Ben Stokes: ಫಿಟ್ನೆಸ್ ಕಡೆ ಬೆನ್ ಸ್ಟೋಕ್ಸ್ ಗಮನ: ಕುಡಿತಕ್ಕೆ ಫುಲ್ ಸ್ಟಾಪ್
ಭಾರತದಲ್ಲಿ ಐಪಿಎಲ್ ಪಂದ್ಯಗಳು ನಡೆಯುತ್ತಿವೆ. ಈ ಲೀಗ್ ಮುಗಿದ ಬಳಿಕ ಟೀಮ್ ಇಂಡಿಯಾ ಇಂಗ್ಲೆಂಡ್ ಪ್ರವಾಸವನ್ನು ಬೆಳೆಸಲಿದೆ. ಈ ವೇಳೆ ಇಂಗ್ಲೆಂಡ್ ವಿರುದ್ಧದ ಟೀಮ್ ಇಂಡಿಯಾ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಈ ಸರಣಿಯ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಈ ವೇಳೆ ಟೀಮ್ ಇಂಡಿಯಾದ ನಾಯಕ ಯಾರು ಎಂಬ ಬಗ್ಗೆ ಇನ್ನು ಸ್ಪಷ್ಟತೆ ಸಿಕ್ಕಿಲ್ಲ. ಆದರೆ ಇಂಗ್ಲೇಂಡ್‌ನಿಂದ ಬರುತ್ತಿರುವ ಆ ಒಂದು ಸುದ್ದಿ ಟೀಮ್ ಇಂಡಿಯಾ ಆಟಗಾರರ ನಿದ್ದೆಯನ್ನು ಗೆಡಿಸಿದೆ.
ಕಳೆದ ಕೆಲವು ತಿಂಗಳುಗಳಿಂದ ಸ್ನಾಯು ಸೆಳೆತಕ್ಕೆ ಒಳಗಾಗಿದ್ದ ಬೆನ್ ಸ್ಟೋಕ್ಸ್ ಈಗ ಚೇತರಿಸಿಕೊಳ್ಳುತ್ತಿದ್ದಾರೆ. ಅಲ್ಲದೆ ಮುಂದಿನ ಸರಣಿಯ ಮಹತ್ವವನ್ನು ಅರಿತಿರುವ ಬೆನ್ ಸ್ಟೋಕ್ಸ್ ಅವರ ತಮ್ಮ ಹವ್ಯಾಸವನ್ನು ಬಿಟ್ಟಿದ್ದು, ಫಿಟ್ನೆಸ್‌ನತ್ತ ಹೆಚ್ಚಿನ ಗಮನ ಹರಿಸುವುದಾಗಿ ತಿಳಿಸಿದ್ದಾರೆ. ಹಾಗಿದ್ದರೆ ಬೆನ್ ಸ್ಟೋಕ್ಸ್ ಬಿಟ್ಟ ಆ ಹವ್ಯಾಸ ಯಾವುದು ಎಂಬ ಬಗ್ಗೆ ವರದಿ ಇಲ್ಲಿದೆ.

ಇಂಗ್ಲೆಂಡ್ ಕ್ರಿಕೆಟ್ ತಂಡದ ನಾಯಕ ಬೆನ್ ಸ್ಟೋಕ್ಸ್ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್‌ನ ಹೊಸ ಋತುವು ಆರಂಭವಾಗುವ ಮುನ್ನ ದೊಡ್ಡ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಬೆನ್ ಸ್ಟೋಕ್ಸ್ ಕುಡಿತಕ್ಕೆ ಫುಲ್ ಸ್ಟಾಪ್ ಹಾಕಿದ್ದಾಗಿ ಸ್ವತಃ ಹೇಳಿಕೊಂಡಿದ್ದಾರೆ. ಮುಂಬರುವ ಸಾಲು ಸಾಲು ಸರಣಿಗಳಲ್ಲಿ ತಮ್ಮನ್ನು ತಾವು ಫಿಟ್ ಆಗಿರಲು ಬೆನ್ ಸ್ಟೋಕ್ಸ್ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದಾಗಿ ತಿಳಿಸಿದ್ದಾರೆ.
ಕುಡಿತಕ್ಕೆ ಫುಲ್ ಸ್ಟಾಪ್
ಇಂಗ್ಲೆಂಡ್ ತಂಡದ ಅಲ್‌ರೌಂಡರ್ ಇತ್ತಿಚಿಗೆ ಹಂಡ್ರರೆಡ್ ಟೂರ್ನಿಗು ಮುನ್ನವೇ ಗಾಯಕ್ಕೆ ತುತ್ತಾಗಿದ್ದರು. ಇವರು ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಿಂದಲೂ ಹಿಂದಕ್ಕೆ ಸರಿದರು. ಇವರು ಕಳೆದ ಡಿಸೆಬಂರ್‌ನಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾದರು. ಇದರ ಪರಿಣಾಮ ಇವರು ಶ್ರೀಲಂಕಾ, ಪಾಕಿಸ್ತಾನ ವಿರುದ್ಧದ ಟೆಸ್ಟ್ ಸರಣಿಯಿಂದ ದೂರ ಸರೆದರು. ಇನ್ನು ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿ ಜೂನ್ 11 ರಂದು ಆರಂಭವಾಗಲಿದೆ. ಈ ಸರಣಿಗೂ ಮೊದಲು ಸ್ಟೋಕ್ಸ್ ತನ್ನನ್ನು ತಾನು ಫಿಟ್ ಆಗಿರಲು ದೊಡ್ಡ ನಿರ್ಧಾರವನ್ನು ಕೈಗೊಂಡಿದ್ದಾರೆ.
ಈ ಬಗ್ಗೆ ಪ್ರೊಡಕಾಸ್ಟ್ ಒಂದರಲ್ಲಿ ಮಾತನಾಡಿರುವ ಬೆನ್ ಸ್ಟೋಕ್ಸ್, ನಾನು ಗಾಯಕ್ಕೆ ತುತ್ತಾದ ಬಳಿಕ, ಇದು ಆಗಿದ್ದು ಹೇಗೆ ಎಂಬ ಬಗ್ಗೆ ಪ್ರಶ್ನೆಗಳು ಮೂಡಿದವು. ಗಾಯಕ್ಕೆ ತುತ್ತಾಗಿದ್ದರ ಕೆಲ ದಿನಗಳ ಹಿಂದೆ ನಾನು ಮಧ್ಯಪಾನವನ್ನು ಮಾಡಿದ್ದೆ. ಇದರಿಂದ ಹೀಗೆ ಆಗಿದೆಯಾ ಎಂಬ ಸಂಶಯ ನನ್ನನ್ನು ಬಹುವಾಗಿ ಕಾಡಲು ಆರಂಭಿಸಿತು. ಹೀಗಾಗಿ ಮಧ್ಯೆಪಾನವನ್ನು ಬಿಟ್ಟಿರುವೆ ಎಂದು ಸ್ಟೋಕ್ಸ್ ತಿಳಿಸಿದ್ದಾರೆ.

ಬೆನ್ ಸ್ಟೋಕ್ಸ್ ಈ ನಿರ್ಧಾರದಿಂದ ತಮ್ಮ ಲೈಫ್ ಸ್ಟೈಲ್ ಬದಲಿಸಿಕೊಳ್ಳಲು ಬಯಸಿದ್ದಾರೆ. ಈ ಮೂಲಕ ತಮ್ಮನ್ನು ತಾವು ಫಿಟ್ ಆಗಿಟ್ಟುಕೊಳ್ಳಲು ಶ್ರಮಿಸುತ್ತಿರುವುದಾಗಿ ಸ್ಟೋಕ್ಸ್ ತಿಳಿಸಿದ್ದಾರೆ. ಜೂನ್‌ನಲ್ಲಿ ನಡೆಯಲಿರುವ ಭಾರತ ವಿರುದ್ಧದ ಟೆಸ್ಟ್ ಸರಣಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ದೃಷ್ಟಿಯಿಂದ ಉಭಯ ದೇಶಗಳಿಗೆ ಮಹತ್ವದಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications