Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ದ.ಆಫ್ರಿಕಾಕ್ಕೆ ಬಂದಿಳಿದ ಸ್ಟೋಕ್ಸ್‌ಗೆ ಭಿನ್ನ ಸ್ವಾಗತ: ತಮಾಷೆಯ ವಿಡಿಯೋ

Ben Stokes undergoes COVID-19 Test on arrival in South Africa

ಕೇಪ್‌ಟೌನ್: ನಿಯಮಿತ ಓವರ್‌ಗಳ ಸರಣಿಗಾಗಿ ಇಂಗ್ಲೆಂಡ್ ಕ್ರಿಕೆಟ್ ತಂಡ ದಕ್ಷಿಣ ಆಫ್ರಿಕಾಕ್ಕೆ ಬಂದಿಳಿದಿದೆ. ಆಫ್ರಿಕಾ ತಲುಪಿರುವ ಇಂಗ್ಲೆಂಡ್‌ ಆಟಗಾರರಿಗೆ ವಿಭಿನ್ನ ಸ್ವಾಗತ ಲಭಿಸಿದೆ. ಇದು ವಿಭಿನ್ನ ಸ್ವಾಗತ ಅನ್ನುವುದಕ್ಕಿಂತ ಕೊರೊನಾ ಕಾಟವಿರುವ ಈ ದಿನಗಳಲ್ಲಿ ದೊರೆಯುವ ಸಾಮಾನ್ಯ ಸ್ವಾಗತ ಅನ್ನಬಹುದೇನೋ.

ದಕ್ಷಿಣ ಆಫ್ರಿಕಾಕ್ಕೆ ಬಂದಿರುವ ಇಂಗ್ಲೆಂಡ್ ತಂಡ ಬಯೋ ಬಬಲ್‌ಗೆ ಹೋಗುವ ಮುನ್ನ ಕೋವಿಡ್-19 ಪರೀಕ್ಷೆ ನಡೆಸಿದೆ. ಈ ವೇಳೆ ಬೆನ್ ಸ್ಟೋಕ್ಸ್‌ ನಡೆಸಿರುವ ಪರೀಕ್ಷೆಯ ವಿಡಿಯೋ ತಮಾಷೆಯಾಗಿದೆ. ಇಂಗ್ಲೆಂಡ್ ಕ್ರಿಕೆಟ್ ಅಧಿಕೃತ ಟ್ವಿಟರ್ ಖಾತೆ ಈ ವಿಡಿಯೋವನ್ನು ಹಾಕಿಕೊಂಡಿದೆ.

ಟ್ವೀಟ್‌ನಲ್ಲಿ, 'ದಕ್ಷಿಣ ಆಫ್ರಿಕಾಕ್ಕೆ ಬಂದಿಳಿದಿದ್ದೇವೆ. ಸಾಮಾನ್ಯವಾಗಿರುವ ಬೆಸ್ ಸ್ಟೋಕ್ಸ್‌ಗೆ ವಿಭಿನ್ನ ಸ್ವಾಗತ' ಅಂತ ಬರೆಯಲಾಗಿದೆಯಲ್ಲದೆ ಜೊತೆಗೊಂದು ಹಲ್ಲು ಕಿಸಿಯುವ ಇಮೋಜಿಯನ್ನು ಸೇರಿಸಿಕೊಳ್ಳಲಾಗಿದೆ. ವಿಡಿಯೋದಲ್ಲಿ ಮೂಗಿಗೆ ಪರೀಕ್ಷಾ ಉಪಕರಣ ಹಾಕುತ್ತಲೇ ಸ್ಟೋಕ್ಸ್ ತಡೆಯಲಾರದೆ ನಕ್ಕುಬಿಡುವ ದೃಶ್ಯವಿದೆ.

ದಕ್ಷಿಣ ಆಫ್ರಿಕಾದಲ್ಲಿ ಇಂಗ್ಲೆಂಡ್ ಆಟಗಾರರಿಗೆ 10 ದಿನಗಳ ಕ್ವಾರಂಟೈನ್ ವಿಧಿಸಲಾಗಿದೆ. ನವೆಂಬರ್ 27ರಿಂದ ಡಿಸೆಂಬರ್ 1ರ ವರೆಗೆ ನಡೆಯಲಿರುವ ಇಂಗ್ಲೆಂಡ್-ದಕ್ಷಿಣ ಆಫ್ರಿಕಾ ಮೂರು ಪಂದ್ಯಗಳ ಟಿ20 ಸರಣಿ ಬಳಿಕ ಸ್ಟೋಕ್ಸ್ ಮತ್ತು ವೇಗಿ ಜೋಫ್ರಾ ಆರ್ಚರ್ ದಕ್ಷಿಣ ಆಫ್ರಿಕಾದಿಂದ ತವರಿಗೆ ಹೊರಡಲಿದ್ದಾರೆ. ಇಬ್ಬರೂ 3 ಪಂದ್ಯಗಳ ಏಕದಿನ ಸರಣಿ ಮಿಸ್ ಮಾಡಿಕೊಳ್ಳಲಿದ್ದಾರೆ.

Story first published: Tuesday, November 17, 2020, 22:01 [IST]
Other articles published on Nov 17, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+