ಐಪಿಎಲ್ 2020: ದುಬೈಗೆ ಬಂದಿಳಿಯಲಿದ್ದಾರೆ ಬೆನ್ ಸ್ಟೋಕ್ಸ್, ರಾಜಸ್ಥಾನ್ ರಾಯಲ್ಸ್‌ಗೆ ಆನೆ ಬಲ

ರಾಜಸ್ಥಾನ್ ರಾಯಲ್ಸ್ ತಂಡ ತನ್ನ ಪ್ರಮುಖ ಅಸ್ತ್ರ ಬೆನ್ ಸ್ಟೋಕ್ಸ್ ಅವರನ್ನು ಈವರೆಗಿನ ಪಂದ್ಯಗಳಲ್ಲಿ ಕಳೆದುಕೊಂಡಿತ್ತು. ಆದರೆ ಆರ್‌ಆರ್ ಪಾಳಯಕ್ಕೆ ಇಂದು ಸಂತಸದ ಸುದ್ದಿ ಬಂದಿದೆ. ಇಂಗ್ಲೆಂಡ್ ತಂಡದ ಆಲ್‌ರೌಡರ್ ಬೆನ್ ಸ್ಟೋಕ್ಸ್ ತವರಿನಿಂದ ಯುಎಇಗೆ ಹೊರಟಿದ್ದು ಶನಿವಾರ ರಾತ್ರಿಯೇ ಅವರು ದುಬೈನಲ್ಲಿ ಇಳಿಯಲಿದ್ದಾರೆ ಎಂದು ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಪಾಕಿಸ್ತಾನದ ವಿರುದ್ದದ ಸರಣಿಯಿಂದ ಬೆನ್ ಸ್ಟೋಕ್ಸ್ ತಮ್ಮ ತಂದೆಯ ಅನಾರೋಗ್ಯದ ಕಾರಣಕ್ಕೆ ತವರಿಗೆ ಮರಳಿದ್ದರು. ನ್ಯೂಜಲೆಂಡ್ ಮೂಲದವರಾದ ಬೆನ್ ಸ್ಟೋಕ್ಸ್ ತಮ್ಮ ಕುಟುಂಬದ ಜೊತೆಗೆ ಸುದೀರ್ಘ ಕಾಲ ಕಳೆದಿದ್ದಾರೆ. ಐಪಿಎಲ್‌ನಲ್ಲಿ ತಮ್ಮ ಲಭ್ಯತೆಯ ಬಗ್ಗೆ ಅಧಿಕೃತವಾಗಿ ಬೆನ್ ಸ್ಟೋಕ್ಸ್ ಯಾವುದೇ ಹೇಳಿಕೆಯನ್ನು ನೀಡಿರಲಿಲ್ಲ. ರಾಜಸ್ಥಾನ್ ರಾಯಲ್ಸ್ ಸ್ಟೋಕ್ಸ್ ಆಗಮನದ ಬಗ್ಗೆ ನಿರಿಕ್ಷೆಯನ್ನು ವ್ಯಕ್ತಪಡಿಸಿದ್ದರೂ ಅವರ ಲಭ್ಯತೆಯ ಬಗ್ಗೆ ಖಚಿತ ಮಾಹಿತಿಯನ್ನು ನೀಡಿರಲಿಲ್ಲ.

ಶನಿವಾರ ರಾತ್ರಿಯೇ ದುಬೈಗೆ
ಎಎನ್‌ಐ ವರದಿಯ ಪ್ರಕಾರ ಶನಿವಾರ ರಾತ್ರಿಯೇ ಬೆನ್‌ಸ್ಟೋಕ್ಸ್ ದುಬೈಗೆ ಬಂದಿಳಿಯಲಿದ್ದಾರೆ. ಬಳಿಕ ಅವರು ಐಪಿಎಲ್ ನಿಯಮದ ಪ್ರಕಾರ ಕೊರೊನಾ ವೈರಸ್‌ಗೆ ಸಂಬಂಧಿತ ವಿಧಾನಗಳಿಗೆ ಒಳಗಾಗಲಿದ್ದಾರೆ. ಕೋವಿಡ್ ಪರೀಕ್ಷೆ ಸಹಿತ ಕೆಲ ಕಠಿಣ ನಿಯಮಗಳಿಗೆ ಬೆನ್ ಸ್ಟೋಕ್ಸ್ ಒಳಗಾಗಿಲಿದ್ದಾರೆ. ಎಲ್ಲವೂ ಅಂತಿಮವಾದ ನಂತರ ಅವರು ತಂಡಕ್ಕೆ ಸೇರ್ಪಡೆಗೊಳ್ಳಲಿದ್ದಾರೆ.

ಆರು ದಿನಗಳ ಕ್ವಾರಂಟೈನ್
ಬೆನ್ ಸ್ಟೋಕ್ಸ್ ಇಂದು ದುಬೈಗೆ ಬಂದಿಳಿದರೂ ಕೊರೊನ ವೈರಸ್‌ನ ಕಾರಣದಿಂದಾಗಿ ಕಠಿಣ ನಿಯಮಗಳಿರುವ ಹಿನ್ನೆಲೆಯಲ್ಲಿ ಶೀಘ್ರದಲ್ಲಿ ತಂಡವನ್ನು ಸೇರಿಕೊಳ್ಳಲು ಸಾಧ್ಯವಾಗಲಾರದು. ಅವರು ಕಡ್ಡಾಯವಾಗಿ ಆರು ದಿನಗಳ ಕ್ವಾರಂಟೈನ್‌ಗೆ ಒಳಗಾಗಬೇಕಿದೆ. ಅದಾದ ಬಳಿಕ ಮತ್ತೆ ಕೋವಿಡ್ ಪರೀಕ್ಷೆಗೆ ಒಳಗಾಗಿ ನೆಗೆಟಿವ್ ವರದಿಯ ಬಳಿಕ ತಂಡದ ಬಯೋಬಬಲ್‌ಗೆ ಸೇರಿಕೊಳ್ಳಲಿದ್ದಾರೆ.

ಯಾವಾಗ ಕಣಕ್ಕಿಳಿಯಲಿದ್ದಾರೆ ಸ್ಟೋಕ್ಸ್
ಬೆನ್ ಸ್ಟೋಕ್ಸ್ ಈಗಾಗಲೇ ತಿಳಿಸಿದಂತೆ ಆರು ದಿನಗಳ ಕಡ್ಡಾಯ ಕ್ವಾರಂಟೈನ್ ಪೂರೈಸಬೇಕಿದೆ. ಈ ಅವಧಿಯಲ್ಲಿ ರಾಜಸ್ಥಾನ್ ರಾಯಲ್ಸ್ ಒಂದು ಪಂದ್ಯವನ್ನು ಮುಂಬೈ ಇಂಡಿಯನ್ಸ್ ವಿರುದ್ಧ ಆಡಲಿದೆ. ಶನಿವಾರ ನಡೆಯುವ ಆರ್‌ಸಿಬಿ ವಿರುದ್ಧದ ಪಂದ್ಯವನ್ನು ಹೊರತು ಪಡಿಸಿದರೆ ಒಂದು ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ. ಅಕ್ಟೋಬರ್ 9ರಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ಕಣಕ್ಕಿಳಿಯಲಿದ್ದು, ಅಂದುಕೊಂಡಂತೆ ನಡೆದರೆ ಈ ಪಂದ್ಯದಲ್ಲಿ ಬೆನ್ ಸ್ಟೋಕ್ಸ್ ಕಣಕ್ಕಿಳಿಯುವುದು ಪಕ್ಕಾ.

ರಾಜಸ್ಥಾನ್ ರಾಯಲ್ಸ್‌ಗೆ ಆನೆ ಬಲ
ಬೆನ್ ಸ್ಟೋಕ್ಸ್ ಅವರ ಆಗಮನ ರಾಜಸ್ಥಾನ್ ರಾಯಲ್ಸ್ ತಂಡವನ್ನು ಮತ್ತಷ್ಟು ಬಲಿಷ್ಠಗೊಳಿಸಲಿದೆ. ಸಂಜು ಸ್ಯಾಮ್ಸನ್, ಸ್ಟೀವ್ ಸ್ಮಿತ್ ಜೋಸ್ ಬಟ್ಲರ್ ಜೊತೆಗೆ ಸ್ಟೋಕ್ಸ್ ಬ್ಯಾಟಿಂಗ್ ಮಾತ್ರವಲ್ಲದೆ ಬೌಲಿಂಗ್ ಮೂಲಕವೂ ಎದುರಾಳಿ ತಂಡದ ಮೇಲೆರಗಲಿದ್ದಾರೆ. ಹೀಗಾಗಿ ತಂಡದ ಸಮತೊಲನ ಮತ್ತಷ್ಟು ಹೆಚ್ಚಾಗಲಿದೆ. ಟಾಮ್ ಕರ್ರನ್ ತಮ್ಮ ಸ್ಥಾನವನ್ನು ಸ್ಟೋಕ್ಸ್‌ಗೆ ಅನಿವಾರ್ಯವಾಗಿ ಬಿಟ್ಟುಕೊಡಬೇಕಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications