ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ಇಂಗ್ಲೆಂಡ್ ತಂಡಕ್ಕೆ ಶಾಕ್!
ಆಗಸ್ಟ್ 12 ಸೋಮವಾರ, ಶ್ರೀಲಂಕಾ ವಿರುದ್ಧದ ಸರಣಿಗೂ ಮುನ್ನ ಇಂಗ್ಲೆಂಡ್ ತಂಡಕ್ಕೆ ದೊಡ್ಡ ಶಾಕ್ ಎದುರಾಗಿದೆ. ಆಗಸ್ಟ್ 21 ರಿಂದ ಪ್ರಾರಂಭವಾಗುವ 3 ಪಂದ್ಯಗಳ ಟೆಸ್ಟ್ ಸರಣಿಯನ್ನು ಶ್ರೀಲಂಕಾ ವಿರುದ್ಧ ಇಂಗ್ಲೆಂಡ್ ಆಡಲಿದೆ.
ಭಾನುವಾರ ನಡೆದ 'ದಿ ಹಂಡ್ರೆಡ್' ಟೂರ್ನಿಯಲ್ಲಿ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಮಂಡಿಗೆ ಗಾಯ ಮಾಡಿಕೊಂಡಿದ್ದಾರೆ. ಇದಾದ ಬಳಿಕ ಮೈದಾನ ಬಿಟ್ಟು ಪೆವಿಲಿಯನ್‌ಗೆ ಮರಳಿದ್ದಾರೆ. ಈಗ ಅವರು ಆಗಸ್ಟ್ 21 ರಿಂದ ಮ್ಯಾಂಚೆಸ್ಟರ್‌ನಲ್ಲಿ ಶ್ರೀಲಂಕಾ ವಿರುದ್ಧ ಪ್ರಾರಂಭವಾಗುವ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆಡುವುದು ಬಹುತೇಕ ಅನುಮಾನವಾಗಿದೆ.

ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆದ ಇಂಗ್ಲೆಂಡ್‌ನ ದಿ ಹಂಡ್ರೆಡ್ ಟೂರ್ನಿಯಲ್ಲಿ ಮ್ಯಾಂಚೆಸ್ಟರ್ ಒರಿಜಿನಲ್ಸ್ ವಿರುದ್ಧ ನಾರ್ದರ್ನ್ ಸೂಪರ್‌ಚಾರ್ಜರ್ಸ್ ಪರ ಆಡುವಾಗ ಬೆನ್ ಸ್ಟೋಕ್ಸ್ ಗಾಯಗೊಂಡಿದ್ದಾರೆ. ಸಿಂಗಲ್ ತೆಗೆದುಕೊಳ್ಳಲು ಮುಂದಾದಾಗ ಬೆನ್ ಸ್ಟೋಕ್ಸ್ ಗಾಯಗೊಂಡು ಮೈದಾನದಿಂದ ಹೊರಗುಳಿದ್ದಾರೆ. ನಂತರ ಅವರು ಊರುಗೋಲು ಸಹಾಯದಿಂದ ನಡೆದಾಡುವ ಫೋಟೋ ವೈರಲ್ ಆಗಿವೆ.
ಪಂದ್ಯದ ನಂತರ, ಘಟನೆ ಬಗ್ಗೆ ಮಾತನಾಡಿರುವ ಬ್ರೂಕ್, ಸ್ಟೋಕ್ಸ್ ಅವರ ಗಾಯದ ಗಂಭೀರತೆಯನ್ನು ತಿಳಿಯಲು ಸೋಮವಾರ ಸ್ಕ್ಯಾನ್ ಮಾಡಲಾಗುವುದು. ದುರದೃಷ್ಟವಶಾತ್ ಇದು ತುಂಬಾ ಚೆನ್ನಾಗಿ ಕಾಣುತ್ತಿಲ್ಲ ಎಂದು ಹೇಳಿದ್ದಾರೆ.
ಕಳೆದ ತಿಂಗಳು ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಸ್ಟೋಕ್ಸ್ ಬೌಲಿಂಗ್‌ನಲ್ಲಿ ಮಿಂಚಿದರು. ಈ ಮೂಲಕ ತಮ್ಮ ಬೌಲಿಂಗ್ ಫಾರ್ಮಾಗೆ ಮರಳಿದರು. ಇದಕ್ಕೂ ಮೊದಲು ಕಳೆದ ವರ್ಷ ಆಸ್ಟ್ರೇಲಿಯಾ ವಿರುದ್ಧದ ಆಶಸ್‌ನಲ್ಲಿ ಸ್ಟೋಕ್ಸ್ ಗಾಯಗೊಂಡಿದರು. ಹೀಗಾಗಿ ಭಾರತದಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಅವರು ಬೌಲಿಂಗ್ ಮಾಡಲು ಸಾಧ್ಯವಾಗಿರಲಿಲ್ಲ.
ಶ್ರೀಲಂಕಾ ವಿರುದ್ಧದ 3 ಟೆಸ್ಟ್ ಪಂದ್ಯಗಳ ನಂತರ, ಇಂಗ್ಲೆಂಡ್ ಅಕ್ಟೋಬರ್‌ನಲ್ಲಿ ಅಷ್ಟೇ ಸಂಖ್ಯೆ ಸರಣಿಗಾಗಿ ಪಾಕಿಸ್ತಾನಕ್ಕೆ ಪ್ರವಾಸ ಕೈಗೊಳ್ಳಲಿದೆ.
ಸ್ಟೋಕ್ಸ್ ಟೆಸ್ಟ್ ವೃತ್ತಿಜೀವನ
ಇಂಗ್ಲೆಂಡ್‌ನ ಸ್ಟಾರ್ ಆಲ್‌ರೌಂಡರ್ ಬೆನ್ ಸ್ಟೋಕ್ಸ್ 2013ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಪಾದಾರ್ಪಣೆ ಮಾಡಿದರು. ಅಂದಿನಿಂದ, ಈ 33 ವರ್ಷದ ಆಟಗಾರ 105 ಟೆಸ್ಟ್ ಪಂದ್ಯಗಳಲ್ಲಿ ಇಂಗ್ಲೆಂಡ್ ಅನ್ನು ಪ್ರತಿನಿಧಿಸಿದ್ದಾರೆ.
ಈ ಅವಧಿಯಲ್ಲಿ, ಎಡಗೈ ಬ್ಯಾಟರ್ ಆಗಿರುವ ಬೆನ್ ಸ್ಟೋಕ್ಸ್ 190 ಇನ್ನಿಂಗ್ಸ್‌ಗಳಲ್ಲಿ 35.31 ಸರಾಸರಿಯಲ್ಲಿ ಒಟ್ಟು 6508 ರನ್ ಗಳಿಸಿದ್ದಾರೆ. ಇನ್ನು ಬೌಲಿಂಗ್‌ನಲ್ಲಿ 203 ವಿಕೆಟ್‌ಗಳನ್ನು ಪಡೆದಿದ್ದಾರೆ. ಇನ್ನಿಂಗ್ಸ್‌ವೊಂದರಲ್ಲಿ 22 ರನ್‌ಗಳಿಗೆ 6 ವಿಕೆಟ್‌ಗಳು ಸ್ಟೋಕ್ಸ್ ಅತ್ಯುತ್ತಮ ಪ್ರದರ್ಶನವಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications