ಮೃತ ತಂದೆಯಲ್ಲಿ 'ಸಾರಿ' ಕೇಳಿದ ಇಂಗ್ಲೆಂಡ್ ಆಲ್ ರೌಂಡರ್ ಬೆನ್ ಸ್ಟೋಕ್ಸ್

ಪೂಣೆ: ಭಾರತ vs ಇಂಗ್ಲೆಂಡ್ ಈಗ 1-1ರಿಂದ ಸಮಬಲಗೊಂಡಿದ್ದು, ರೋಚಕ ಹಂತಕ್ಕೆ ತಲುಪಿದೆ. ಆರಂಭಿಕ ಪಂದ್ಯದಲ್ಲಿ ಸೋತಿದ್ದ ಇಂಗ್ಲೆಂಡ್ ದ್ವಿತೀಯ ಪಂದ್ಯದಲ್ಲಿ 6 ವಿಕೆಟ್‌ಗಳ ಭರ್ಜರಿ ಗೆಲುವನ್ನಾಚರಿಸಿತ್ತು. ಅದೂ ಕೂಡ ಭಾರತ ನೀಡಿದ್ದ 337 ರನ್ ಗುರಿಯನ್ನು ಸುಲಭವಾಗೇ ಬೆನ್ನಟ್ಟಿದ ಇಂಗ್ಲೆಂಡ್, ಆತಿಥೇಯ ಭಾರತಕ್ಕೆ ತಕ್ಕ ತಿರುಗೇಟು ನೀಡಿದೆ.
ಇಂಗ್ಲೆಂಡ್ ತಂಡದ ಈ ಗಮನಾರ್ಹ ಗೆಲುವಿಗೆ ಕಾರಣ ಜೇಸನ್ ರಾಯ್ (55), ಬೆನ್ ಸ್ಟೋಕ್ಸ್ (99) ಅರ್ಧ ಶತಕ ಮತ್ತು ಜಾನಿ ಬೇರ್ಸ್ಟೋವ್ (124) ಅವರ ಶತಕದಾಟ. ಜೊತೆಗೆ ರೀಸ್ ಟಾಪ್ಲಿ ಮತ್ತು ಟಾಮ್ ಕರನ್ ಬೌಲಿಂಗ್ ಕೂಡ ಸರಣಿ ಸರಿದೂಗಿಸುವಲ್ಲಿ ಇಂಗ್ಲೆಂಡ್‌ಗೆ ನೆರವು ನೀಡಿತ್ತು.
ಪಂದ್ಯದಲ್ಲಿ 52 ಎಸೆತಗಳಿಗೆ 99 ರನ್ ಗಳಿಸಿದ್ದ ಬೆನ್ ಸ್ಟೋಕ್ಸ್ ಭುವನೇಶ್ವರ್ ಕುಮಾರ್ ಅವರ 35.2ನೇ ಓವರ್‌ನಲ್ಲಿ ರಿಷಭ್ ಪಂತ್‌ಗೆ ಕ್ಯಾಚಿತ್ತು ನಿರಾಸೆ ಅನುಭವಿಸಿದರು. ತನಗೆ ಶತಕ ಪೂರೈಸಲಾಗದ್ದಕ್ಕೆ ಸ್ಟೋಕ್ಸ್ ತನ್ನ ಮೃತ ತಂದೆ ಜೆರಾರ್ಡ್ ಸ್ಟೋಕ್ಸ್ ಅವರಲ್ಲಿ ಕ್ಷಮೆ ಯಾಚಿಸಿದ್ದಾರೆ. ಐಪಿಎಲ್‌ನಲ್ಲಿ ಸ್ಟೋಕ್ಸ್ ರಾಜಸ್ಥಾನ್ ರಾಯಲ್ಸ್ ಪರ ಆಡುತ್ತಾರೆ.
99 ರನ್ ಬಾರಿಸಿ ಔಟಾಗಿ ನಿರ್ಗಮಿಸುವಾಗ ಸ್ಟೋಕ್ಸ್ ಆಕಾಶಕ್ಕೆ ದಿಟ್ಟಿಸಿ ಸಾರಿ ಅಂದಿದ್ದು ಪಂದ್ಯದ ವೇಳೆ ವಿಡಿಯೋದಲ್ಲಿ ಸೆರೆಯಾಗಿತ್ತು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಭಾರತ-ಇಂಗ್ಲೆಂಡ್ ಅಂತಿಮ ಪಂದ್ಯ ಮಾರ್ಚ್ 28ರ ಭಾನುವಾರ ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications