Ben Stokes retirement: ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ
ಇಂಗ್ಲೆಂಡ್ ತಂಡದ ಸ್ಟಾರ್ ಆಟಗಾರ ಹಾಗೂ ನಾಯಕ ಬೆನ್ ಸ್ಟೋಕ್ಸ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಟ್ರೆಂಟ್ ಬ್ರಿಡ್ಜ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಮೂರನೇ ಟೆಸ್ಟ್ ನಂತರ ಇಂಗ್ಲೆಂಡ್ ನಾಯಕ ತಮ್ಮ ವೃತ್ತಿಜೀವನಕ್ಕೆ ನಿವೃತ್ತಿ ಹೇಳಲಿದ್ದಾರೆ. ಸ್ಟೋಕ್ಸ್ 2011 ರಲ್ಲಿ ಏಕದಿನ ಕ್ರಿಕೆಟ್‌ಗೆ ಪಂದ್ಯಕ್ಕೆ ಪದಾರ್ಪಣೆ ಮಾಡಿದ್ದರು.
ಟ್ರೆಂಟ್ ಬ್ರಿಡ್ಜ್ ಟೆಸ್ಟ್‌ನ ನಾಲ್ಕನೇ ದಿನದ ಆಟ ಆರಂಭಕ್ಕೂ ಮೊದಲು ಸ್ಟೋಕ್ಸ್ ತಮ್ಮ ತಂಡದ ಆಟಗಾರರಿಗೆ ತಮ್ಮ ನಿರ್ಧಾರವನ್ನು ತಿಳಿಸಿದ್ದಾರೆ. ನಂತರ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯು ಈ ಸುದ್ದಿಯನ್ನು ದೃಢಪಡಿಸಿದೆ.

ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಇವರು ನ್ಯೂಜಿಲೆಂಡ್ ವಿರುದ್ಧ ಮೂರನೇ ಟೆಸ್ಟ್ ಪಂದ್ಯದ ಬಳಿಕ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ ಎಂದು ಇಸಿಬಿ ಹೇಳಿಕೆಯಲ್ಲಿ ತಿಳಿಸಿದೆ. 2011 ರಲ್ಲಿ ವೈಟ್ ಬಾಲ್ ಕ್ರಿಕೆಟ್‌ನೊಂದಿಗೆ ಪ್ರಾರಂಭವಾದ ಅಂತಾರಾಷ್ಟ್ರೀಯ ವೃತ್ತಿಜೀವನವನ್ನು ಮುಕ್ತಾಯಗೊಳ್ಳುತ್ತಿದೆ. ಇವರು ಡಿಸೆಂಬರ್ 2013 ರಲ್ಲಿ ಆಶಸ್ ಸಮಯದಲ್ಲಿ ಅಡಿಲೇಡ್‌ನಲ್ಲಿ ಟೆಸ್ಟ್‌ಗೆ ಪದಾರ್ಪಣೆ ಮಾಡಿದ್ದರು. ಅವರು ಏಪ್ರಿಲ್ 2022 ರಿಂದ ಟೆಸ್ಟ್ ತಂಡದ ನಾಯಕತ್ವ ವಹಿಸಿಕೊಂಡಿದ್ದರು.
ಬೆನ್ ಸ್ಟೋಕ್ಸ್ ಸಾಧನೆ
35 ವರ್ಷದ ಬೆನ್ ಸ್ಟೋಕ್ಸ್ ಇಂಗ್ಲೆಂಡ್ ಪರ ಮೂರೂ ಫಾರ್ಮೆಟ್‌ಗಳಲ್ಲಿ ತಂಡದ ಪರ ಭರ್ಜರಿ ಆಲ್‌ರೌಂಡರ್ ಪ್ರದರ್ಶನ ನೀಡಿದ ಆಟಗಾರ. ಇವರು ಆಡಿದ 121 ಟೆಸ್ಟ್ ಪಂದ್ಯಗಳಲ್ಲಿ 7228 ರನ್ ಹಾಗೂ 250ಕ್ಕೂ ಹೆಚ್ಚು ವಿಕೆಟ್ ಪಡೆದಿದ್ದಾರೆ. ಬೆನ್ ಸ್ಟೋಕ್ಸ್ ಅವರು ಆಡಿದ 114 ಏಕದಿನ ಪಂದ್ಯಗಳಲ್ಲಿ 3463 ರನ್ ಸಿಡಿಸಿದ್ದಾರೆ. ಅಲ್ಲದೆ 74 ವಿಕೆಟ್ ಪಡೆದು ಬೀಗಿದ್ದಾರೆ. ಬೆನ್ ಇಂಗ್ಲೆಂಡ್ ಪರ 43 ಟಿ20 ಪಂದ್ಯಗಳಲ್ಲಿ ಕಣಕ್ಕೆ ಇಳಿದಿದ್ದು 585 ರನ್ ಹಾಗೂ 26 ವಿಕೆಟ್ ಉರುಳಿಸಿದ್ದಾರೆ.
2019 ರ ವಿಶ್ವಕಪ್ ಫೈನಲ್‌ನಲ್ಲಿ ಬೆನ್ ಸ್ಟೋಕ್ಸ್ ಅದ್ಭುತ ಬ್ಯಾಟಿಂಗ್ ನಡೆಸಿ ತಂಡಕ್ಕೆ ಏಕದಿನ ವಿಶ್ವಕಪ್ ಕಿರೀಟ ತೊಡಿಸಿದ್ದರು. ಇವರ ಕೆಚ್ಚೆದೆಯ ಆಟದ ಪರಿಣಾಮವಾಗಿ ಪಂದ್ಯ ಸೂಪರ್ ಓವರ್ ವರೆಗೂ ಸಾಗಿತು. ಬೆನ್ ಸ್ಟೋಕ್ಸ್ ಫೈನಲ್ ಪಂದ್ಯದ ಒತ್ತಡವನ್ನು ಮೆಟ್ಟಿನಿಂತು ತಂಡಕ್ಕೆ ವಿಶ್ವ ಚಾಂಪಿಯನ್ ಕಿರೀ ತೊಡಿಸಿದ್ದರು. ಇದಲ್ಲದೆ, 2016 ರಲ್ಲಿ, ಕೇಪ್ ಟೌನ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 258 ರನ್ ಗಳಿಸುವ ಮೂಲಕ ಅವರು ತಮ್ಮ ಟೆಸ್ಟ್ ವೃತ್ತಿಜೀವನದ ಅತ್ಯಧಿಕ ಸ್ಕೋರ್ ಬಾರಿಸಿದ್ದರು. ಅವರು ತಮ್ಮ ನಾಯಕತ್ವದಲ್ಲಿ ಇಂಗ್ಲೆಂಡ್‌ಗೆ ಕೆಲವು ಸ್ಮರಣೀಯ ವಿಜಯಗಳನ್ನು ತಂದುಕೊಟ್ಟಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications