ನೈಟ್ ಕ್ಲಬ್ ವಿವಾದ: ನಾಯಕ ಬೆನ್ ಸ್ಟೋಕ್ಸ್ ನಿವೃತ್ತಿ?
ವಿಶ್ವ ಕ್ರಿಕೆಟ್‌ನಲ್ಲಿ ಮತ್ತೊಂದು ಭಾರಿ ವಿವಾದ ಸೃಷ್ಟಿಯಾಗಿದೆ. ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಇಂಗ್ಲೆಂಡ್ ತಂಡದಲ್ಲಿ ವಿವಾದದ ಸುಂಟರಗಾಳಿ ಬೀಸಿದೆ. ಇದರಿಂದ ಹಾಲಿ ಟೆಸ್ಟ್ ತಂಡದ ನಾಯಕ ಬೆನ್ ಸ್ಟೋಕ್ಸ್ ಅವರ ಕ್ರಿಕೆಟ್ ವೃತ್ತಿಜೀವನಕ್ಕೆ ಕುತ್ತು ಬರುವ ಸಾಧ್ಯತೆ ಇದೆ. ವಿವಾದ ಸೃಷ್ಟಿಯಾಗಲು ಕಾರಣ ಏನು? ಬೆನ್ ಸ್ಟೋಕ್ಸ್‌ಗೆ ಈ ವಿವಾದ ಉರುಳಾಗಿದ್ದು ಹೇಗೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.
ಸದ್ಯ ನ್ಯೂಜಿಲೆಂಡ್ ಪ್ರವಾಸ ಕೈಗೊಂಡಿದೆ. ಈ ವೇಳೆ ಉಭಯ ತಂಡಗಳ ನಡುವೆ ಟೆಸ್ಟ್ ಸರಣಿ ನಡೆಯುತ್ತಿದೆ. ಈ ಸರಣಿಯ ಮೊದಲ ಪಂದ್ಯ ಲಾರ್ಡ್ಸ್‌ನಲ್ಲಿ ನಡೆಯಿತು. ಈ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ 115 ರನ್‌ಗಳ ಭರ್ಜರಿ ಜಯ ದಾಖಲಿಸಿತು. ಈ ಜಯ ದಾಖಲಾದ ಕೆಲವೇ ಕೆಲವು ಗಂಟೆಗಳಲ್ಲಿ ಇಂಗ್ಲೆಂಡ್ ತಂಡದಲ್ಲಿ ಭಾರೀ ವಿವಾದ ಎದ್ದಿದೆ.

ನ್ಯೂಜಿಲೆಂಡ್ ವಿರುದ್ಧದ ಭರ್ಜರಿ ಗೆಲುವಿನ ಸಂಭ್ರಮದಲ್ಲಿದ್ದ ಇಂಗ್ಲೆಂಡ್ ತಂಡಕ್ಕೆ ಭಾನುವಾರ ತಡರಾತ್ರಿ ನಡೆದ ನೈಟ್ ಕ್ಲಬ್ ಘಟನೆ ಆಘಾತ ನೀಡಿದೆ. ಈ ಘಟನೆಯಲ್ಲಿ ಇಂಗ್ಲೆಂಡ್ ಟೆಸ್ಟ್ ನಾಯಕ ಬೆನ್ ಸ್ಟೋಕ್ಸ್ ಭಾಗಿಯಾಗಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಅವರು ತಮ್ಮ ನಾಯಕತ್ವಕ್ಕೆ ರಾಜೀನಾಮೆ ನೀಡಿ, ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಟಾಕ್ ಸ್ಪೋರ್ಟ್ಸ್‌ನಲ್ಲಿನ ವರದಿಯ ಪ್ರಕಾರ, ಬೆನ್ ಸ್ಟೋಕ್ಸ್ ನಾಯಕತ್ವಕ್ಕೆ ರಾಜೀನಾಮೆ ನೀಡಿ ಕ್ರಿಕೆಟ್ ನಿಂದ ನಿವೃತ್ತಿ ಹೊಂದಬಹುದು ಎಂದು ಉಲ್ಲೇಖಿಸಿದೆ.
ನೈಟ್ ಕ್ಲಬ್‌ನಲ್ಲಿ ಆದ ಘಟನೆಯ ಬಗ್ಗೆ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯು ತನಿಖೆ ಆರಂಭಿಸಿದೆ. ಇದರಲ್ಲಿ ಸ್ಟೋಕ್ಸ್ ಮತ್ತು ಗಸ್ ಅಟ್ಕಿನ್ಸನ್,ರಗ್ಬಿ ಆಟಗಾರನೊಂದಿಗೆ ಜಗಳ ಆಡಿದ್ದಾರೆ ಎಂದು ವರದಿಯಾಗಿದೆ. ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ಮುಗಿದ ನಂತರ ತಂಡದ ಶಿಷ್ಟಾಚಾರ ಉಲ್ಲಂಘನೆಯ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಇಸಿಬಿ ತಿಳಿಸಿದೆ. ಈ ಘಟನೆಗೆ ಸಂಬಂಧಿಸಿದಂತೆ ತನಿಖೆ ಆರಂಭವಾಗಿದ್ದು, ಹೆಚ್ಚುವರಿ ಮಾಹಿತಿ ಪಡೆಯುತ್ತಿದ್ದೇವೆ. ಸೂಕ್ತ ಸಮಯವನ್ನು ನೋಡಿಕೊಂಡು ಎರಡನೇ ಟೆಸ್ಟ್‌ಗೆ ತಂಡವನ್ನು ಘೋಷಿಸಲಾಗುವುದು ಎಂದು ಇಸಿಬಿ ಹೇಳಿದೆ.
ಸ್ಟೋಕ್ಸ್‌ಗೆ ಇಸಿಬಿ ನೀಡಿದ ಆಯ್ಕೆ ಏನು?
ಇಎಸ್‌ಪಿಎನ್ ಕ್ರಿಕ್‌ಇನ್ಫೋ ವರದಿಯ ಪ್ರಕಾರ, ಬೆನ್ ಸ್ಟೋಕ್ಸ್‌ಗೆ ಇಸಿಬಿ ಹಲವಾರು ಆಯ್ಕೆಗಳನ್ನು ನೀಡಿದೆ. ಅವುಗಳಲ್ಲಿ ಒಂದು ಸ್ವಯಂಪ್ರೇರಣೆಯಿಂದ ನಾಯಕತ್ವ ತ್ಯಜಿಸುವುದು. ಅವರು ನಾಯಕತ್ವ ತ್ಯಜಿಸದಿದ್ದರೆ, ಮಂಡಳಿಯು ಅವರ ವಿರುದ್ಧ ಕ್ರಮ ಕೈಗೊಂಡು ಅವರನ್ನು ನಾಯಕತ್ವದಿಂದ ತೆಗೆದುಹಾಕಬಹುದು.
ಬೆನ್ ಸ್ಟೋಕ್ಸ್ ಸಾಧನೆ
ಬೆನ್ ಸ್ಟೋಕ್ಸ್ ಇಂಗ್ಲೆಂಡ್ ಪರ 121 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ, 34.58 ಸರಾಸರಿಯಲ್ಲಿ 7228 ರನ್ ಗಳಿಸಿದ್ದಾರೆ. ಅವರು 114 ಏಕದಿನ ಪಂದ್ಯಗಳನ್ನು ಸಹ ಆಡಿದ್ದು, 41.22 ಸರಾಸರಿಯಲ್ಲಿ 3,463 ರನ್ ಗಳಿಸಿದ್ದಾರೆ. ಅವರು 43 ಟಿ20 ಪಂದ್ಯಗಳನ್ನು ಸಹ ಆಡಿದ್ದು, 21.66 ಸರಾಸರಿಯಲ್ಲಿ 585 ರನ್ ಗಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications