಿರುವ ಬೆನ್ ಸ್ಟೋಕ್ಸ್ ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್ ಹಾಗೂ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿದ್ದಾರೆ. ಈ ಮೂಲಕ ಸರ್ವಾಂಗೀಣ ಆಟದಿಂದ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ.

ಟ್ವೀಟ್ ಮೂಲಕ ಇರ್ಫಾನ್ ಪ್ರಶಂಸೆ
ಸ್ಟೋಕ್ಸ್ ಅವರ ಈ ಮ್ಯಾಚ್ ವಿನ್ನಿಂಗ್ ಪ್ರದರ್ಶನ ಕಂಡು ಇರ್ಫಾನ್ ಪಠಾಣ್ ಬೆರಗಾಗಿ ಟ್ವೀಟ್ ಮಾಡಿದ್ದಾರೆ. "ಬೆನ್ ಸ್ಟೋಕ್ಸ್ ಅವರಂತಹ ಮ್ಯಾಚ್ ವಿನ್ನಿಂಗ್ ಆಲ್‌ರೌಂಡರ್ ಭಾರತ ತಂಡದಲ್ಲಿ ಇದ್ದರೆ ಟೀಮ್ ಇಂಡಿಯಾ ತಂಡವನ್ನು ಸೋಲಿಸುವುದು ಅಸಾಧ್ಯ ಎಂದು ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications